ಮೈಸೂರು: ಮಂಗಳವಾರದಿಂದ ಮೈಸೂರಿನಲ್ಲಿ ಐಎಸ್‍ಐ ಮಾರ್ಕಿನ ಹೆಲ್ಮೆಟ್ ಅಭಿಯಾನ ನಡೆಯುತ್ತಿದೆ. ಈ ನಡುವೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಹೊಂದಿದ್ದ ಪೊಲೀಸ್ ಪೇದೆಯ ಕಳಪೆ ಹೆಲ್ಮೆಟನ್ನು ಸಾರ್ವಜನಿಕರೇ ಒಡೆದು ಹಾಕಿರೋ ಘಟನೆ ನಡೆದಿದೆ.
Advertisement
ಮೈಸೂರಿನ ಚೆಲುವಾಂಬ ಪಾರ್ಕ್ ಬಳಿ ಈ ಘಟನೆ ನಡೆದಿದೆ. ಪೊಲೀಸ್ ಪೇದೆ ಬಳಿ ಕಳಪೆ ಹೆಲ್ಮೆಟ್ ಇರುವುದನ್ನು ನೋಡಿದ ಸಾರ್ವಜನಿಕರು, ಹೆಲ್ಮೆಟ್ ಒಡೆದು ಹಾಕಿ ಪೇದೆಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
https://www.youtube.com/watch?v=Gihb1FMiVtA&feature=youtu.be
Advertisement
ಮೈಸೂರು ಸಂಚಾರಿ ಪೊಲೀಸರಿಂದ ಮಂಗಳವಾರದಂದು ಆಪರೇಷನ್ ಸೇಫ್ ರೈಡ್ ಹೆಸರಿನಲ್ಲಿ ಮೆಗಾ ಹೆಲ್ಮೆಟ್ ತಪಾಸಣೆ ನಡೆಯಿತು. ಇಷ್ಟು ದಿನ ಹೆಲ್ಮೆಟ್ ಹಾಕದವರಿಗೆ ದಂಡ ಮಾತ್ರ ಹಾಕುತ್ತಿದ್ದ ಪೊಲೀಸರು ನಿನ್ನೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್‍ಗಳನ್ನು ಸ್ಥಳದಲ್ಲಿಯೇ ವಶಪಡಿಸಿಕೊಂಡ್ರು. ಗಟ್ಟಿಯಾದ ಹಾಗೂ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸೂಚನೆ ನೀಡಿದ್ರು.
Advertisement
ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ಸವಾರರಿಂದ ಪಡೆದು ದಂಡ ಕಟ್ಟಿಸಿಕೊಳ್ಳದೇ ಎಚ್ಚರಿಕೆ ನೀಡಿ ಕಳಿಸಿದ್ರು. ಹಳೇ ಹೆಲ್ಮೆಟ್ ಬೇಕು ಎಂದರೆ ಹೊಸದಾಗಿ ಐಎಸ್‍ಐ ಮಾಕ್ ಉಳ್ಳ ಫುಲ್ ಹೆಲ್ಮೆಟ್ ಖರೀದಿಸಿ ತಂದು ತೋರಿಸುವಂತೆ ಸೂಚಿಸಿದ್ರು. ಮೈಸೂರು ನಗರದಾದ್ಯಂತ ಈ ವಿಶೇಷ ತಪಾಸಣೆ ನಡೆಯಿತು.
ನಿನ್ನೆ ಮೈಸೂರು ನಗರ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ 15 ಸಾವಿರಕ್ಕೂ ಹೆಚ್ಚು ಹೆಲ್ಮೆಟ್‍ಗಳನ್ನ ವಶಪಡಿಸಿಕೊಂಡಿದ್ದಾರೆ. ಇದೇ ವಾರ ಮತ್ತೊಮ್ಮೆ ದಿಢೀರ್ ದಾಳಿ ಮಾಡಲಿದ್ದಾರೆ.
ಹೆಲ್ಮೆಟ್ ಕಸಿದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಪೊಲೀಸರು ಹೊಸ ಐಎಸ್‍ಐ ಮಾರ್ಕ್ ಉಳ್ಳ ಹೆಲ್ಮೆಟ್ ತಂದು ತೋರಿಸಿದ್ರೆ ಹಳೇ ಹೆಲ್ಮೆಟ್ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಮತ್ತೆ ಆ ಹಳೇ ಹೆಲ್ಮೆಟ್ ಧರಿಸುವಂತಿಲ್ಲ.