ಬೆಂಗಳೂರು: ಸಚಿವರ ಕಾರು ತೊಳೆಯೋದಕ್ಕೆ, ಮನೆ ಗಾರ್ಡನ್‍ಗೆ ಶುದ್ಧವಾದ ಕಾವೇರಿ ನೀರು ಬೇಕು. ಆದ್ರೇ ಸಾಮಾನ್ಯ ಜನರ ಪಾಲಿಗೆ ಚರಂಡಿಯಲ್ಲಿ ಗಬ್ಬು ನಾರುವಂತ ನೀರು. ಈ ಬಗ್ಗೆ ದೂರು ಕೊಟ್ರೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.
Advertisement
ಕಪ್ಪು ನೀಲಿ ಬಣ್ಣವಿರುವ ಕೆಟ್ಟ ವಾಸನೆಯ ನೀರಿನ ಮೇಲೆ ಪಾಚಿ ನೀರನ್ನು ಜಲಮಂಡಳಿ ಕಾವೇರಿ ನೀರು ಅಂತಾ ಪೂರೈಕೆ ಮಾಡುತ್ತಿದೆ. ಈ ಚರಂಡಿ ಮಿಶ್ರಿತ ಕಾವೇರಿ ನೀರು ಕುಡಿದು ಆಸ್ಪತ್ರೆಗೆ ಸೇರಿರೋದು ಕಲ್ಯಾಣ ನಗರದ ಜನ. ಕಳೆದೊಂದು ವಾರದಿಂದ ಈ ರೀತಿ ಚರಂಡಿ ಮಿಶ್ರಿತ ನೀರು ಬರ್ತಿದೆ. ಇಡೀ ಸಂಪ್‍ಗೆ ನೀರು ತುಂಬಿಸಿ ಜನ ಪ್ರತಿದಿನ ಲೀಟರ್‍ಗಟ್ಟಲೆ ನೀರನ್ನು ಮತ್ತೆ ಹೊರಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಈಗಾಗಲೇ ಸಾಕಷ್ಟು ಜನ ಈ ನೀರು ಕುಡಿದು ಆಸ್ಪತ್ರೆ ಸೇರಿದ್ದಾರೆ. ಕಳೆದ ಒಂದು ವಾರದಿಂದಲೂ ಈ ಕಲುಷಿತ ನೀರು ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಅಂತ ಜನ ಆರೋಪಿಸಿದ್ದಾರೆ. ಸದ್ಯಕ್ಕೆ ಕಲ್ಯಾಣನಗರದ ಜನ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದ್ರೆ ಜಲಮಂಡಳಿ ಅಧಿಕಾರಿಗಳು ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ತೆಪ್ಪಗೆ ಕುಳಿತಿರುವುದು ಮಾತ್ರ ವಿಪರ್ಯಾಸ.