Connect with us

Latest

ರಾಜಕೀಯದಲ್ಲಿ ಪ್ರಖ್ಯಾತಿ ಪಡೆಯೋಕೆ ಕೆಲವರು ಗೋತ್ರ, ಜನಿವಾರ ತೋರಿಸ್ತಿದ್ದಾರೆ: ಯೋಗಿ ಆದಿತ್ಯನಾಥ್

Published

on

-ಪರೋಕ್ಷವಾಗಿ ರಾಹುಲ್ ಗಾಂಧಿಗೆ ಕುಟುಕಿದ ಯೋಗಿ

ಲಕ್ನೋ: ರಾಜಕೀಯದಲ್ಲಿ ಪ್ರಖ್ಯಾತಿ ಹೊಂದಲು ಕೆಲವರು ತಮ್ಮ ಗೋತ್ರ ಹಾಗೂ ಜನಿವಾರವನ್ನು ತೋರಿಸುತ್ತಿದ್ದಾರೆಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕುಟುಕಿದ್ದಾರೆ.

ಉತ್ತರಪ್ರದೇಶದ ಫೈಜಾಬಾದ್ ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಯಾರು ತಮ್ಮನ್ನು ತಾವು ಆಕಸ್ಮಿಕ ಹಿಂದೂಗಳೆಂದು ಹೇಳಿಕೊಂಡಿದ್ದಾರೋ, ಅವರೇ ಈಗ ನಿಜವಾದ ಹಿಂದೂಗಳಾಗುತ್ತಿದ್ದಾರೆ. ಈಗಲಾದರೂ ಹಿಂದುತ್ವ ಏನು ಎಂಬುದು ಕೆಲವರಿಗೆ ಅರ್ಥವಾಗಿದೆ. ಇದು ಸನಾತನ ನಂಬಿಕೆಯ ಗೆಲುವು ಎಂದು ಹೇಳಿದ್ದಾರೆ.

ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿರುವ ರಾಮಾಯಣದ ಎದುರು ಖ್ಯಾತ ಸರ್ಚ್ ಎಂಜಿನ್ ಗೂಗಲ್ ಕೂಡ ವಿಫಲ. ಗೂಗಲ್ ನಲ್ಲಿ ಹೇಳುವುದಕ್ಕಿಂತ ಧಾರ್ಮಿಕ ಗ್ರಂಥಗಳಲ್ಲಿ ಜ್ಞಾನ ದೊಡ್ಡದಾಗಿದೆ. ಯಾವೊಬ್ಬ ಆಕಸ್ಮಿಕ ಹಿಂದೂಗಳೆಂದು ಹೇಳಿಕೊಂಡಿದ್ದರೋ, ಅವರೇ ಈಗ ರಾಜಕೀಯದಲ್ಲಿ ಪ್ರಾಮುಖ್ಯತೆಯನ್ನು ಪಡೆಯಲು ಗೋತ್ರ, ಜನಿವಾರ ತೋರಿಸಲು ಪ್ರಾರಂಭಿಸಿದ್ದಾರೆಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆಯುವ ಕುಂಭ ಮೇಳದಲ್ಲಿ ಎಲ್ಲಾ ಜಾತಿಯವರೂ ಪಾಲ್ಗೊಳ್ಳುತ್ತಾರೆ. ಇದು ಧಾರ್ಮಿಕ ಭಾವೈಕ್ಯತೆಯ ಸಂಕೇತವಾಗಿದೆ. ವೇದಗಳಲ್ಲಿ ಹಲವು ಭಾಗಗಳನ್ನು ದಲಿತ ಋಷಿಗಳೇ ರಚಿಸಿದ್ದಾರೆ. ವಾಲ್ಮೀಕಿ ಮಹರ್ಷಿಗಳು ರಾಮನನ್ನು ಸಂದರ್ಶಿಸಿದ ಸಂತರಾಗಿದ್ದಾರೆ. ಆದರೆ ಈ ಸಮುದಾಯದವರು ತಾರತಮ್ಯವನ್ನು ಎದುರಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *