ರಾಯಚೂರು: ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿಸಿರುವ ಘಟನೆ ನಗರದ ಮಕ್ತಲಪೇಟೆ (Makthalpete) ಬಡಾವಣೆಯಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಾಯಚೂರು (Raichuru) ತಾಲೂಕಿನ ವಡವಟ್ಟಿ ಗ್ರಾಮದ ಮಹಿಳೆಯೆಂದು ಗುರುತಿಸಲಾಗಿದೆ.ಇದನ್ನೂ ಓದಿ: ಮೊಯಿದ್ದೀನ್ ಬಾವ ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ
ಮನೆಬಿಟ್ಟು ರಸ್ತೆಯಲ್ಲಿ ಓಡಾಡುತ್ತಿದ್ದಾಗ ಅಲ್ಲಿದ್ದ ಮಕ್ಕಳನ್ನು ಮುಟ್ಟಲು ಯತ್ನಿಸಿದ್ದಾಳೆ. ಈ ವೇಳೆ ಮಕ್ಕಳ ಕಳ್ಳಿಯಂದು ಭಾವಿಸಿ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಬಡಾವಣೆಯ ನಿವಾಸಿಗಳು ಮರಕ್ಕೆ ಕಟ್ಟಿ ಥಳಿಸಿದ್ದಾರೆ.
ಬಡಾವಣೆಯಲ್ಲಿನ ಕಟ್ಟೆಯ ಮರಕ್ಕೆ ಮಹಿಳೆಯನ್ನು ಕಟ್ಟಿ ಹಾಕಿ ವಿಚಾರಣೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ 112 ಪೊಲೀಸ್ ವಾಹನ ಸಿಬ್ಬಂದಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಿ ಠಾಣೆಗೆ ಕರೆದ್ಯೊಯ್ದಿದ್ದಾರೆ.
ಮಹಿಳೆಯ ಕುಟುಂಬಸ್ಥರ ಮಾಹಿತಿ ಪಡೆದು ಸಂಬಂಧಪಟ್ಟವರಿಗೆ ಪೊಲೀಸರು ಒಪ್ಪಿಸಿದ್ದಾರೆ. ಮತ್ತೊಮ್ಮೆ ಮಹಿಳೆಯನ್ನು ಮನೆಯಿಂದ ಒಂಟಿಯಾಗಿ ಹೊರಬಿಡದಂತೆ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಚೆನ್ನೈ ಏರ್ ಶೋ ವೇಳೆ ದುರಂತ – ಬಿಸಿಲಿನ ತಾಪಕ್ಕೆ ಐವರು ಸಾವು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥ