ಸಾಮಾಜಿಕ ಜಾಲತಾಣಕ್ಕೆ ಹೊಸದೊಂದು ಚಾಲೆಂಜ್ ಲಗ್ಗೆ ಇಟ್ಟಿದೆ. ಈ ಚಾಲೆಂಜ್‍ಗೆ ‘ಚೀಸ್ಡ್ ಸ್ಲೈಸ್’ ಎಂಬ ಹೆಸರಿದ್ದು ಈ ಚಾಲೆಂಜ್‍ನಲ್ಲಿ ಚೀಸ್‍ನ ಸ್ಲೈಸ್ ಮಕ್ಕಳ ಮೇಲೆ ಎಸೆಯಲಾಗುತ್ತದೆ. ಸದ್ಯ ಈ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
@unclehxlmes ಟ್ವಿಟ್ಟರ್ ಖಾತೆ ಹೊಂದಿದ ವ್ಯಕ್ತಿಯೊಬ್ಬ ತನ್ನ ತಮ್ಮನ ಮೇಲೆ ಚೀಸ್ ಎಸೆದಿದ್ದನು. ಅಲ್ಲದೆ ಈ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದನು. ವ್ಯಕ್ತಿ ಈ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಾಕುತ್ತಿದ್ದಂತೆ ಹಲವು ಜನ ಆತನನ್ನು ಬೈದು ಈ ವಿಡಿಯೋ ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಈ ವಿಡಿಯೋ ನೋಡಿದ ಜನ ಇದು ಒಂದು ಚಾಲೆಂಜ್ ಎಂದುಕೊಂಡು ಮಕ್ಕಳ ಮೇಲೆ ಚೀಸ್ ಎಸೆಯಲು ಶುರು ಮಾಡಿದ್ದಾರೆ. ಅಲ್ಲದೆ ಪ್ರಾಣಿಗಳ ಮೇಲೂ ಈ ಚಾಲೆಂಜ್ ನ ಪ್ರಯೋಗ ಮಾಡುತ್ತಿದ್ದಾರೆ.
Advertisement
Advertisement
ಈ ವಿಡಿಯೋ ನೋಡಿ ಜನರು ಪುಟ್ಟಪುಟ್ಟ ಮಕ್ಕಳ ಮೇಲೆ, ತಮ್ಮ ಸಹೋದರ- ಸಹೋದರಿ ಮೇಲೆ, ಸ್ನೇಹಿತರು ಹಾಗೂ ಪ್ರಾಣಿಗಳ ಮೇಲೆ ಚೀಸ್ ಎಸೆಯುತ್ತಿದ್ದಾರೆ. ಈ ಚಾಲೆಂಜ್‍ನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಹಾಗೂ ವ್ಯೂಗಳನ್ನು ಪಡೆಯುತ್ತಿದೆ. ಅಲ್ಲದೆ ಸಾಕಷ್ಟು ಮಂದಿ ಈ ವಿಡಿಯೋವನ್ನು ಶೇರ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ ಹಲವರು ಈ ರೀತಿ ಮಾಡದಂತೆ ಹೇಳಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
Advertisement
https://twitter.com/shelbslord/status/1101208031512141825?ref_src=twsrc%5Etfw%7Ctwcamp%5Etweetembed%7Ctwterm%5E1101208031512141825&ref_url=https%3A%2F%2Fwww.ndtv.com%2Foffbeat%2Fpeople-are-throwing-cheese-at-babies-in-bizarre-new-cheesed-challenge-2003978
Advertisement
ಈ ವಿಡಿಯೋ ನೋಡಿ ಮಕ್ಕಳ ಹಕ್ಕುಗಳ ಕಾರ್ಯಕಾರಿ ನಿರ್ದೇಶಕ ಸ್ಯಾಂಡಿ ಸಂತನ ಪ್ರತಿಕ್ರಿಯಿಸಿ, “ಪೋಷಕರು ತಮ್ಮ ಮಕ್ಕಳ ಜೊತೆ ಈ ರೀತಿ ಮಾಡೋದನ್ನು ಬಿಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಮಕ್ಕಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು. ನೀವು ಈ ರೀತಿ ಮಾಡುವುದರಿಂದ ಅಸಹಾಯಕ ಮಕ್ಕಳಿಗೆ ಕಷ್ಟವಾಗುತ್ತದೆ ಹಾಗೂ ಅವರು ಶಾಕ್‍ಗೆ ಒಳಗಾಗುತ್ತಾರೆ. ಲೈಕ್‍ಗಳಿಗಾಗಿ ಈ ರೀತಿ ಮಾಡುವುದು ಸರಿಯಿಲ್ಲ ಎಂದು ಹೇಳಿದ್ದಾರೆ.
https://twitter.com/1Slow_300/status/1101341630995390465?ref_src=twsrc%5Etfw%7Ctwcamp%5Etweetembed%7Ctwterm%5E1101341630995390465&ref_url=https%3A%2F%2Fwww.ndtv.com%2Foffbeat%2Fpeople-are-throwing-cheese-at-babies-in-bizarre-new-cheesed-challenge-2003978
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv