ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಒಂದು ತಿಂಗಳಿಂದ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇಂದು ಆ ದಿನ ಬಂದಿದ್ದು, ಸಿದ್ದರಾಮಯ್ಯ ಅವರು 75ನೇ ಹರೆಯಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಅವರ ಹುಟ್ಟುಹಬ್ಬಕ್ಕೆ ಅದ್ಧೂರಿಯಾಗಿ ವೇದಿಕೆ ಸಿದ್ಧವಾಗಿದ್ದು, ‘ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದೆ.
Advertisement
ಸಿದ್ದರಾಮೋತ್ಸವಕ್ಕೆ ಮುಖ್ಯ ವೇದಿಕೆ ಅದ್ಧೂರಿಯಾಗಿ ಸಿದ್ಧವಾಗಿತ್ತು. ಮುಖ್ಯ ವೇದಿಕೆಯಲ್ಲಿ ಮೂರು ಬೃಹತ್ ಎಲ್‍ಇಡಿ ಪರದೆಗಳಿದ್ದು, ಇದರಲ್ಲಿ ಸಿದ್ದರಾಮಯ್ಯ, ವರಿಷ್ಠರ ಭಾವಚಿತ್ರ, ವೀಡಿಯೋಗಳ ಪ್ರದರ್ಶನ ಮಾಡಲಾಗುತ್ತಿದೆ. ಜನ ಕೂರಲು ಐದು ದೊಡ್ಡ ಪೆಂಡಾಲ್‍ಗಳ ನಿರ್ಮಾಣ ಮಾಡಲಾಗಿದ್ದು, ಐದು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದೆ. ಆದರೆ ಕುರ್ಚಿಗಳು ಸಾಲದಂತೆ ಸಿದ್ದರಾಮಯ್ಯ ಅಭಿಮಾನಿ ಬಳಗ ಬಂದಿದ್ದರು. ಅಲ್ಲದೇ ಮುಖ್ಯವೇದಿಕೆಯಲ್ಲಿ ರಾಹುಲ್ ಗಾಂಧಿ ಸೇರಿ 50 ಗಣ್ಯರು ಕೂರಲು ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದರಾಮೋತ್ಸವ : ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡು ರಿಲೀಸ್
Advertisement
Advertisement
ಹೌಸ್ ಫುಲ್
ಸಿದ್ದರಾಮೋತ್ಸವಕ್ಕೆ ಜನಸಾಗರ ಹರಿದು ಬಂದಿದ್ದು, ಸಿದ್ದರಾಮೋತ್ಸವದಲ್ಲಿ ಹೌಸ್ ಫುಲ್ ಆಗಿದೆ. ಐದು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಮೀರಿ ಅಭಿಮಾನಿಗಳು ಬಂದಿದ್ದು, ಕುರ್ಚಿಗಳು ಸಿಗದೇ ಸಹಸ್ರಾರು ಜನ ನಿಂತಿದ್ದಾರೆ. ಆಯೋಜನಕರ ಸಂಖ್ಯಾ ಲೆಕ್ಕಾಚಾರ ಮೀರಿ ಜನ ಬಂದಿದ್ದು, ಸುಮಾರು 7 ಲಕ್ಷ ಜನಕ್ಕೂ ಹೆಚ್ಚು ಬಂದಿರಬಹುದು ಎಂದು ಹೇಳಲಾಗುತ್ತಿದೆ.
Advertisement
ಸಂಗೀತ ಕಾರ್ಯಕ್ರಮ
‘ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದ್ದು, ಸಂಗೀತದ ಮೂಲಕವೇ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿಯಿತು. ಸಾಧುಕೋಕಿಲ ಮತ್ತು ತಂಡ ಭಾರೀ ಸಿದ್ದರಾಮಯ್ಯ ಅವರ ಅಭಿಮಾನಿಗಳನ್ನು ತಮ್ಮ ಸಂಗೀತದ ಮೂಲಕ ರಂಚಿಸಿದ್ದಾರೆ. ಹಂಸಲೇಖ, ಸಾಧುಕೋಕಿಲ, ಅನುರಾಧ ಭಟ್, ಹೇಮಂತ್ ಅವರಿಂದ ಸಂಗೀತದ ಮೂಲಕ ಮನರಂಜನೆ ನೀಡಿದ್ದಾರೆ.
ಅಭಿಮಾನಿಯಿಂದ ಸ್ಟೆಪ್ಸ್
ಅಭಿಮಾನಿಗಳು ಸಿದ್ದರಾಮಯ್ಯ ಕುರಿತು ಹಾಡು ಬರೆದಿದ್ದು, ಅದಕ್ಕೆ ಅಭಿಮಾನಿ ಸಖತ್ ಸ್ಟೆಪ್ಸ್ ಹಾಕಿದ್ದಾನೆ. ತಲೆವಸ್ತ್ರ ಕಟ್ಟಿಕೊಂಡು ಭರ್ಜರಿ ಡಾನ್ಸ್ ಮಾಡಿ ಹರ್ಷವನ್ನು ವ್ಯಕ್ತಪಡಿಸಿದ್ದಾನೆ. ಅಲ್ಲದೇ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳೆಲ್ಲ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ಸಿದ್ದರಾಮಯ್ಯ ಅವರ ಘೋಷಣೆಯನ್ನು ನಿರಂತರವಾಗಿ ಕೂಗುತ್ತ ಇದ್ದರು. ಇದನ್ನೂ ಓದಿ: 30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ
ಕಂಬಳಿ ಬಿಸಿ ಡ್ಯಾನ್ಸ್
ಸಿದ್ದರಾಮಯ್ಯ ಹಾಡಿಗೆ ಅಭಿಮಾನಿಗಳು ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ್ದು, ಸಂಭ್ರಮದಿಂದ ಕೇಕ್, ಚಪ್ಪಾಳೆ ಶಿಳ್ಳೆಯಿಂದ ಕುಣಿದು ಕುಪ್ಪಳಿಸಿದ್ದಾರೆ.
ಸಿದ್ದರಾಮೋತ್ಸವ ವೇದಿಕೆ ಮೇಲೆ ಸಿದ್ದರಾಮಯ್ಯ ಜೊತೆ ಮೊದಲ ಸಾಲಿನಲ್ಲಿ ಜಿ.ಪರಮೇಶ್ವರ್, ಜಮೀರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ರಮೇಶ್ ಕುಮಾರ್, ಕೆ.ಬಿ.ಕೋಳಿವಾಡ, ಕೆ.ಎನ್.ರಾಜಣ್ಣ ಆಸೀನ, ಎರಡನೇ, ಮೂರನೇ ಸಾಲಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ, ಯತೀಂದ್ರ, ನಾಸೀರ್ ಹುಸೇನ್, ಸುದರ್ಶನ್, ಬಿ.ಎಲ್.ಶಂಕರ್, ಭೀಮಾನಾಯಕ್ ಸೇರಿ ಹಲವರು ಆಸೀನರಾಗಿದ್ದಾರೆ. ವೇದಿಕೆಯ ಅಕ್ಕ-ಪಕ್ಕ ಶಾಸಕರು, ಪರಿಷತ್ ಸದಸ್ಯರು ಕುಳಿತು ಕೊಡಿದ್ದರು.