ಬುಡಾಪೆಸ್ಟ್: ಹಂಗೇರಿಯಲ್ಲಿ ಝೋನಿಂದ ತಪ್ಪಿಸಿಕೊಂಡು ಬೀದಿಯಲ್ಲಿ ಅಲೆದಾಡುತ್ತಿದ್ದ ಪೆಂಗ್ವಿನ್‍ನನ್ನು ಪೊಲೀಸರು ರಕ್ಷಿಸಿದ್ದಾರೆ. ಈ ವೇಳೆ ಅದರ ಜೊತೆ ಸಖತ್ ಆಗಿ ಎಂಜಯ್ ಮಾಡಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹಂಗೇರಿಯ ಝೋನಿಂದ ಪೆಂಗ್ವಿನ್ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಬುಡಾಪೆಸ್ಟ್ ಪೊಲೀಸ್ ಇಲಾಖೆ ಪೆಂಗ್ವಿನ್ ಹಿಡಿಯಲು ಮುಂದಾಗಿದ್ದು, ಅವರೇ ಪೆಂಗ್ವಿನ್ ನೋಡಿ ಆಶ್ಚರ್ಯಚಕಿತರಾದರು. ಇದನ್ನೂ ಓದಿ: ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!
Advertisement
Advertisement
‘ಸಾನಿಕಾ’ ಎಂಬ 6 ತಿಂಗಳ ಪೆಂಗ್ವಿನ್ ಝೋನಿಂದ ತಪ್ಪಿಸಿಕೊಂಡಿತ್ತು. ಇಷ್ಟು ಕಾವಲು ಇದ್ದರೂ ಹೇಗೆ ಇದು ತಪ್ಪಿಸಿಕೊಂಡು ಹೋಯ್ತು ಎಂದು ಆಶ್ಚರ್ಯಪಟ್ಟುಕೊಂಡಿದ್ದರು. ಈ ಹಿನ್ನೆಲೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಾನಿಕಾಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಪ್ರಸ್ತುತ ಸಾನಿಕಾ ಸುರಕ್ಷಿತವಾಗಿದ್ದು, ಅಧಿಕಾರಿಗಳ ಜೊತೆ ಚೆನ್ನಾಗಿ ಆಟವಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Advertisement
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಸಾನಿಕಾಳನ್ನು ಹಿಡಿಯಲು ಹೋದಾಗ ಆಟಾಡಿಸಿದಳು. ಅವಳ ಜೋಶ್ ನೋಡಿ ನಮಗೆ ಆಶ್ಚರ್ಯವಾಗಿತ್ತು. ಅಲ್ಲದೇ ನಾವು ಸಹ ಈ ವೇಳೆ ಸಖತ್ ಎಂಜಾಯ್ ಮಾಡಿದ್ದೇವೆ. ನಮಗೆ ಅಧಿಕಾರಿಯೊಬ್ಬರು ಪೆಂಗ್ವಿನ್‍ವೊಂದು ಇಲ್ಲಿ ಓಡಾಡುತ್ತಿದೆ ಎಂದು ತಿಳಿಸಿದರು. ಆ ಮಾಹಿತಿ ಮೇರೆಗೆ ನಾವು ಇಲ್ಲಿಗೆ ಬಂದಿದ್ದೇವೆ. ಪೆಂಗ್ವಿನ್‍ನನ್ನು ಸುರಕ್ಷಿತವಾಗಿ ಹಿಡಿದಿದ್ದೇವೆ ಎಂದು ವಿವರಿಸಿದರು.
Advertisement
ಪ್ರಸ್ತುತ ಪೆಂಗ್ವಿನ್‍ನನ್ನು ಮೆಟ್ರೋಪಾಲಿಟನ್ ಮೃಗಾಲಯ ಮತ್ತು ಬೊಟಾನಿಕಲ್ ಗಾರ್ಡನ್‍ಗೆ ಹಸ್ತಾಂತರಿಸಲಾಗಿದೆ ಎಂದು ಬರೆದು ಸಾನಿಕಾ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಅಧಿಕಾರಿಗಳ ಕೆಲಸಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ. ಪೆಂಗ್ವಿನ್ ರಕ್ಷಣೆ ಮಾಡಿದ್ದಕ್ಕೆ ನೆಟ್ಟಿಗರು ಧನ್ಯವಾದವನ್ನು ಅರ್ಪಿಸಿದ್ದಾರೆ. ಇದನ್ನೂ ಓದಿ: ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ