ರಾಯಚೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೊರಡಿಸಿದ ಕೊರೊನಾ ಮಾರ್ಗಸೂಚಿಯಿಂದ ಕಕ್ಷಿದಾರರಿಗೆ ನ್ಯಾಯಾಲಯ ಒಳಗಡೆ ಪ್ರವೇಶ ನಿಷೇಧಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಗೊಂದಲಕ್ಕೊಳಗಾಗಿ ನ್ಯಾಯಾಲಯದ ಮುಂದೆ ಜನಜಂಗುಳಿಯಾಯಿತು.
Advertisement
ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರ ಆದೇಶದ ಹಿನ್ನೆಲೆ ಕಠಿಣ ನಿಯಮ ಜಾರಿಯಾಗಿದ್ದು, ಕೆಳ ನ್ಯಾಯಾಲಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮುಂದೆ ಕಕ್ಷಿದಾರರು ಕೋರ್ಟ್ ಕಟ್ಟಡದ ಮೆಟ್ಟಿಲು ಏರುವ ಹಾಗಿಲ್ಲ. ನ್ಯಾಯಾಲಯಗಳ ಅಧಿಕೃತ ಇ-ಮೇಲ್ ಮೂಲಕ ಪ್ರಕರಣ ದಾಖಲಿಸಬಹುದು. ಭೌತಿಕ ಪ್ರಕರಣ ದಾಖಲಿಸುವುದಕ್ಕೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು. ತುರ್ತು ಪ್ರಕರಣಗಳಿಗೆ ವೀಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯದ ಕಾರ್ಯಕಲಾಪ ನಡೆಸಲು ಸೂಚಿಸಲಾಗಿದೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!
Advertisement
Advertisement
ಮುಂದಿನ ಆದೇಶದವರೆಗೆ ಕೋರ್ಟ್ ವೆಬ್ ಸೈಟ್ ಮೂಲಕ ವೀಡಿಯೋ ಕಾನ್ಫರೆನ್ಸ್ ನಲ್ಲೇ ವಾದ-ವಿವಾದ ನಡೆಯಲಿವೆ. ಉಚ್ಚನ್ಯಾಯಾಲಯ ಮುಖ್ಯ ನ್ಯಾಯಾಧೀಶರ ಆದೇಶವನ್ನು ನ್ಯಾಯವಾದಿಗಳು ಸ್ವಾಗತಿಸಿದ್ದಾರೆ.
Advertisement
ಹೊಸ ನಿಯಮದಿಂದ ಕಾರ್ಯಕಲಾಪ ತಡವಾಗಿ ಆಗಬಹುದು. ಆದರೆ ಯಾರಿಗೂ ತೊಂದರೆಯಾಗುವುದಿಲ್ಲ. ಕಕ್ಷಿದಾರರು ನೇರವಾಗಿ ಕೋರ್ಟ್‍ಗೆ ಬರುವುದು, ನ್ಯಾಯಾಧೀಶರ ಮುಂದೆ ನಿಲ್ಲುವ ಪ್ರಸಂಗವಿಲ್ಲ. ಮುಂದಾಗುವ ಅನಾಹುತ ತಡೆಯಲು ಉತ್ತಮ ಕ್ರಮ ಎಂದು ನ್ಯಾಯವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯಕ್ಕೆ ಸ್ವಚ್ಛತೆ ಮೂಲಕ ಪಾಠ ಕಲಿಸಿದ ಗ್ರಾಮಸ್ಥರು