ಲಕ್ನೋ: ಬೆಲೆ ಏರಿಕೆಯಿಂದ ಕಷ್ಟ ಅನುಭವಿಸದೇ ಇರುವವರು ಯಾರಿದ್ದಾರೆ? ಪ್ರಯೊಬ್ಬರೂ ಸರ್ಕಾರದ ನಡೆಯನ್ನು ದೂಷಿಸಿದ್ದಾರೆ. ಆದರೆ ಅದೇ ಸಂಕಷ್ಟ 6 ವರ್ಷದ ಬಾಲಕಿಗೂ ಎದುರಾಗಿ ಕೊನೆಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತನ್ನ ಅಳಲು ತೋಡಿಕೊಂಡಿದ್ದಾಳೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೇ ಮೋದಿಗೆ ಪತ್ರ ಬರೆದಿದ್ದಾಳೆ. 1ನೇ ತರಗತಿಯ ಪುಟ್ಟ ಬಾಲಕಿ ಬರೆದಿರುವ ಪತ್ರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.
Advertisement
ಬಾಲಕಿ ಬರೆದ ಪತ್ರದಲ್ಲಿ, ಮೋದಿಜೀ ನೀವು ತುಂಬಾ ಬೆಲೆ ಏರಿಕೆ ಮಾಡಿದ್ದೀರಿ. ಪೆನ್ಸಿಲ್, ರಬ್ಬರ್ ಬೆಲೆ ದುಬಾರಿಯಾಗಿದೆ, ಮ್ಯಾಗಿ ಬೆಲೆಯೂ ಏರಿಕೆ ಆಗಿದೆ. ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್‌ಗಳನ್ನು ಕದಿಯುತ್ತಾರೆ. ನಾನು ಅಮ್ಮನ ಬಳಿ ಹೊಸ ಪೆನ್ಸಿಲ್ ಕೇಳಿದರೆ, ನನಗೆ ಹೊಡೆಯುತ್ತಾರೆ ಎಂದು ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್
Advertisement
Advertisement
ಈ ಬಗ್ಗೆ ತಿಳಿಸಿರುವ ಕೃತಿ ತಂದೆ ವಿಶಾಲ್ ದುಬೆ, ಇದು ನನ್ನ ಮಗಳ ಮನ್ ಕಿ ಬಾತ್(ಮನದ ಮಾತು). ಇತ್ತೀಚೆಗೆ ಆಕೆ ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಿದ್ದಾಗ ಆಕೆಯ ತಾಯಿ ಸಿಟ್ಟಾಗಿ, ಗದರಿಸಿದ್ದಳು ಎಂದು ತಿಳಿಸಿದ್ದಾರೆ.
Advertisement
ಈ ಪುಟ್ಟ ಬಾಲಕಿಯ ಪತ್ರ ವೈರಲ್ ಆಗುತ್ತಿದ್ದಂತೆ ಛಿಬ್ರಮೌ ಎಸ್‌ಡಿಎಂ ಅಶೋಕ್ ಕುಮಾರ್ ಅವರ ಗಮನಕ್ಕೂ ಬಂದು, ನಾನು ಆ ಮಗುವಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲು ಸಿದ್ಧನಿದ್ದೇನೆ. ಆಕೆಯ ಪತ್ರ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಲುಪಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಟಿ ಮೇಘನರಾಜ್ ಗೆ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದ “FOG HERO” ಅವಾರ್ಡ್