ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ (Anticipatory Bail) ಸಲ್ಲಿಸಿದ್ದಾರೆ.
ಪ್ರಜ್ವಲ್ ಪರ ವಕೀಲ ಅರುಣ್ ಅವರು ಇಂದು ಮಧ್ಯಾಹ್ನ ಜನಪ್ರತಿನಿಧಿಗಳ ಕೋರ್ಟ್‍ಗೆ ಅರ್ಜಿ ಸಲ್ಲಿಕೆ ಮಾಡಿದರು. ಈ ಮೂಲಕ ಎಫ್‍ಐಆರ್ ದಾಖಲಾದ ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ಸಿಐಡಿ ಕ್ರೈಂ ನಂ 20ರಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಮೂರು ಅತ್ಯಾಚಾರ ಪ್ರಕರಣಕ್ಕೂ ಅರ್ಜಿ ಸಲ್ಲಿಕೆ ಮಾಡಿದ್ದು, ಸಂಜೆ ಪ್ರಜ್ವಲ್ ಪರ ವಕೀಲರು ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಮುಂದೆ ಮನವಿ ಮಾಡಿದರು. ಈ ಮನವಿ ತಿರಸ್ಕರಿಸಿದ ಕೋರ್ಟ್, ಮೇ 31 ವಿಚಾರಣೆ ನಿಗದಿ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಆಪ್ ಮದುವೆ ಮಾಡಿಕೊಂಡಿಲ್ಲ: INDIA ಒಕ್ಕೂಟದಿಂದ ಹೊರಬರ್ತಾರಾ ಕೇಜ್ರಿವಾಲ್?
ಸೋಮವಾರ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಪ್ರಜ್ವಲ್ ರೇವಣ್ಣ (Prajwal Revanna) ಕುಟುಂಬ ಜಾಗೂ ರಾಜ್ಯದ ಜನತೆಯ ಮುಂದೆ ಕ್ಷಮೆಯಾಚಿಸಿದ್ದರು. ಅಲ್ಲದೇ ಶುಕ್ರವಾರ ಎಸ್‍ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ್ದರು.