ಚೆನ್ನೈ: ನನ್ನನ್ನು ನಿಜವಾದ ತಮಿಳಿಗನಾಗಿ ರೂಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.
4ನೇ ದಿನದ ಸಂವಾದದಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ಅವರು, ನನಗೆ ಈಗ 67 ವರ್ಷ, ನಾನು 23 ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿದ್ದೆ. 43 ವರ್ಷಗಳ ಕಾಲ ತಮಿಳುನಾಡಿನಲ್ಲಿ ನಾನು ನೆಲೆಸಿದ್ದೇನೆ. ನಿಮ್ಮ ಜೊತೆಯಲ್ಲೇ ಈಗ ಬೆಳೆದಿದ್ದೇನೆ. ನೀವು ನನ್ನನ್ನು ಸ್ವಾಗತಿಸಿ ನಿಜವಾದ ತಮಿಳಿಗನಾಗಿ ಬೆಳೆಸಿದ್ದೀರಿ. ಜಗತ್ತಿನಲ್ಲಿ ನಾನು ಎಲ್ಲಿಯಾದರೂ ನೆಲೆ ನಿಲ್ಲುವುದೇ ಆದರೆ ಅದು ತಮಿಳುನಾಡಿನಲ್ಲಿ ಮಾತ್ರ ಎಂದು ಅವರು ಈ ವೇಳೆ ತಿಳಿಸಿದರು.
Advertisement
ಒಂದು ವರ್ಷದ ಹಿಂದೆ ಶರತ್ ಕುಮಾರ್ ಅವರು ರಜನೀಕಾಂತ್ ಅವರನ್ನು ಹೊರಗಿನ ವ್ಯಕ್ತಿ. ಕರ್ನಾಟಕದ ಇವರು ಕೆಲಸಕ್ಕಾಗಿ ತಮಿಳುನಾಡಿಗೆ ಬಂದಿದ್ದಾರೆ ಎಂದು ಹೇಳಿದ್ದಕ್ಕೆ ಇಂದು ರಜನೀಕಾಂತ್ ಸಂವಾದಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
Advertisement
ಈ ಸಂವಾದ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದ ಎಲ್ಲ ಪೊಲೀಸ್ ಮತ್ತು ಅಧಿಕಾರಿಗಳಿಗೆ ಧನ್ಯವಾದಗಳು. ಹಲವು ವರ್ಷಗಳಿಂದ ನನ್ನನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ಎಂದು ರಜನೀಕಾಂತ್ ಹೇಳಿದರು.
Advertisement
ರಜನಿ ದರ್ಬಾರ್ ಕಾರ್ಯಕ್ರಮ ಮೇ 15ರಿಂದ ಆರಂಭಗೊಂಡಿತ್ತು. 9 ವರ್ಷಗಳ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರ ಆಯ್ದ ಅಭಿಮಾನಿ ಸಂಘಗಳ ಸದಸ್ಯರಿಗೆ ಮಾತ್ರ ಈ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.
Advertisement
ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ? ಅಭಿಮಾನಿಗಳ ಪ್ರಶ್ನೆಗೆ ರಜನೀಕಾಂತ್ ಉತ್ತರಿಸಿದ್ದು ಹೀಗೆ
ಇದನ್ನೂ ಓದಿ: ರಾಜಮೌಳಿ ದೇವರು ಕೊಟ್ಟ ಮಗು: ಬಾಹುಬಲಿಗೆ ಗಣ್ಯರ ವಿಮರ್ಶೆ ಹೀಗಿದೆ ನೋಡಿ
I lived in Karnataka for 23 years & Tamil Nadu for 43 years, Although I am from K'taka, you welcomed me, made me true Tamilian: Rajinikanth pic.twitter.com/T6gqHTWVXZ
— ANI (@ANI_news) May 19, 2017
Many ask me if I’m Tamilian. I've lived in Tamil Nadu for over 40 years, I’m pure Tamilian … you all have made me a #Tamilian: #Rajinikanth pic.twitter.com/124f7hnybi
— NDTV (@ndtv) May 19, 2017