ಸೋಫಿಯಾ: ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ ಅವರು ಭಾರತದ ಕುರಿತು ಹೇಳಿರುವ ಭವಿಷ್ಯ ಹೇಳಿದ್ದಾರೆ.
ಈ ವರ್ಷ ಪ್ರಪಂಚದಲ್ಲಿ ಹವಾಮಾನ ಬದಲಾವಣೆಯಿಂದ ತಾಪಮಾನ ಭಾರೀ ಏರಿಕೆಯಾಗಲಿದೆ. ಇದರಿಂದಾಗಿ ಮಿಡತೆಗಳ ಕಾಟ ಏಕಾಏಕಿ ಹೆಚ್ಚಾಗುತ್ತದೆ. ಹಸಿರು ಮತ್ತು ಆಹಾರಕ್ಕಾಗಿ ಮಿಡತೆಗಳ ಹಿಂಡು ಭಾರತದ ಮೇಲೆ ದಾಳಿ ಮಾಡುತ್ತವೆ. ಇವುಗಳ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅಲ್ಲದೆ ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
Advertisement
Advertisement
ಸದ್ಯ ಬಾಬಾ ವಂಗಾ ಅವರ ಈ ಭವಿಷ್ಯದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಇವರ ಭವಿಷ್ಯವಾಣಿಗಳು ಎಷ್ಟು ನಿಜ ಎಂಬುವುದು ಕಾಲವೇ ಉತ್ತರಿಸಬೇಕಿದೆ. ಆದರೆ ಅವರು ಈ ಹಿಂದೆ ಹೇಳಿರುವುದರಲ್ಲಿ ಹಲವು ವಿಚಾರಗಳು ನಿಜವಾಗಿದೆ. ಇದನ್ನೂ ಓದಿ: ಬಸ್, ತೈಲ ಟ್ಯಾಂಕರ್ ನಡುವೆ ಡಿಕ್ಕಿ – ಸುಟ್ಟು ಕರಕಲಾದ 20 ಜನ
Advertisement
ಬಾಬಾ ವಂಗಾ ಅವರು ತಮ್ಮ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಇದಾದ ಬಳಿಕ ಅವರಿಗೆ ದೇವರು ಭವಿಷ್ಯ ಗ್ರಹಿಸುವ ಶಕ್ತಿ ನೀಡಿದ್ದಾರೆಂದು ಹೇಳಲಾಗುತ್ತಿದೆ. ಅವರು ಪ್ರಪಂಚದ ಬಗ್ಗೆ ಅನೇಕ ಭವಿಷ್ಯಗಳನ್ನು ನುಡಿದಿದ್ದು, ಅವುಗಳಲ್ಲಿ ಹಲವು ನಿಜವೆಂದು ಸಾಬೀತಾಗಿವೆ.
Advertisement
2022 ರ ಆರಂಭಿಕ ತಿಂಗಳುಗಳ ಬಗ್ಗೆ 2 ಭವಿಷ್ಯ ನುಡಿದಿದ್ದರು. ಅವುಗಳು ಸಾಬೀತು ಕೂಡ ಆಗಿವೆ. ಇದೀಗ 2022ಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಭವಿಷ್ಯವಾಣಿಗಳಲ್ಲಿ ಭಾರತದ ಬಗ್ಗೆ ಹೇಳಿರುವುದು ಕುತೂಹಲದ ಜೊತೆ ಆತಂಕ ಹೆಚ್ಚು ಮಾಡಿದೆ.
ಸಾಬೀತಾದ ಭವಿಷ್ಯಗಳು:
ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹದ ಮುನ್ಸೂಚನೆಯಾಗಿದೆ. ಎರಡನೆಯ ಭವಿಷ್ಯವು ಅನೇಕ ನಗರಗಳಲ್ಲಿ ಬರ ಮತ್ತು ನೀರಿನ ಬಿಕ್ಕಟ್ಟಿನ ಬಗ್ಗೆ ಇತ್ತು. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಅಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಹೀಗಾಗಿ ಅವರು ನುಡಿದ ಭವಿಷ್ಯ ನಿಜವಾಗಿದೆ.
ದೊಡ್ಡ ನಗರಗಳು ಬರ ಮತ್ತು ನೀರಿನಿಂದ ತತ್ತರಿಸುತ್ತವೆ ಎಂದು ಅವರು ಇನ್ನೊಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ಕೂಡ ಈಗ ಯುರೋಪಿನಲ್ಲಿ ನಿಜವೆಂದು ಸಾಬೀತಾಗಿದೆ. ಬೃಹತ್ ಹಿಮನದಿಗಳು ಮತ್ತು ನೀರಿನಿಂದ ಆವೃತವಾಗಿರುವ ಬ್ರಿಟನ್, ಇಟಲಿ ಮತ್ತು ಪೋರ್ಚುಗಲ್ ಈ ದಿನಗಳಲ್ಲಿ ತೀವ್ರ ಬರಗಾಲದ ಹಿಡಿತದಲ್ಲಿವೆ.