ಮಂಡ್ಯ: ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ ಎಂದು ಸಚಿವ ಪುಟ್ಟರಾಜು ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಇಂದು ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜನರು ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ವೋಟ್ ಹಾಕುವುದಿಲ್ಲ. ಹಾಗಿದ್ದರೆ ಮೋದಿ ಏಕೆ ಬೀದಿ ಬೀದಿ ಸುತ್ತಬೇಕಿತ್ತು ಎಂದು ಹೇಳುವ ಮೂಲಕ ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.
Advertisement
ಮಂಡ್ಯದಲ್ಲಿ ನಾವು- ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ನಾವೇ ಈಗ ಒಂದಾಗಿದ್ದೇವೆ. ಆದರೆ ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ. ಅವರು ಮಂಡ್ಯದಲ್ಲಿ ಅಭ್ಯರ್ಥಿ ಹಾಕೋದಿಲ್ಲ. ಸ್ವಾಭಿಮಾನವಿರುವ ಮಂಡ್ಯ ಜನ ಬೇರೆಯವರ ಕೈಯಲ್ಲಿ ಹೇಳಿಸಿಕೊಳ್ಳಲ್ಲ ಎಂದರು.
Advertisement
Advertisement
ಸುಮಲತಾ ಸ್ಪರ್ಧೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬುದು ಶುದ್ಧ ಸುಳ್ಳು. ಏಕೆಂದರೆ ಅಭಿವೃದ್ಧಿಯೇ ನಮ್ಮ ಅಜೆಂಡಾ. ನಾಮಪತ್ರ ಸಲ್ಲಿಕೆಯಾದ ಮೇಲೆ ತಂತ್ರಗಾರಿಕೆ ಗೊತ್ತಾಗುತ್ತದೆ. ಮಂಡ್ಯ ಜಿಲ್ಲೆಯ ಜನರಿಗೆ ಸ್ವಾಭಿಮಾನದ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ನಾನು ಮಲಗಿಕೊಳ್ಳೋದು ಚಿನಕುರಳಿಯಲ್ಲಿ, ಬೆಳಗ್ಗೆ ಎದ್ದು ಗದ್ದೆಗೆ ನೀರು ಕಟ್ಟಿ ಅಲ್ಲಿಯೇ ವಾಕ್ ಮಾಡಿ ಬರುತ್ತೇನೆ. ಇದು ಸ್ವಾಭಿಮಾನ ಅಲ್ಲವೆ ಎಂದು ಪುಟ್ಟರಾಜು ಹೇಳಿದ್ದಾರೆ.
Advertisement
ಈ ಮೂಲಕ ಸುಮಲತಾ ಅವರು ಬೆಂಗಳೂರಿನಲ್ಲಿ ಇದ್ದುಕೊಂಡು ಸ್ವಾಭಿಮಾನದ ಬಗ್ಗೆ ಮಾತನಾಡುವುದಕ್ಕೆ ಪರೋಕ್ಷವಾಗಿ ಕೆದಕಿದ್ದಾರೆ.