ಬೆಂಗಳೂರು: ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕಿಲ್ಲರ್ ಡಿ ಗ್ಯಾಂಗ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನದ ಜೊತೆಗೆ 144 ಸೆಕ್ಷನ್ ಕೂಡ ಹಾಕಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
Advertisement
ದರ್ಶನ್ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ (Annapoorneshwari Police Station) ಬಳಿ 144 ಸೆಕ್ಷನ್ ಹಾಕಿದ್ದರಿಂದ ಗುರುವಾರ ರಾತ್ರಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಪೊಲೀಸರ ಈ ನಡೆಯಿಂದ ಮರ್ಡರ್ ಆರೋಪಿಗಳಿಗೆ ಠಾಣೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು- ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ!
Advertisement
Advertisement
ರಸ್ತೆ ನಿರ್ಬಂಧ ಮಾಡಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ಸಂಚರಿಸಲು ವಾಹನ ಸವಾರರು ಪರದಾಡಬೇಕಾಯಿತು. ಪೊಲೀಸರ ಈ ನಡೆಗೆ ವಾಹನ ಸವಾರರ ಆಕ್ರೋಶ ಭುಗಿಲೆದ್ದಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ 8ನೇ ಆರೋಪಿ ಶರಣಾಗತಿ – ದರ್ಶನ್‌ಗೆ ಕಾರು ಕೊಟ್ಟಿದ್ದವರಿಗೂ ಸಂಕಷ್ಟ!
Advertisement
ಯಾರೋ ಒಬ್ಬರಿಗೊಸ್ಕರ ರೋಡ್ ಕ್ಲೋಸ್ ಮಾಡೋದು ಸರಿ ಅಲ್ಲ. ಇದು ಪೊಲೀಸ್ ಸ್ಟೇಷನಾ..? ಇಲ್ಲ ಮದುವೆ ಮನೆನಾ..?. ಪಕ್ಕದಲ್ಲಿ ಕಂದಾಯ ಭವನ ಇದೆ.. ಅಲ್ಲಿ ಮದುವೆ ಆಗುತ್ತೆ. ಠಾನೆಯಲ್ಲಿ ಪೆಂಡಾಲ್ ಹಾಕಿದ್ದಾರೆ. ಇಲ್ಲಿ ಬಹುಶಃ ಬಿಗರೂಟ ಅನ್ಸತ್ತೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣ ಸಂಬಂಧ ಸ್ಯಾಂಡಲ್‍ವುಡ್ ಸ್ಟಾರ್ ನಟ ದರ್ಶನ್ (Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ 14 ಮಂದಿ ಆರೋಪಿಗಳು ಅನ್ನಪೂಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದಾರೆ. ಸದ್ಯ ಆರೋಪಿಗಳು ಯಾರಿಗೂ ಕಾಣದಿರುವಂತೆ ಠಾಣೆಯ ಆವರಣದ ಗೋಡೆಗೆ ಪೊಲೀಸರು ಶಾಮಿಯಾನ ಹಾಕಿದ್ದಾರೆ. ಅಲ್ಲದೇ ಠಾಣೆಯ ಬಳಿ 144 ಸೆಕ್ಷನ್ ಕೂಡ ಜಾರಿಗೊಳಿಸಿದ್ದಾರೆ. ಇದರ ಜೊತೆಗೆ ಸಾರ್ವಜನಿಕರ ದೂರುಗಳನ್ನು ಕೂಡ ಪೊಲೀಸರು ಸ್ವೀಕರಿಸದೇ ಇರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.