ಕೋಲ್ಕತ್ತಾ: ಇಂದು ಮಾಲ್ಡಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಜನರಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಯಿಲ್ಲದ ಕಾರಣ ಜನರು ರೊಚ್ಚಿಗೆದ್ದು, ಖುರ್ಚಿಗಾಗಿ ಬಡಿದಾಡಿಕೊಂಡ ದೃಶ್ಯ ಕಂಡುಬಂದಿದೆ.
ಸುಡುಬಿಸಿಲಿನಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಬಂದ ಜನರಿಗೆ ಸರಿಯಾಗಿ ಆಸನದ ವ್ಯವಸ್ಥೆ ಮಾಡಿರಲಿಲ್ಲ. ಆದರಿಂದ ಜನರಿಗೆ ಕುಳಿತುಕೊಳ್ಳಲು ಗೊಂದಲ ಸೃಷ್ಠಿಯಾಗಿದೆ. ಈ ವೇಳೆ ಕೆಲ ಕಾರ್ಯಕರ್ತರು ಸ್ಥಳೀಯ ನಾಯಕರು ಬಂದ ಕಾರಣಕ್ಕೆ, ಜನರು ಕೂತಿದ್ದ ಸ್ಥಳದಿಂದ ಆಸನಗಳನ್ನು ಸರಿಸಿ ಅವರಿಗೆ ಹೋಗಲು ದಾರಿ ಮಾಡಿದ್ದಾರೆ. ಆದರಿಂದ ಮೊದಲೇ ಕೂರಲು ಜಾಗವಿಲ್ಲದೆ ಗೊಂದಲದಲ್ಲಿದ್ದ ಜನರು ಪರಸ್ಥರ ಆಸನಕ್ಕಾಗಿ ಕಿತ್ತಾಡಲು ಶುರು ಮಾಡಿದ್ದಾರೆ.
ಅಲ್ಲದೇ ಕಾರ್ಯಕ್ರಮ ಆಯೋಜಕರು ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಜನರು ಘೋಷಣೆಗಳನ್ನು ಕೂಗಿದ್ದಾರೆ. ಹಾಗೆಯೇ ಸರಿಯಾಗಿ ಕಾರ್ಯಕ್ರಮಕ್ಕೆ ಬರುವ ಜನರಿಗೆ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಖುರ್ಚಿಗಳನ್ನು ವಿಐಪಿಗಳಿಗೆ ಕೂರಲು ವ್ಯವಸ್ಥೆ ಮಾಡಿದ್ದ ಆಸನಗಳ ಮೇಲೆ ಎಸೆದು, ಖುರ್ಚಿಗಳನ್ನು ಮುರಿದು ಆಕ್ರೋಶ ಹೊರಹಾಕಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರಿಂದಲೂ ಜನರನ್ನು ತಡೆಯಲು ಸಾಧ್ಯವಾಗಿಲ್ಲ. ಬಳಿಕ ಜನರ ಮನವೋಲಿಸಿ ಪರಿಸ್ಥಿತಿಯನ್ನು ಸ್ಥಳೀಯ ನಾಯಕರು ಹಾಗೂ ಪೊಲೀಸರು ಜೊತೆಗೂಡಿ ನಿಯಂತ್ರಿಸಿದರು. ಈ ಘಟನೆ ನಡೆದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸ್ಥಳದಲ್ಲಿ ಉಪಸ್ಥಿತರಿರಲಿಲ್ಲ.