ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಮಶಾನವಿಲ್ಲದೇ ಜನ ಪರದಾಡುವಂತಾಗಿದೆ. ಅಂತ್ಯಕ್ರಿಯೆಗೆ ಶವವನ್ನು ನದಿಯಲ್ಲಿ ಗ್ರಾಮಸ್ಥರು ಹೊತ್ತು ಸಾಗಿರುವ ಘಟನೆ ನಡೆದಿದೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಿಗೆ ಸುವರ್ಣಾವತಿ ನದಿಯ ದಡದಲ್ಲಿ ತಾಲೂಕು ಆಡಳಿತ ಸ್ಮಶಾನ ನೀಡಿದೆ. ಈ ಬಾರಿ ಉತ್ತಮ ಮಳೆ ಹಿನ್ನೆಲೆ ಸುವರ್ಣಾವತಿ ನದಿ ತುಂಬಿ ಹರಿಯುತ್ತಿದೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ 3 ಕಿಲೋ ಮೀಟರ್ ರಸ್ತೆ ಮೂಲಕ ಹಾದು ಹೋಗಬೇಕು. ದೂರ ಎಂಬ ಕಾರಣಕ್ಕೆ ನದಿಯಲ್ಲಿ ಶವ ಹೊತ್ತು ಗ್ರಾಮಸ್ಥರು ಸಾಗಿದ್ದಾರೆ.
ಕಳೆದ ಸೋಮವಾರ ವೃದ್ಧೆ ವೆಂಕಟಮ್ಮ ಮೃತಪಟ್ಟಿದ್ದರು. ಶವಸಂಸ್ಕಾರಕ್ಕಾಗಿ ನದಿಯಲ್ಲಿ 100 ಮೀಟರ್ ದಾಟಿ ಗ್ರಾಮಸ್ಥರು ಹೋಗಿರುವ ವೀಡಿಯೋ ವೈರಲ್ ಆಗಿದೆ. ಜೀವದ ಹಂಗು ತೊರೆದು ಗ್ರಾಮಸ್ಥರು ಶವ ಸಾಗಿಸಿದ್ದಾರೆ.
ಸ್ಮಶಾನಕ್ಕೆ ತೆರಳಲು ಸೇತುವೆ ನಿರ್ಮಿಸಿ ಕೊಡುವಂತೆ ಮದ್ದೂರು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.