ರಾಮನಗರ: ನನ್ನನ್ನು ಸೋಲಿಸಬೇಕು ಎಂದು ನಿರ್ದೇಶಕ, ನಿರ್ಮಾಪಕ, ಚಿತ್ರಕತೆ ಬರೆಯುವವರು, ನಟ, ಬಂಡವಾಳ ಹೂಡಿಕೆ ಮಾಡುವವರು ಎಲ್ಲಾ ಒಂದಾಗಿದ್ದಾರಂತೆ. ಸಿನಿಮಾದಲ್ಲಿ ರೀಲ್ ಬಿಟ್ಟಂತೆ ಇಲ್ಲಿ ಬಿಟ್ಟರೇ ಜನ ಒಪ್ಪುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ (DK Suresh) ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೆ (Lok Sabha Election) ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರು ಒಂದಾಗಿ ನನ್ನನ್ನು ಸೋಲಿಸುತ್ತಾರಂತೆ. ಯಾಕೆ ನನ್ನನ್ನು ಸೋಲಿಸುತ್ತೀರಾ? ಬಡವರ ಪರವಾಗಿ, ರೈತರ ಪರವಾಗಿ, ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದಕ್ಕಾ? ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಸೋಲಿಸಲು ಹೊರಟಿದ್ದೀರಾ? ಅವರಿಗೆ ನಿಜ ಜೀವನಕ್ಕೂ, ಸಿನಿಮಾಗೂ ವ್ಯತ್ಯಾಸ ಗೊತ್ತಿಲ್ಲ. ನಿಜ ಜೀವನದಲ್ಲಿ ಸೋಲಿಸಬೇಕೇ ಹೊರತು ಸಿನಿಮಾದಲ್ಲಿ ಅಲ್ಲ. ನೀವು ಬಿಟ್ಟಿರುವ ಎಲ್ಲಾ ರೀಲುಗಳು ಡಬ್ಬ ಸೇರಿಕೊಂಡಿವೆ. ಡಿಕೆ ಶಿವಕುಮಾರ್ (DK Shivakumar) ಕಾಲಿಗೆ ಬೀಳಲು ಬಂದಿದ್ದರು ಎಂದು ಯಾರೋ ಹೇಳುತ್ತಿದ್ದರು. ಇದೇ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದು ಶಾಸಕರಾಗಲು ಭಿಕ್ಷೆ ಬೇಡಿದವರು, ಆಸ್ತಿ ಉಳಿಸಿಕೊಂಡವರು ಯಾರು ಎಂದು ಈ ಕ್ಷೇತ್ರದ ಜನ ನೋಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಸಿಪಿ ಯೋಗೇಶ್ವರ್‌ಗೆ ಟಾಂಗ್ ನೀಡಿದರು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿ 4 ದಿನ ವಿಸ್ತರಣೆ
Advertisement
Advertisement
ಮುಂದಿನ ಮೂವತ್ತು ದಿನಗಳ ಕಾಲ ಯಾರು, ಯಾರು ಏನು ಮಾತನಾಡುತ್ತಾರೆ ಎಂಬುದನ್ನು ನಾವು, ನೀವು ಕೇಳಬೇಕಾಗಿದೆ. ಅದಕ್ಕೆ ಉತ್ತರ ಕೊಡುವ ಕಾಲ ಮುಂದಿದೆ. ಕಣ್ಣೀರು ಹಾಕುವವರಿಗೆ ಈ ಚುನಾವಣೆ ಒಂದು ಕರ್ಮಭೂಮಿ. ಇನ್ನೊಂದು ಚುನಾವಣೆಗೆ ಮತ್ತೊಂದು ಕರ್ಮಭೂಮಿ. ಯಾವ, ಯಾವ ಕರ್ಮಭೂಮಿಯಲ್ಲಿ ಏನೇನು ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ. ನಾವು ಮುಂದಿನ 4 ವರ್ಷಗಳ ಕಾಲ ರಾಜ್ಯದ ಜನರ ಕಷ್ಟಗಳನ್ನು ಪರಿಹರಿಸಲು ಬದ್ಧರಾಗಿದ್ದೇವೆ. ಸುಳ್ಳಿನ ಗ್ಯಾರಂಟಿಗಳನ್ನು ಹೊತ್ತುಕೊಂಡು ಬಿಜೆಪಿಯವರು ಮತ ಕೇಳಲು ಬರುತ್ತಿದ್ದಾರೆ. ಸುಳ್ಳು ಹೇಳುವವರ ಜೊತೆ ಕಣ್ಣೀರು ಹಾಕುವವರು ಸೇರಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ (Congress) ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದರು. ಇದನ್ನೂ ಓದಿ: ರಾಜಕೀಯವಾಗಿ ಜೆಡಿಎಸ್-ಬಿಜೆಪಿ ಮುಖಂಡರು ಪರಸ್ಪರರ ಮೇಲೆ ಹಾಕಿರುವ ಕೇಸ್ ಹಿಂಪಡೆಯಲು ನಿರ್ಧಾರ
Advertisement
Advertisement
ಚುನಾವಣೆಗಳು, ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಯಾರು ಸುಳ್ಳು ಹೇಳುತ್ತಾರೆ, ಯಾರು ಸತ್ಯವನ್ನು ಹೇಳುತ್ತಾರೆ, ಸತ್ಯದಿಂದ ನಡೆದುಕೊಳ್ಳುತ್ತಾರೆ ಎನ್ನುವುದು ಈ ಚುನಾವಣೆಯ ಪ್ರಸ್ತುತ ವಿಚಾರ. ಈ ಚುನಾವಣೆ ಮಾಧ್ಯಮದವರಿಗೆ ಹೊಸದಾಗಿ ಕಾಣಿಸುತ್ತಿದೆ. ಆದರೆ ನಮ್ಮ ರೈತರು, ಬಡವರು, ಹಿಂದುಳಿದವರಿಗೆ, ಮಹಿಳೆಯರಿಗೆ, ಯುವಕರಿಗೆ ಈ ಚುನಾವಣೆ ಹೊಸದಲ್ಲ. ಇಂದು ಇತಿಹಾಸ ಬದಲಾಗಿದೆ. ಐದು ಗ್ಯಾರಂಟಿಗಳನ್ನು ರಾಜ್ಯದ ಎಲ್ಲಾ ಜನರಿಗೆ ನೀಡಿದ್ದೇವೆ. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಿಗೆ ಮತಹಾಕಿದ ಜನರಿಗೂ ನಮ್ಮ ಗ್ಯಾರಂಟಿಗಳು ತಲುಪುತ್ತಿವೆ. ಎಲ್ಲರ ಮನೆಯಲ್ಲಿ ವಿದ್ಯುತ್ ದೀಪ ಉರಿಯುತ್ತಿದೆ. ಗೃಹಲಕ್ಷ್ಮಿ ತಲುಪುತ್ತಿದೆ. ಅಕ್ಕಿ, ಹಣ, ಯುವನಿಧಿ ತಲುಪುತ್ತಿದೆ. ಇವು ಮೋದಿ ಗ್ಯಾರಂಟಿಯಿಂದಾಗಿಲ್ಲ. ಕಾಂಗ್ರೆಸ್ ಗ್ಯಾರಂಟಿಯಿಂದ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಡಿಕೆ ಸುರೇಶ್ ಬರೋಬ್ಬರಿ 593 ಕೋಟಿ ರೂ. ಆಸ್ತಿಗೆ ಒಡೆಯ!
ಮೋದಿ ಗ್ಯಾರಂಟಿ ಎಂದರೆ ಕೇವಲ ಸುಳ್ಳು. ನಿರುದ್ಯೋಗಿ ಯುವಕರನ್ನು ಪಕೋಡ ಮಾರಲು ಹೇಳಿದ ಸುಳ್ಳು. ನಮ್ಮ ತಾಯಂದಿರಿಗೆ ಗ್ಯಾಸ್ ಸಿಲಿಂಡರ್ ಅನ್ನು ಪೂಜೆ ಮಾಡಿ ಎಂದು ಹೇಳಿದ ಸುಳ್ಳು. ಜಿಎಸ್ಟಿ ತೆಗೆಯುತ್ತೇನೆ ಎಂದು ಹೇಳಿದ ಸುಳ್ಳು. ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಗಳು ಸುಳ್ಳು ಎಂದು ಬಿಂಬಿಸಲು ಪ್ರಯತ್ನ ಮಾಡಿದರು. ನೀವು ಕಮಿಷನ್ ಪಡೆಯುವ ಹಣದಲ್ಲೇ ನಾವು ಗ್ಯಾರಂಟಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು. ಇದನ್ನೂ ಓದಿ: ಇವಿಎಂ ಯಂತ್ರದಿಂದ ಮೋದಿ ಚುನಾವಣೆ ಗೆಲ್ಲುತ್ತಿದ್ದಾರೆ: ಸಿ.ಎಂ ಇಬ್ರಾಹಿಂ
ಕಳೆದ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಅನೇಕ ಭಾಗ್ಯಗಳನ್ನು ಕೊಟ್ಟು ಕರ್ನಾಟಕದಲ್ಲಿ ಬದಲಾವಣೆ ತಂದರು. ಹಸಿದವರ, ರೈತರ ಕಷ್ಟಗಳನ್ನು ಅರಿತು ಕೆಲಸ ಮಾಡಿದರು. ನಂತರ ಬಂದಂತಹ ಬಿಜೆಪಿ ಸರ್ಕಾರ 40% ಕಮಿಷನ್‌ಗಾಗಿ ಈ ರಾಜ್ಯವನ್ನು ದಿವಾಳಿ ಮಾಡಿದರು. ವಿರೋಧ ಪಕ್ಷದಲ್ಲಿ ಇದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಾಜ್ಯದಾದ್ಯಂತ ಪ್ರವಾಸ ಮಾಡಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಇಕ್ಬಾಲ್ ಅವರನ್ನು ಗೆಲ್ಲಿಸಲು ಗ್ಯಾರಂಟಿ ಸುಳ್ಳು ಹೇಳುತ್ತಿದ್ದಾರೆ. ಕುಸುಮ ಅವರನ್ನು, ಡಾ.ರಂಗನಾಥ್ ಅವರನ್ನು ಗೆಲ್ಲಿಸಿದರೆ ಏನು ಸಿಗುವುದಿಲ್ಲ ಎಂದರು. ಎಲ್ಲಿದೆ ಹಣ? ಎಂದು ಕೇಳಿದರು. ಆದರೆ ಇಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಈ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದೆ ಎಂದರು. ಇದನ್ನೂ ಓದಿ: ರಂಗೇರಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬೃಹತ್ ಮೆರವಣಿಗೆ ಮೂಲಕ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ