ಚಿಕ್ಕಬಳ್ಳಾಪುರ: 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೆ ತಯಾರಕ ಪೆನ್ನ ಓಬಳಯ್ಯ ಅವರು ನಿಧನರಾಗಿದ್ದಾರೆ.
ದೊಡ್ಡಬಳ್ಳಾಪುರದ ಸಿಂಪಾಡಿಪುರ ಗ್ರಾಮದ ನಿವಾಸಿಯಾಗಿದ್ದ ಪೆನ್ನ ಓಬಳಯ್ಯ ಅವರು ತಮ್ಮ 105ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ವೀಣೆ ತಯಾರಿಕರಾಗಿದ್ದವರು ಇತ್ತೀಚಿಗಷ್ಟೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.ಇದನ್ನೂ ಓದಿ: ಪಬ್ಲಿಕ್ ಟಿವಿಯ ಶರಣು ಹುಲ್ಲೂರುಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ
ಸಿಂಪಾಡಿಪುರ ಕರ್ನಾಟಕದ ಏಕೈಕ ವೀಣೆ ತಯಾರಿಕಾ ಗ್ರಾಮ ಎಂದೇ ಹೆಸರು ಪಡೆದುಕೊಂಡಿದೆ. ಈ ಗ್ರಾಮದಲ್ಲಿ ಮೊದಲು ವೀಣೆ ತಯಾರಿಕೆಯ ಕಲೆ ಗೊತ್ತಿದ್ದ ಏಕೈಕ ವ್ಯಕ್ತಿಯೆಂದರೆ ಪೆನ್ನ ಓಬಳಯ್ಯನವರು. ಕಾಲ ಕ್ರಮೇಣ ಊರಿನ ಜನರಿಗೆಲ್ಲಾ ವೀಣೆ ತಯಾರಿಕೆ ಕಲೆ ಬಗ್ಗೆ ಹೇಳಿಕೊಟ್ಟಿದ್ದರು. ಇವರ ಕಲೆಗೆ ಮೆಚ್ಚಿ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಿತ್ತು.
ಪೆನ್ನ ಓಬಳಯ್ಯನವರು ಮೂರು ಜನ ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಇದನ್ನೂ ಓದಿ: ರಾಹುಲ್ ಮುಂದೆ ಸಂಪುಟ ಪುನಾರಚನೆ ಕ್ಲೈಮ್ – ಸಿದ್ದರಾಮಯ್ಯ ಕೊಟ್ಟ ಸುಳಿವು ಏನು?

