– ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗಾಗಿಯೆ ಎಂದ ಹೆಚ್‌ಸಿ ಬಾಲಕೃಷ್ಣ
ಬೆಂಗಳೂರು: ನಾವು ಗ್ಯಾರಂಟಿ (Guarantee Scheme) ಕೊಟ್ಟಿದ್ದು ಚುನಾವಣೆಗಾಗಿಯೇ. ಲೋಕಸಭೆಯಲ್ಲಿ (Lok Sabha Election) ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.
Advertisement
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷ ಸೋತರೆ ಗ್ಯಾರಂಟಿಗಳು ರದ್ದಾಗಬಹುದು ಎಂಬ ಬಾಲಕೃಷ್ಣ ಅವರ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಬದಲು ಅಭಿವೃದ್ಧಿಗೆ ಹಣ ಬಳಸಲಿ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ನಾವು ಗ್ಯಾರಂಟಿ ಕೊಟ್ಟಿರೋದೇ ಚುನಾವಣೆ ಗೆಲ್ಲೋಕೆ. ಅವರು ದೇವಸ್ಥಾನ ಉದ್ಘಾಟನೆ ಮಾಡಿದ್ದು, ಮಂತ್ರಾಕ್ಷತೆ ಕೊಟ್ಟಿದ್ದು ಚುನಾವಣೆ ಗೆಲ್ಲೋಕೆ. ಬಿಜೆಪಿಯವರು (BJP) ಲೋಕಸಭೆ ಚುನಾವಣೆ ದೃಷ್ಟಿಯಿಂದ ದೇವಸ್ಥಾನ ಉದ್ಘಾಟನೆ ಮಾಡಿದರು. ನಮ್ಮ ದೀಪ ನಾವೆ ಹಚ್ಚಬೇಕು. ನಮ್ಮ ಕುಂಕುಮ ನಮಗೆ ನಾಮ ಹಾಕಿ ಅವರು ಅಧಿಕಾರಕ್ಕೆ ಬಂದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಡಾ.ಮಂಜುನಾಥ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿ: ಸಿಎಂಗೆ ಆರ್.ಅಶೋಕ್ ಮನವಿ
Advertisement
Advertisement
ಪೂರ್ತಿ ಆಗದ ದೇವಸ್ಥಾನವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಚುನಾವಣೆಗಾಗಿ. ಅವರು ಮಾಡಿರುವುದು ಚುನಾವಣೆಗಾಗಿ. ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗಾಗಿಯೇ. ಸಿಎಂ ಡಿಸಿಎಂ ಇಬ್ಬರ ಹತ್ತಿರವೂ ಈ ವಿಚಾರ ಚರ್ಚೆ ಮಾಡಿದ್ದೇನೆ. ಅವರು ಏನೇ ಹೇಳದಿರಬಹುದು. ನನ್ನ ವೈಯುಕ್ತಿಕ ಅಭಿಪ್ರಾಯ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆದರೆ ಜನರಿಗೆ ಗ್ಯಾರಂಟಿ ಬೇಡವಾಗಿದೆ ಎಂದು ತೀರ್ಮಾನ ಮಾಡಬೇಕು ಎಂದರು. ಇದನ್ನೂ ಓದಿ: ಕರ್ತವ್ಯ ಲೋಪ ಆರೋಪ – ವಿಜಯಪುರ ಡಿಡಿಪಿಐ ಅಮಾನತು
Advertisement
ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹಣ ಕೊರತೆ ಆಗುತ್ತಿದೆ. 60 ಸಾವಿರ ಕೋಟಿ ಹಣ ಗ್ಯಾರಂಟಿಗೆ ಬೇಕು. ಜನ ಈ ಗ್ಯಾರಂಟಿಗೆ ಮತ ಹಾಕಿಲ್ಲ ಎಂದರೆ ಅದೇ ಹಣವನ್ನು ಅಭಿವೃದ್ಧಿಗೆ ಬಳಸೋಣ. ನನ್ನ ಕ್ಷೇತ್ರಕ್ಕೂ 500 ಕೋಟಿ ಅಭಿವೃದ್ಧಿಗೆ ಸಿಗುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಹನುಮಧ್ವಜ ಇಳಿಸಿದಂತೆಯೇ ನಿಮ್ಮನ್ನು ಹಿಂದೂಗಳು ಕುರ್ಚಿಯಿಂದ ಇಳಿಸುವ ದಿನ ದೂರವಿಲ್ಲ: ಸಿಎಂಗೆ ಆರ್.ಅಶೋಕ್ ಠಕ್ಕರ್