ನವದೆಹಲಿ: ಜನರು ಸುಂಕಗಳನ್ನು ಟೀಕಿಸಿದಾಗ ನಾವು ತಾಳ್ಮೆಯಿಂದ ಇದ್ದೆವು. ತಾಳ್ಮೆಯಿಂದ ಇದ್ದ ಪರಿಣಾಮ ಈಗ ಫಲ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಭಾರತ (India) ಮತ್ತು ಅಮೆರಿಕದ (USA) ನಡುವಿನ ವ್ಯಾಪಾರ ಒಪ್ಪಂದ (Trade Deal) ಅಂತಿಮಗೊಂಡ ಹಿನ್ನೆಲೆಯಲ್ಲಿ ಇಂದು ಸದನ ಆರಂಭಗೊಳ್ಳುವ ಮೊದಲು ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಈ ವೇಳೆ, ಸುಂಕ ಮಾತುಕತೆಗಳ ಕುರಿತಾದ ಹಿಂದಿನ ಟೀಕೆಗಳು ಈಗ ಸಕಾರಾತ್ಮಕ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ. ವ್ಯಾಪಾರ ಒಪ್ಪಂದವು ಅನುಕೂಲಕರ ಆರ್ಥಿಕ ವಾತಾವರಣವನ್ನು ಸೃಷ್ಟಿಸಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಟ್ರೇಡ್ ಡೀಲ್| 15 ನಿಮಿಷದಲ್ಲೇ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ವೃದ್ಧಿ
ವಿಶ್ವದ ಆಲೋಚನೆ ಈಗ ಬದಲಾಗುತ್ತಿದೆ ಮತ್ತು ಅದರ ಪಥವು ಭಾರತದ ಕಡೆಗೆ ಹೆಚ್ಚು ವಾಲುತ್ತಿದೆ ಎನ್ನುವುದನ್ನು ನಾನು ಹಲವು ಜಾಗತಿಕ ವೇದಿಕೆಯಲ್ಲಿ ಹೇಳಿದ್ದೇನೆ. ಇಂದು ಅನೇಕ ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳ ನಡುವೆಯೂ ಭಾರತವು ಪ್ರಯೋಜನ ಪಡೆಯುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಚೀನಾ, ಪಾಕ್, ಬಾಂಗ್ಲಾಗೆ ಹೋಲಿಸಿದ್ರೆ ಭಾರತಕ್ಕೆ ಈಗ ಕಡಿಮೆ ಸುಂಕ
ಸಭೆಯಲ್ಲಿ ಭಾರತ-ಯುಎಸ್ ವ್ಯಾಪಾರ ಒಪ್ಪಂದಕ್ಕಾಗಿ ಎನ್‌ಡಿಎ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.

