ಬೀದರ್: ಉತ್ತರ ಪ್ರದೇಶದ ಖೇರಿ ಹೈವೆಯಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 7 ಜನ ಹಾಗೂ ಕಲಬುರಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.
ಇಂದು ಅವರ ಮೃತದೇಹಗಳು ಲಕ್ನೋದಿಂದ ಏರ್-ಲಿಫ್ಟ್ ಮಾಡಿ ಹೈದರಾಬಾದ್‍ಗೆ ತಂದು ಅಲ್ಲಿಂದ ರಸ್ತೆ ಮೂಲಕ 7 ಅಂಬುಲೆನ್ಸ್‌ಗಳಲ್ಲಿ 4 ಗಂಟೆಗೆ ಬೀದರ್‌ಗೆ ತರಲಾಯಿತು. ಓರ್ವ ವ್ಯಕ್ತಿಯ ಮೃತದೇಹವನ್ನು ಕಲಬುರಗಿಗೆ ರವಾನೆ ಮಾಡಲಾಯಿತು. ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ – ಸಂತ್ರಸ್ತರ ನೆರವಿಗೆ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ
Advertisement
Advertisement
ಮೃತದೇಹಗಳು ಬೀದರ್‌ಗೆ ಬರುತ್ತಿದ್ದಂತೆ ಗುಂಪಾ ಬಳಿಯ ಅವರ ನಿವಾಸದಲ್ಲಿ ಕುಟುಂಬಸ್ಥರ ಹಾಗೂ ಸ್ಥಳೀಯರು ಆಕ್ರಂದನ ಮುಗಿಲು ಮುಟ್ಟಿತು. ಬಳಿಕ ಬೀದರ್ ತಾಲೂಕಿನ ಸುಲ್ತಾನಪುರ್‌ದಲ್ಲಿ 6 ಜನರನ್ನು ಲಿಂಗಾಯತ ಸಂಪ್ರದಾಯದಂತೆ ಸುರಿಯುವ ಮಳೆಯ ನಡುವೆ ಅಂತ್ಯಕ್ರಿಯೆ ಮಾಡಿದರು. ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ
Advertisement
Advertisement
ಬೀದರ್ ತಾಲೂಕಿನ ಅಷ್ಟೂರಿನಲ್ಲಿ ಓರ್ವ ವ್ಯಕ್ತಿಯನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ಮಾಡುವ ಸ್ಥಳದಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೇದಾರನಾಥ್, ಭದ್ರಿನಾಥ್, ಅಯೋಧ್ಯೆ ಸೇರಿದಂತೆ ತೀರ್ಥಯಾತ್ರೆಗೆ ಹೋಗಿದ್ದ ಬೀದರ್ ಮೂಲದ 16 ಜನರಲ್ಲಿ 7 ಜನ ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.