ಶಿವಮೊಗ್ಗ: ನಗರದ ಪ್ರಸಿದ್ಧ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಸಂಭ್ರಮ – ಸಡಗರದೊಂದಿಗೆ ನಡೆಯುತ್ತಿದೆ.
ಈ ಜಾತ್ರೆಯು ಆಷಾಢದ ಕೊನೆಯ ಭಾಗದಲ್ಲಿ ನಡೆಯುತ್ತದೆ. ಮುಖ್ಯವಾಗಿ ತಮಿಳರ ಆರಾಧ್ಯ ದೈವ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ವಿಶೇಷ ಪೂಜೆ, ಹರಕೆ ಒಪ್ಪಿಸುವ ಕಾರ್ಯ ನಡೆಯುತ್ತದೆ. ನಗರದ ವಿವಿಧ ಭಾಗಗಳಿಂದ ಹರಕೆ ಹೊತ್ತ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದಾರೆ.
ಶಿವಮೊಗ್ಗ, ಭದ್ರಾವತಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ. ತಮಿಳುನಾಡಿನ ಪಳನಿ, ತೀರುಥಣೀ, ತಿರುಪರಂ, ಕುನ್ರಂ, ತಿರಚ್ಚಂದೂರ್, ಸ್ವಾಮಿಮಲೈ ಸುಬ್ರಹ್ಮಣ್ಯ ಸ್ವಾಮಿ ದೇವರ ಪುಣ್ಯ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿ ನೆಲಸಿರುವುದಾಗಿ ತಮಿಳು ಸಮಾಜದವರಲ್ಲಿ ನಂಬಿಕೆ ಇದೆ. ಅದರಂತೆ ಈ ಆರು ಕ್ಷೇತ್ರದಲ್ಲಿ ಅಡಿ ಕೃತ್ತಿಗೆ ಉತ್ಸವ ನಡೆಯಲಿದೆ.
ಅದೇ ಮಾದರಿಯಲ್ಲಿಯೇ ಗುಡ್ಡೇಕಲ್ ಸುಬ್ರಹ್ಮಣ್ಯ ದೇವಾಲಯದಲ್ಲಿ ತಮಿಳು ಸಮಾಜದ ಪ್ರಮುಖರು ಹಿಂದಿನಿಂದಲೂ ಪೂಜೆಗಳನ್ನು ನಡೆಸಿಕೊಂಡು ಬರುತ್ತಿರುವುದು ಈ ಕ್ಷೇತ್ರದ ವಿಶೇಷವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews