ಚಾಮರಾಜನಗರ: ಶ್ವಾನಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅವು ಸಹ ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ, ಮನುಷ್ಯರಂತೆಯೇ ಪ್ರೀತಿ, ಕಾಳಜಿ, ಗುಣಮಟ್ಟದ ಸಮಯವನ್ನು ಬಯಸುತ್ತವೆ. ಹಾಗಾಗಿಯೇ ನಗರ ಭಾಗದ ಬಹುತೇಕ ಮನೆಗಳಲ್ಲಿ ಶ್ವಾನವೂ (Dog) ಮನೆ ಸದಸ್ಯರ ಭಾಗವಾಗಿಬಿಟ್ಟಿವೆ.
ಅದೇ ರೀತಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ರೋಜರ್ ಬಿನ್ನಿಗೆ (Roger Binny) ಬೀದಿನಾಯಿಗಳೆಂದರೆ ಬಲು ಪ್ರೀತಿ. ಆದ್ದರಿಂದಲೇ ಸಮಯ ಸಿಕ್ಕಾಗೆಲ್ಲ ಬೀದಿ ನಾಯಿಗಳಿಗೂ (Street Dog) ಊಟ ನೀಡುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
Advertisement
Advertisement
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಅರಣ್ಯದಂಚಿನಲ್ಲಿ ಬಹಳ ಹಿಂದೆಯೇ ಜಮೀನು ಖರೀದಿಸಿದ್ದಾರೆ. ತಮ್ಮ ಜಮೀನಿಗೆ ಹೋಗುವಾಗೆಲ್ಲಾ ಮಾರ್ಗದ ಉದ್ದಕ್ಕೂ ದಾರಿಯಲ್ಲಿ ಸಿಗುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಬಿನ್ನಿ. ಬೀದಿ ನಾಯಿಗಳನ್ನು ಕಂಡ ತಕ್ಷಣ ಕಾರು ನಿಲ್ಲಿಸಿ ಅವುಗಳ ಹಸಿವು ನೀಗಿಸುತ್ತಿದ್ದಾರೆ. ಹಸಿದ ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆಯುವ ಕೆಲಸ ಮಾಡ್ತಿದ್ದಾರೆ. ಬಿಸಿಸಿಐ ಅಧ್ಯಕ್ಷರಿಗಿರುವ ಶ್ವಾನ ಪ್ರೀತಿಯನ್ನು ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು
Advertisement
Advertisement
ಸದ್ಯ ರೋಜರ್ ಬಿನ್ನಿ ಬೀದಿನಾಯಿಯೊಂದಕ್ಕೆ ಆಹಾರ ನೀಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆ ಚಾಮರಾಜನಗರದಲ್ಲಿ ಜಮೀನಿನ ಉಳುಮೆಗಾಗಿ ಟ್ರ್ಯಾಕ್ಟರ್ ಕೂಡ ಖರೀದಿ ಮಾಡಿದ್ದರು. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್ ದಾಖಲೆ ಉಡೀಸ್ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ