ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ‘ಪೆಂಟಗನ್’ (Pentagon) ಸಿನಿಮಾದ ಟೀಸರ್‍ನಲ್ಲಿ (Teaser) ಕನ್ನಡಪರ ಹೋರಾಟಗಾರರಿಗೆ ರೋಲ್‍ಕಾಲ್ ಎಂದು ಕರೆದಿರುವ ಕುರಿತು ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿವೆ. ಕರ್ನಾಟಕ ರಕ್ಷಣಾ ವೇದಿಕೆ (Karave) ಯುವ ಘಟಕ ಈ ಕುರಿತು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ರೋಲ್‍ಕಾಲ್ ಪದವನ್ನು ಟೀಸರ್‍ನಿಂದ ಕಿತ್ತುಹಾಕದೇ ಇದ್ದರೆ ನಿರ್ದೇಶಕ ಗುರು ದೇಶಪಾಂಡೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದೆ.
Advertisement
ಕಿಶೋರ್ ನಾಯಕ ನಟಿಸಿರುವ ‘ಪೆಂಟಗನ್’ ಸಿನಿಮಾದ 5ನೇ ಕಥೆಯ ಟೀಸರ್ ಬಿಡುಗಡೆಯ ವೇದಿಕೆಯಲ್ಲೇ ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಕನ್ನಡ ರಕ್ಷಣಾ ವೇದಿಕೆಯ ಅಶ್ವಿನಿ ಗೌಡ ಕೂಡ ಧ್ವನಿಗೂಡಿಸಿದರು. ಇಬ್ಬರೂ ಒಟ್ಟಾಗಿ ವಿರೋಧಿಸಿದ್ದರಿಂದ ನಿರ್ದೇಶಕ ಗುರು ದೇಶಪಾಂಡೆ (Guru Deshpande) ಅದೇ ವೇದಿಕೆಯಲ್ಲೇ ಸ್ಪಷ್ಟನೆ ಕೂಡ ನೀಡಿದ್ದರು. ಇದನ್ನೂ ಓದಿ:ʻಸೂರರೈ ಪೊಟ್ರುʼ ನಾಯಕಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಅನುಚಿತ ವರ್ತನೆ
Advertisement
Advertisement
ಈ ಕುರಿತು ಮಾತನಾಡಿದ ನಿರ್ದೇಶಕ ಗುರು ದೇಶಪಾಂಡೆ, ‘ಟೀಸರ್ ನೋಡಿ ಎಲ್ಲವನ್ನೂ ತೀರ್ಮಾನ ಮಾಡಬೇಡಿ. ಸಿನಿಮಾ ರಿಲೀಸ್ ಆದ ನಂತರ ಮಾತನಾಡಿ. ಟೀಸರ್ ನಲ್ಲಿ ಏನೇ ಮಾತನಾಡಿಸಿದ್ದರು. ಅದಕ್ಕೆ ಸಿನಿಮಾದಲ್ಲಿ ಉತ್ತರ ಕೊಟ್ಟಿದ್ದೇವೆ. ಸಿನಿಮಾ ನೋಡಿದ ನಂತರ ನಿಮ್ಮಲ್ಲಿ ಪ್ರಶ್ನೆಗಳು ಉಳಿದರೆ, ಆಗ ಪ್ರತಿಭಟಿಸಿ’ ಎಂದು ರೂಪೇಶ್ ರಾಜಣ್ಣ ಅವರನ್ನು ಸಮಾಧಾನಿಸಿದರು.
Advertisement
ಟೀಸರ್ ನಲ್ಲಿ ನಟ ಪೃಥ್ವಿ ಅಂಬರ್ ಆಡುವ ಡೈಲಾಗ್ ಒಂದೊಂದು ಕನ್ನಡ ಸಂಘಟನೆಯ ಮುಖಂಡನನ್ನು ನೆನಪಿಸುವುದಂತೂ ಸತ್ಯ. ಅದರಲ್ಲೂ ರೋಲ್ ಕಾಲ್, ರೌಡಿ, ‘ಅ’ಕಾರ-‘ಹಕಾರ’, ಮಾಜಿ ರೌಡಿ, ಮಾಜಿ ಭೂಗತ ದೊರೆ ಹೀಗೆ ಸೂಚ್ಯವಾಗಿ ಅನೇಕ ಮಾತುಗಳನ್ನು ಆಡಿಸುವ ಮೂಲಕ ಗುರು ದೇಶಪಾಂಡೆ ಅಚ್ಚರಿ ಮೂಡಿಸಿದ್ದಾರೆ. ಕನ್ನಡ ಪರ ಸಂಘಟನೆಗಳ ಮುಖಂಡರ ಬಗ್ಗೆ ಅನುಮಾನ ಮೂಡುವ ರೀತಿಯಲ್ಲಿ ಟೀಸರ್ ತಯಾರಾಗಿದೆ.
ಅಷ್ಟೇ ಅಲ್ಲ, ಪ್ರತಿಭಟನೆಯ ನೆಪದಲ್ಲಿ ಹೋರಾಟ, ಬ್ಯಾನ್ ಅಂತ ಹೇಳಿ ಆಮೇಲೆ ಮೌನ ತಾಳುವ ಹೋರಾಟಗಾರರ ಚಳಿಯನ್ನೂ ನಿರ್ದೇಶಕರು ಬಿಡಿಸಿದ್ದಾರೆ. ನೇರವಾಗಿ ರಜನಿಕಾಂತ್ ಸಿನಿಮಾ ಬಿಡುಗಡೆಯ ಹೋರಾಟದ ವಿಷಯವನ್ನು ತಂದಿದ್ದಾರೆ. ಹೀಗಾಗಿ ಒಂದಷ್ಟು ಹೋರಾಟಗಳನ್ನು ಈ ಟೀಸರ್ ನೆನಪಿಸುತ್ತದೆ. ಈ ಟೀಸರ್ ಅನ್ನು ಕನ್ನಡ ಪರ ಹೋರಾಟಗಾರರು ಯಾವ ರೀತಿಯಲ್ಲಿ ತಗೆದುಕೊಳ್ಳುತ್ತಾರೆ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.
ಗುರು ದೇಶಪಾಂಡೆ ನಿರ್ದೇಶನದಲ್ಲಿ ಈ ಅಧ್ಯಾಯದ ಮುಖ್ಯ ಭೂಮಿಕೆಯಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬರ್, ರೂಪೇಶ್ ರಾಜಣ್ಣ, ಅಶ್ವಿನಿ ಗೌಡ ಸೇರಿದಂತೆ ಹಲವು ಅನುಭವಿ ಕಲಾವಿದರು ಇದ್ದಾರೆ. ಇದು ಕನ್ನಡಪರ ಹೋರಾಟಗಾರನೊಬ್ಬನ ಕಥೆಯೂ ಆಗಿರುವುದರಿಂದ ಕನ್ನಡ ಸಂಘಟನೆಗಳ ಸದಸ್ಯರನ್ನೂ ಈ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ ನಿರ್ದೇಶಕರು.
ಈ ಕುರಿತು ನಿರ್ದೇಶಕ ಗುರು ದೇಶಪಾಂಡೆ, “ಈ ಕಥೆಯು ಕನ್ನಡದ ಹೋರಾಟಗಾರನೊಬ್ಬನ ಕುರಿತಾಗಿದ್ದು, ಅವನ ವ್ಯಕ್ತಿತ್ವವನ್ನು ವೈಭವೀಕರಿಸದೇ ಅಥವಾ ಅವನ ಕ್ರಿಯಾಶೀಲತೆಯ ಬಗ್ಗೆ ನಕಾರಾತ್ಮಕವಾಗಿ ಹೇಳದೇ, ಹೋರಾಟಗಾರನೊಬ್ಬನ ಒಳತುಮುಲು ಹಾಗೂ ಅವನ ಜೀವನ ಸುತ್ತ ನಡೆಯುವ ಘಟನೆಗಳನ್ನು ತೋರಿಸಲಾಗಿದೆ. ಇದೊಂದು ಸೂಕ್ಷ್ಮ ರೀತಿಯ ಕಥೆಯಾಗಿದ್ದು, ಅದನ್ನು ಅಷ್ಟೇ ನಾಜೂಕಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದೇವೆ. ಹೋರಾಟಗಾರನೊಬ್ಬನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಚರ್ಚಿಸುತ್ತಲೇ, ಹೋರಾಟಗಾರರ ಮೇಲಿನ ಹಲವು ಅನುಮಾನಗಳನ್ನು ನಿವಾರಿಸುವ ಪ್ರಯತ್ನವನ್ನು ಮಾಡಲಾಗಿದೆ,” ಎನ್ನುತ್ತಾರೆ.
ಈ ಅಧ್ಯಾಯಕ್ಕೆ ಅಭಿಲಾಷ್ ಕಲ್ಲಟ್ಟಿ ಸಿನಿಮಾಟೋಗ್ರಫಿ ಮಾಡಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆಯಿದೆ. ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿದ್ದು, ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್) ಚಂದ್ರಮೋಹನ್ (ಬ್ರಹ್ಮಚಾರಿ), ರಾಘು ಶಿವಮೊಗ್ಗ (ಚೂರಿಕಟ್ಟೆ), ಕಿರಣ್ ಕುಮಾರ್ (Debut) ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜಿ ಸಿನಿಮಾಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕರು ಗುರು ದೇಶಪಾಂಡೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k