ರಸ್ತೆ ಇಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನ ಕಂಬಳಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಜನ

Public TV
1 Min Read
Hospital 3

– ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ʻಪಬ್ಲಿಕ್‌ ಟಿವಿʼ ತಂಡ

ಮಡಿಕೇರಿ: ರಸ್ತೆ ಸಂಪರ್ಕವೇ ಇಲ್ಲದೇ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 76 ವರ್ಷದ ವೃದ್ಧೆಯನ್ನ ಕಂಬಳಿಯಿಂದ ಆಸ್ಪತ್ರೆಗೆ (Hospital) ಹೊತ್ತೊಯ್ದ ಮನಕಲುಕುವ ದೃಶ್ಯ ಕೊಡಗು (Kodagu) ಜಿಲ್ಲೆಯಲ್ಲಿ ಕಂಡುಬಂದಿದೆ.

ಹೌದು. ಕೊಡಗಿನಲ್ಲಿ ವರುಣನ ಆರ್ಭಟ (Heavy Rain) ಹೆಚ್ಚಾಗಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಬೀಸುವ ಬಿರುಗಾಳಿಗೆ ಗ್ರಾಮೀಣ ಭಾಗದಲ್ಲಿ ಹತ್ತಾರು ಬೃಹತ್‌ ಮರಗಳು ದರಾಶಾಹಿಯಾಗಿವೆ. ಈ ನಡುವೆ ಮನಕಲುಕುವ ಪ್ರಸಂಗವೊಂದು ಕಂಡುಬಂದಿದೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

Hospital 1

ಸೋಮವಾರಪೇಟೆ ತಾಲ್ಲೂಕಿನ ಕಿರುದಾಲೆ ಗ್ರಾಮದಲ್ಲಿ ಇರುವಂತಹ ವಯೋವೃದ್ಧೆಯೋಬ್ಬರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ತೆರಳಲು ಆಗದೇ ತಮ್ಮ ಮನೆಯಲ್ಲೇ ನರಳಾಡುತ್ತಿದ್ದರು. ಈ ವೇಳೆ ಕಿರುದಾಲೆ ಗ್ರಾಮದಲ್ಲಿ ಗ್ರೌಂಡ್ ರಿಪೋರ್ಟ್ ಮಾಡುತ್ತಿದ್ದ ʻಪಬ್ಲಿಕ್ ಟಿವಿʼ ತಂಡ ವೃದ್ಧೆಯ ನರಳಾಟವನ್ನು ಗಮನಿಸಿದೆ. ರಸ್ತೆ ಸಂಪರ್ಕವಿಲ್ಲದ ಕಾರಣ ಗ್ರಾಮಸ್ಥರ ಜೊತೆಗೂಡಿ ಕಂಬಳಿ ಸಹಾಯದಿಂದ ಕಾಫಿತೋಟದ ಮೂಲಕ ವೃದ್ಧೆಯನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಕಾಫಿ ತೋಟದ ದುರ್ಘಮ ಹಾದಿಯಲ್ಲಿ ಸುಮಾರು ಅರ್ಧ ಕಿಮೀ ಸಾಗಿ ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಯಿತು. ಇದನ್ನೂ ಓದಿ: ಚಳ್ಳಕೆರೆ | ಕಾರು, ಬೈಕ್ ನಡುವೆ ಭೀಕರ ಅಪಘಾತ – ಹಬ್ಬದ ದಿನವೇ ಅಣ್ಣ, ತಂಗಿ ದಾರುಣ ಸಾವು

ಈ‌ ಸಂದರ್ಭ ʻಪಬ್ಲಿಕ್ ಟಿವಿʼಯೊಂದಿಗೆ ಮಾತಾನಾಡಿದ ಗ್ರಾಮಸ್ಥರು, 2018ರಂತೆಯೇ ಈ ಭಾಗದಳೆ ಮಳೆ ಗಾಳಿ ಹೆಚ್ಚಾಗಿದೆ. ಶಾಲಾ‌ ಮಕ್ಕಳು, ವಯೋವೃದ್ಧರನ್ನ ಹೊರಗೆ ಕರೆದುಕೊಂಡು ಹೋಗಲು ಆಗುತ್ತಿಲ್ಲ. ಭಾರಿ ಗಾಳಿ ಬಿಸುತ್ತಿರುವುದರಿಂದ ಯಾವ ಸಮಯದಲ್ಲಿ ಮರಗಳು ಬೀಳುತ್ತವೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಅನಾರೋಗ್ಯದಿಂದ ನರಳಾಡುತ್ತಿದ್ದ ವೃದ್ಧೆಯನ್ನ ತೋಟದ ಬದಿಯಿಂದ ಆಸ್ಪತ್ರೆಗೆ ಸಾಗಿಸುತ್ತಿದ್ದೇವೆ. ಇದಕ್ಕೆ ಪಬ್ಲಿಕ್‌ ಟಿವಿ ತಂಡ ಕೈಜೋಡಿಸಿದೆ, ಧನ್ಯವಾದಗಳು ಅಂತ ಭಾವುಕರಾದ್ರು.

Share This Article