ಬೆಂಗಳೂರು: ಭೂಕುಸಿತದ ಭಯದಿಂದ ಕೊಡಗಿನಿಂದ ಜನ ಮನೆ ಖಾಲಿ ಮಾಡಿ ಶಿಫ್ಟ್ ಆಗುತ್ತಿದ್ದಾರೆ. ಈಗ ಅದೇ ರೀತಿ ಬೆಂಗಳೂರಿನ ಮೂರು ಏರಿಯಾದಿಂದ ಜನ ನಿಧಾನವಾಗಿ ಬಾಡಿಗೆ ಮನೆಯನ್ನು ಖಾಲಿ ಮಾಡುತ್ತಿದ್ದಾರೆ.
ಹೌದು. ಬೆಂಗಳೂರಿನ ಬಿಟಿಎಂ ಲೇಔಟ್, ಕೋರಮಂಗಲ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಬಾಡಿಗೆ ಮನೆಗಳನ್ನು ಜನ ಖಾಲಿ ಮಾಡುತ್ತಿದ್ದಾರೆ. ಸಣ್ಣ ಮಳೆ ಬಂದರೂ ಜಲಾವೃತವಾಗಿ ಮನೆಯೊಳಗೆ, ಅಪಾರ್ಟ್ ಮೆಂಟ್‍ನೊಳಗೆ ನೀರು ಬರುತ್ತಿದೆ. ಇದರಿಂದ ಜನರು ರೋಸಿ ಹೋಗಿ ಮನೆ ಖಾಲಿ ಮಾಡುತ್ತಿದ್ದಾರೆ.
Advertisement
Advertisement
ಇದರಿಂದ ಸಿಟ್ಟಿಗೆದ್ದ ಬೆಂಗಳೂರು ಅಪಾರ್ಟ್ ಮೆಂಟ್ ಅಸೋಸಿಯೇಷನ್, ನಾವ್ಯಾಕೆ ಬಿಬಿಎಂಪಿಗೆ ಟ್ಯಾಕ್ಸ್ ಕಟ್ಟಬೇಕು. ನಮಗೆ ಬಿಬಿಎಂಪಿಯಿಂದ ಯಾವ ಸೌಲಭ್ಯವೂ ಸಿಗಲ್ಲ. ಮಳೆ ಬಂದಾಗ ಇಡೀ ಏರಿಯಾ ಮುಳುಗಡೆಯಾಗುತ್ತದೆ. ಈ ಏರಿಯಾದ ಜನ ಇನ್ನು ಮುಂದೆ ಬಿಬಿಎಂಪಿಗೆ ಟ್ಯಾಕ್ಸ್ ಕಟ್ಟದೆ ಪ್ರತಿಭಟನೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತಿದ್ದೇವೆ ಎಂದು ಹೇಳಿದೆ.