ಮಂಡ್ಯ: ಮಳೆಗಾಗಿ ಅಪ್ರಾಪ್ತರಿಗೆ ಮದುವೆ ಮಾಡಿಸಿದ್ರು- ಕಾಕತಾಳೀಯವಾಗಿ ಮಳೆಯೂ ಬಂತು!

Public TV
1 Min Read
mnd child marriage 1

ಮಂಡ್ಯ: ಬರದಿಂದ ತತ್ತರಿಸಿರುವ ಮಂಡ್ಯ ಜಿಲ್ಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಚಿತ್ರ ಆಚರಣೆಗಳು ನಡೆಯುತ್ತಿದ್ದು, ಇದೀಗ ಅಪ್ರಾಪ್ತ ಮಕ್ಕಳಿಬ್ಬರಿಗೆ ಅಣುಕು ಮದುವೆ ಮಾಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

mnd child marriage 5

ಕೆ.ಆರ್.ಪೇಟೆ ತಾಲೂಕಿನ ಗ್ರಾಮವೊಂದ್ರಲ್ಲಿ ಈ ರೀತಿಯ ಆಚರಣೆ ನಡೆದಿದ್ದು, ಗ್ರಾಮಸ್ಥರೇ ಸೇರಿಕೊಂಡು ಮಾಡಿರುವ ಆಚರಣೆಗೆ ಚಂದಮಾಮನ ಮದುವೆ ಅಂತಾ ಕರೆಯಲಾಗುತ್ತೆ. ಸತತವಾಗಿ ಮಳೆಯಾಗದೇ ಇರೋದ್ರಿಂದ ಬೇಸತ್ತಿದ್ದ ಜನರು ಈ ರೀತಿಯ ಪದ್ಧತಿ ಅನುಸರಿಸಿದ್ದಾರೆ.

mnd child marriage 2

ಕಳೆದೊಂದು ವಾರದಿಂದ ಈ ಅಣುಕು ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಂಗಳವಾರ ರಾತ್ರಿ ಮಾಮೂಲಿ ಮದುವೆಯಲ್ಲಿ ಮಾಡುವಂತೆ ಸಂಪ್ರದಾಯದಂತೆ ಈ ಅಣುಕು ಮದುವೆ ಮಾಡಲಾಗಿದೆ. ವಿವಿಧ ಶಾಸ್ತ್ರ, ಹಾರ ಬದಲಾವಣೆ, ಕನ್ಯಾದಾನ, ಆರತಿ ಪೂಜೆ, ರೊಟ್ಟಿಯಲ್ಲಿ ಚಿತ್ರ ಬರೆಯೋದು ಸೇರಿದಂತೆ ಅನೇಕ ಆಚರಣೆ ಮಾಡಲಾಗಿದೆ.

mnd child marriage 3

ಈ ಅಣುಕು ಮದುವೆ ನಂತರ ಕಾಕತಾಳೀಯವಾಗಿ ಗ್ರಾಮದಲ್ಲಿ ಮಳೆ ಬಂದಿರೋದ್ರಿಂದ ಜನರ ನಂಬಿಕೆಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

mnd child marriage

mnd child marriage 8

mnd child marriage 7

mnd child marriage 7 1

mnd child marriage 6

Share This Article
Leave a Comment

Leave a Reply

Your email address will not be published. Required fields are marked *