ಭಾರತದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದ್ದ ಕ್ರಿಕೆಟ್ ಇದೀಗ ವಿಶ್ವದ ನೆಚ್ಚಿನ ಕ್ರೀಡೆಗಳಲ್ಲಿ ಒಂದಾಗಿದೆ. ಅದರಲ್ಲೂ ಇತ್ತೀಚೆಗೆ ದೀರ್ಘ ಸ್ವರೂಪದ ಟೆಸ್ಟ್ ಕ್ರಿಕೆಟ್ (Test Cricket) ಸಹ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ, ಸದ್ಯ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವಿನ ಟೆಸ್ಟ್ ಸರಣಿ ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಏಕೆಂದರೆ ಕ್ರಿಕೆಟ್ ತನ್ನ ವಿಶಿಷ್ಟ ನಿಯಮಗಳಿಂದಲೇ ಜಗತ್ತಿನ ಕ್ರೀಡಾಸಕ್ತರ ಮನಗೆದ್ದಿದೆ. ಹೌದು. ಟೆಸ್ಟ್, ಏಕದಿನ ಅಥವಾ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಒಬ್ಬ ಆಟಗಾರ ಪ್ಲೇಯಿಂಗ್-11ನಲ್ಲಿ ಆಯ್ಕೆಯಾದ ನಂತರ ಸಮಯ ಪರಿಪಾಲನೆ ತುಂಬಾ ಮುಖ್ಯ. ಏಕದಿನ ಕ್ರಿಕೆಟ್‌ನಲ್ಲಿ (ODI Cricket) ಒಂದು ಪಂದ್ಯಕ್ಕೆ 7 ಗಂಟೆ, ಟಿ20 ಪಂದ್ಯಕ್ಕೆ 3 ಗಂಟೆ (2:30 ನಿಮಿಷದ ಎರಡು ಸ್ಟ್ರೆಟಜಿಕ್ ಟೈಮ್ಔಟ್ ಸೇರಿ) ಸಮಯವಿರುತ್ತದೆ. ಆದ್ರೆ ಟೆಸ್ಟ್ ಕ್ರಿಕೆಟ್ ಒಂದು ಪಂದ್ಯ 5 ದಿನ ನಡೆಯುತ್ತದೆ. ಪ್ರತಿದಿನ 90 ಓವರ್ ಮ್ಯಾಚ್‌ಗಳೊಂದಿಗೆ ಇತ್ತಂಡಗಳಿಗೂ ಎರಡು ಇನ್ನಿಂಗ್ಸ್‌ಗಳನ್ನಾಡುವ ಅವಕಾಶವಿರುತ್ತದೆ. ಇದನ್ನೂ ಓದಿ: ಧ್ರುವ್ ಜುರೆಲ್, ಗಿಲ್ ತಾಳ್ಮೆಯ ಜೊತೆಯಾಟ – ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತಕ್ಕೆ ಸರಣಿ ಜಯ
Advertisement
Advertisement
ಪಂದ್ಯ ಆರಂಭಗೊಂಡ ನಂತರ ಯಾವೊಬ್ಬ ಆಟಗಾರ ಉದ್ದೇಶಪೂರ್ವಕವಾಗಿ ಸಮಯವ್ಯರ್ಥ ಮಾಡಿದರೆ ದಂಡ ತೆರಬೇಕಾಗುತ್ತದೆ. ಇದು ಇಡೀ ತಂಡದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ ಭಾರತದ ಆಥಿತ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿ (ODI Worldcup) ವೇಳೆ ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್ ಔಟ್‌ಗೆ ತುತ್ತಾಗಿದ್ದು ಇದಕ್ಕೆ ಉದಾಹರಣೆ. ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿಯೂ ಅಶ್ವಿನ್ (R Ashwin) ಅವರು ಅನವಶ್ಯಕವಾಗಿ ಕಾಲಹರಣ ಮಾಡಿದ್ದಕ್ಕೆ 5 ರನ್ ದಂಡ ವಿಧಿಸಲಾಗಿತ್ತು. ಅಲ್ಲದೇ 3ನೇ ಟೆಸ್ಟ್ ಪಂದ್ಯದ ವೇಳೆ ಅಶ್ವಿನ್ ತುರ್ತು ಕಾರ್ಯದ ನಿಮಿತ್ತ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಬಳಿಕ ಹೊರಗುಳಿದಿದ್ದರು. ಈ ವೇಳೆ ಟೀಂ ಇಂಡಿಯಾ 10 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. 2ನೇ ಇನ್ನಿಂಗ್ಸ್ ಫೀಲ್ಡಿಂಗ್ ಮಧ್ಯಂತರಲ್ಲಿ ಮತ್ತೆ ಪ್ಲೇಯಿಂಗ್-11 (ಆಡುವ 11ರ ಬಳಗ) ಸೇರಿದರು. ಇದು ಭಾರೀ ಚರ್ಚೆ ಹುಟ್ಟುಹಾಕಿತ್ತು. ಆಟಗಾರರೊಬ್ಬರು ಪಂದ್ಯದಿಂದ ಹೊರಗುಳಿದ ಮೇಲೆ ಮತ್ತೆ ಅವರು ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡಿತ್ತು. ಹೌದು, ಇದಕ್ಕೆ ಖಂಡಿತವಾಗಿಯೂ ಅವಕಾಶವಿದೆ. ಅದಕ್ಕಾಗಿಯೇ ಆಟಗಾರರು ಇಂತಿಷ್ಟೇ ಸಮಯದಲ್ಲಿ ತಂಡವನ್ನು ಸೇರಿಕೊಳ್ಳಬೇಕು. ಇಲ್ಲದಿದ್ದರೆ ಪೆನಾಲ್ಟಿ ಟೈಮ್ (Penalty Time) ಆಧಾರದಲ್ಲಿ ಅವರಿಗೆ ದಂಡ ವಿಧಿಸಬಹುದು. ಅಷ್ಟಕ್ಕೂ ಪೆನಾಲ್ಟಿ ಟೈಮ್ ಅಂದ್ರೆ ಏನು? ಹೇಗೆ ಕೆಲಸ ಮಾಡುತ್ತದೆ ಅನ್ನೋ ಬಗ್ಗೆ ಕುತೂಹಲವಿದ್ದರೆ ಮುಂದೆ ಓದಿ….
Advertisement
ಪೆನಾಲ್ಟಿ ಟೈಮ್ ಎಂದರೇನು? ಹೇಗೆ ಕೆಲಸ ಮಾಡುತ್ತೆ?
ಯಾವುದೇ ಒಬ್ಬ ಆಟಗಾರನು ಆಡುವ 11ರ ಬಳಗದಲ್ಲಿ ಸೇರ್ಪಡೆಯಾದ ನಂತರ ಅನಾರೋಗ್ಯ, ಗಾಯದ ಸಮಸ್ಯೆ ಹೊರತುಪಡಿಸಿ ಉಳಿದ ಯಾವುದೇ ಕಾರಣಗಳಿಂದ ತಂಡವನ್ನು ತೊರೆಯಬೇಕಿದ್ದರೆ, ಸ್ವೀಕೃತಕ್ಕೆ ಅರ್ಹವಾದ ಕಾರಣ ನೀಡಬೇಕು. ಇಲ್ಲದಿದ್ದರೆ, MCC (ಮೇರಿಲ್ಬೋನ್ ಕ್ರಿಕೆಟ್ ಕ್ಲಬ್) ನಿಯಮದ ಅನ್ವಯ ಆ ಆಟಗಾರನು ದಂಡಕ್ಕೆ ಒಳಗಾಗುತ್ತಾನೆ. ಅಥವಾ ಆ ಟೂರ್ನಿಯಿಂದ ನಿಷೇಧಿಸಲ್ಪಡುತ್ತಾನೆ. ಆದ್ರೆ ಇಂಗ್ಲೆಂಡ್ (England) ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ತೊರೆದಿದ್ದ ಅಶ್ವಿನ್ ಮತ್ತೆ ಕಣಕ್ಕಿಳಿದರು. ಕೌಟುಂಬಿಕ ಕಾರಣಗಳಿಂದಾಗಿ ಮೈದಾನ ತೊರೆದಿದ್ದರಿಂದ ಬಿಸಿಸಿಐ ಸಹ ಅಶ್ವಿನ್ ಅವರು ಮತ್ತೆ ಪ್ಲೇಯಿಂಗ್ -11 ಸೇರಲು ಅವಕಾಶ ಮಾಡಿಕೊಟ್ಟಿತು. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಕಮಾಲ್ – ಕುಂಬ್ಳೆ ದಾಖಲೆ ಅಳಿಸಿ ಅಗ್ರಸ್ಥಾನಕ್ಕೇರಿದ ಸ್ಪಿನ್ ಮಾಂತ್ರಿಕ
Advertisement
ಈ ನಿಯಮಗಳನ್ನು ಅನುಸರಿಸಲೇಬೇಕು?
ಯಾವುದೇ ಒಬ್ಬ ಕ್ರೀಡಾಳು ತಂಡವೊಂದಕ್ಕೆ ಸೇರ್ಪಡೆಗೊಂದ ನಂತರ ಎಂಸಿಸಿ ಪ್ರಕಾರ ಕೆಲವೊಂದು ನಿಯಮಗಳನ್ನು ಅನುಸರಿಸಲೇಬೇಕು. ಅವುಗಳ ಪೈಕಿ ಕೆಲವು ಹೀಗಿವೆ.
*MCC 24.2.2.1 ಪ್ರಕಾರ ಆಟಗಾರ ಗೈರು ಹಾಜರಿಗೆ ಕಾರಣವನ್ನು ಫೀಲ್ಡ್ ತೊರೆಯುವ ಮುನ್ನ ಅಂಪೈರ್‌ಗೆ ತಿಳಿಸಬೇಕು.
*MCC 24.2.2.2 ಪ್ರಕಾರ ಅವನು/ಅವಳು ಅಂಪೈರ್‌ನ ಒಪ್ಪಿಗೆಯಿಲ್ಲದೇ ಆಟದ ಅವಧಿಯಲ್ಲಿ ಮೈದಾನಕ್ಕೆ ಬರಬಾರದು.
* MCC 24.2.2.3, 24.2.3, 24.2.7 ಮತ್ತು 24.3 ಪ್ರಕಾರ ಪೆನಾಲ್ಟಿ ಸಮಯ ಮುಗಿಯುವವರೆಗೆ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡುವಂತಿಲ್ಲ.
* ಮೈದಾನದಲ್ಲಿರುವ ಆಟಗಾರನು ಗಾಯದ ಸಮಸ್ಯೆ ಹೊರತುಪಡಿಸಿ ಅಂಪೈರ್ ಅನುಮತಿ ಪಡೆದು ಹೊರಗೆ ಹೋಗುವುದಾದರೆ 24.2.3 ನಿಯಮದ ಪ್ರಕಾರ 90 ನಿಮಿಷಗಳ ವರೆಗೆ ಮಾತ್ರ ಸಮಯ ಪಡೆಯಬಹುದು.
* ಕೌಟುಂಬಿಕ ಕಾರಣಗಳಿಗಾಗಿ ಮೈದಾನ ತೊರೆಯುವಂತಿದ್ದರೆ ಅದಕ್ಕೆ ಆಡಳಿತ ಮಂಡಳಿಯ ಒಪ್ಪಿಗೆಯೂ ಅವಶ್ಯಕವಿರುತ್ತದೆ. ಇದಕ್ಕೆ 24 ಗಂಟೆ ಅಥವಾ 48 ಗಂಟೆಯ ಸಮಯ ಇರುತ್ತದೆ. ಇಲ್ಲದಿದ್ದರೆ ಅವರನ್ನು ಪಂದ್ಯದಿಂದ ಹೊರಗಿಡಲಾಗುತ್ತದೆ. ತಂಡದಿಂದ ಹೊರಗುಳಿದ ಆಟಗಾರನ ಬದಲಿಗೆ ಬ್ಯಾಟಿಂಗ್‌ನಲ್ಲಿ ಅವಕಾಶ ಇರುವುದಿಲ್ಲ. ಫೀಲ್ಡಿಂಗ್‌ಗೆ ಮಾತ್ರ ಬದಲಿ ಆಟಗಾರನನ್ನು ಬಳಸಿಕೊಳ್ಳಬಹದು. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‍ನಲ್ಲಿ 4,000 ರನ್ ಪೂರೈಸಿ ವಿಶೇಷ ಸಾಧನೆ ಮಾಡಿದ ಹಿಟ್‍ಮ್ಯಾನ್
ಅಶ್ವಿನ್ ವಿಷಯದಲ್ಲಿ ಆಗಿದ್ದೇನು?
ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಿನ್ ಅವರ ತಾಯಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್ ಟೀಂ ಇಂಡಿಯಾವನ್ನು ತೊರೆದಿದ್ದರು. ಅಶ್ವಿನ್ ಅವರ ಸೇವೆ ಇನ್ನುಮುಂದೆ ತಂಡಕ್ಕೆ ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಸಹ 10 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಫೀಲ್ಡಿಂಗ್‌ನಲ್ಲಿ ಮಾತ್ರ ಬದಲಿ ಆಟಗಾರನಿಗೆ ಅವಕಾಶವಿದ್ದ ಕಾರಣ ಅಶ್ವಿನ್ ಬದಲಿಗೆ ದೇವದತ್ ಪಡಿಕಲ್ ಅವರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳಲಾಗಿತ್ತು. ಮರುದಿನವೇ ಅಶ್ವಿನ್ ಟೀಂ ಇಂಡಿಯಾ ಬಳಗವನ್ನು ಸೇರಿಕೊಂಡರು. ಐಸಿಸಿ ನಿಯಮ 24.3.2 ಪ್ರಕಾರ ಆಟಗಾರನು ಸಂಪೂರ್ಣ ಸ್ವೀಕಾರಾರ್ಹ ಕಾರಣಕ್ಕಾಗಿ ಮೈದಾನ ತೊರೆದಿದ್ದರೆ ಅದು ದಂಡಕ್ಕೆ ಒಳಪಡುವುದಿಲ್ಲ. ಆದ್ದರಿಂದ ಅಶ್ಚಿನ್ ಅವರಿಗೆ ಪೆನಾಲ್ಟಿ ವಿಧಿಸಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ನಿಲ್ಲದ ಟರ್ನಿಂಗ್ ಟ್ರ್ಯಾಕ್ ಕಾಂಟ್ರವರ್ಸಿ:
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1ರಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.ಆದ್ರೆ ಈ ಸರಣಿ ಆರಂಭಗೊಂಡ ದಿನದಿಂದಲೂ ಭಾರತದ ಟರ್ನಿಂಗ್ ಟ್ರ್ಯಾಕ್ಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೊಂದೇ ಸರಣಿಗಲ್ಲ, ಭಾರತದಲ್ಲಿ ಯಾವುದೇ ತಂಡದ ವಿರುದ್ಧ ಟೆಸ್ಟ್ ಸರಣಿ ನಡೆದರೂ ಈ ಚರ್ಚೆ ಮುನ್ನೆಲೆಗೆ ಬರುತ್ತದೆ. ಆ ಸರಣಿ ಮುಗಿದು ತಿಂಗಳಾದರೂ ಚರ್ಚೆ ನಿಲ್ಲಲ್ಲ. ಹಾಗಾದರೆ ಟರ್ನಿಂಗ್ ಟ್ರ್ಯಾಕ್ ಎಂದರೇನು? ಭಾರತದಲ್ಲಿ ಟೆಸ್ಟ್ ಆರಂಭಗೊಂಡಾಗಲೇ ಈ ಚರ್ಚೆ ಮುನ್ನೆಲೆಗೆ ಬರುವುದೇಕೆ? ಎಂಬುದನ್ನೂ ಇಲ್ಲಿ ತಿಳಿಯಬಹುದು.
ಟರ್ನಿಂಗ್ ಟ್ರ್ಯಾಕ್ ಅಂದರೆ ಸ್ಪಿನ್ನರ್ಗಳಿಗೆ ನೆರವಾಗುವ ಪಿಚ್ಗಳು ಎಂದರ್ಥ. ಸ್ಪಿನ್ ಬೌಲರ್‌ಗಳು ಚೆಂಡನ್ನು ಅದ್ಭುತವಾಗಿ ತಿರುಗಿಸಬಲ್ಲ ಪಿಚ್. ಅಂತಹ ಪಿಚ್ಗಳು ಟೆಸ್ಟ್ ಪಂದ್ಯದ ಮೊದಲ ದಿನದಿಂದಲೇ ಸ್ಪಿನ್ ಬೌಲರ್ಸ್ಗೆ ಸಹಾಯ ಮಾಡುತ್ತವೆ. ಸ್ಪಿನ್ನರ್ ಗಳಿಂದ ಅನಿರಿಕ್ಷಿತ ತಿರುವು ಮತ್ತು ಹೆಚ್ಚು ಬೌನ್ಸ್ ಕಂಡು ಬರುತ್ತದೆ. ಯಾವಾಗ ಹೇಗೆ ಚೆಂಡು ತಿರುವು ಪಡೆಯುತ್ತದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿದಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದಲೇ ಪ್ರವಾಸಿ ತಂಡಗಳು ತಿಂಗಳಿಗೆ ಮುಂಚೆಯೇ ಪಿಚ್‌ಗಳಲ್ಲಿ ಅಭ್ಯಾಸ ಮಾಡುತ್ತವೆ.
ಟೆಸ್ಟ್ ಕ್ರಿಕೆಟ್‌ಗೆ ಏಕಿಲ್ಲ ಸ್ಟಾಪ್ ಕ್ಲಾಕ್?
ಐಸಿಸಿ ನಿಯಮದ ಪ್ರಕಾರ, ಏಕದಿನ ಕ್ರಿಕೆಟ್, ಟಿ20 ಕ್ರಿಕೆಟ್‌ಗಳಲ್ಲಿ ನಿಧಾನಗತಿಯ ಬೌಲಿಂಗ್ ತಡೆಯಲು ಐಸಿಸಿ ಸ್ಟಾಪ್ ಕ್ಲಾಕ್ ನಿಯಮ ವಿಧಿಸಿದೆ. ಅಂದ್ರೆ ಒಂದು ಓವರ್ ಮುಗಿದು 60 ಸೆಕೆಂಡ್‌ಗಳಲ್ಲಿ, ಅಂದರೆ ಒಂದು ನಿಮಿಷದ ಅವಧಿಯಲ್ಲಿ ಮುಂದಿನ ಓವರ್ ಆರಂಭಿಸದೇ ಹೋದರೆ 3ನೇ ನಿರ್ದೇಶನದ ಬಳಿಕ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಲಭಿಸಲಿದೆ. ಮೊದಲೆರಡು ಬಾರಿ ಈ ರೀತಿಯ ವಿಳಂಬಕ್ಕೆ ರಿಯಾಯಿತಿ ಇರಲಿದೆ. ಆದರೆ ಮೂರನೇ ಬಾರಿಯೂ ಹಾಗೆಯೇ ವಿಳಂಬ ಮಾಡಿದರೆ ಸ್ಟಾಪ್ ಕ್ಲಾಕ್ ನಿಯಮ ಅನ್ವಯವಾಗಲಿದೆ. ಕ್ರಿಕೆಟ್ ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್ ತಡೆಯಲು ಐಸಿಸಿ ಈ ಹೊಸ ಯೋಜನೆ ಪರಿಚಯಿಸಲು ನಿಧರಿಸಿದೆ. ಆದ್ರೆ ಈ ನಿಯಮ ಟೆಸ್ಟ್ ಕ್ರಿಕೆಟ್‌ಗೆ ಅನ್ವಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.