– ಮಾಲಿನ್ಯ ನಿಯಂತ್ರಣ ಮಂಡಳಿ ಹದ್ದಿನ ಕಣ್ಣು
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ (Deepavali) ಕೌಂಟ್‌ಡೌನ್ ಶುರುವಾಗಿದ್ದು, ದಿಪಾವಳಿ ಅಂದಾಕ್ಷಣ ನೆನಪಾಗೋದು ಪಟಾಕಿಗಳು. ಸರ್ಕಾರ ಹಸಿರು ಪಟಾಕಿಗಳನ್ನು (Green Firecrackers) ಮಾರಲು ಮಾತ್ರ ಅವಕಾಶ ಕಲ್ಪಿಸಿದ್ದು, ನಿಷೇಧಿತ ಪಟಾಕಿಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ.
ದೀಪಾವಳಿ ಹಬ್ಬಕ್ಕೆ 2-3 ದಿನವಿದೆ. ಬೆಂಗಳೂರಿನಲ್ಲಿ (Bengaluru) ಪಟಾಕಿ ಮಾರಾಟಕ್ಕೂ ಸಿದ್ಧತೆ ನಡೆಯುತ್ತದೆ. ಈ ನಡುವೆ ಸರ್ಕಾರ ಪರಿಸರಸ್ನೇಹಿ ಹಬ್ಬ ಆಚರಿಸಲು ಕರೆ ನೀಡಿದ್ದು, ಕೇವಲ ಹಸಿರು ಪಟಾಕಿ ಬಳಸಲು ಕರೆ ನೀಡಲಾಗಿದೆ. ಈ ನಿಟ್ಟಿನಲ್ಲಿ ನಗರದ 72 ಸ್ಥಳಗಳಲ್ಲಿ ಸ್ಥಾಪನೆಯಾಗಿರೋ ಪಟಾಕಿ ಮಳಿಗೆಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: PublicTV Explainer: ಹಸಿರು ಪಟಾಕಿ ಅಂದ್ರೆ ಏನು? ಗುರುತಿಸೋದು ಹೇಗೆ?
ಇಂದು, ನಾಳೆ ಹಾಗೂ ಹಬ್ಬವಿರುವವರೆಗೂ ಕಾರ್ಯಾಚರಣೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಮಳಿಗೆಗಳ ಮೇಲೆ ಪೋಲಿಸ್ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ 14 ಪ್ರಾದೇಶಿಕ ಮಂಡಳಿ ಅಧಿಕಾರಿಗಳು ದಾಳಿ ನಡೆಸಲಿದ್ದಾರೆ. ನಿಷೇಧಿತ ಪಟಾಕಿಗಳು ಕಂಡು ಬಂದ್ರೆ ಅಂತಹ ಪಟಾಕಿ ಅಂಗಡಿ ಮಾಲೀಕರಿಗೆ ದಂಡ ಹಾಗೂ ಕ್ರಿಮಿನಲ್ ಕೇಸ್ ಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: ನೆಫ್ರೋ ಯೂರೋಲಜಿ ಸಂಸ್ಥೆಗೆ ರಾಷ್ಟ್ರೀಯ ಮಾನ್ಯತೆ; ಸೇವೆ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ
ಇನ್ನೂ ಹಸಿರು ಪಟಾಕಿಗಳನ್ನು ಪತ್ತೆ ಹಚ್ಚಲು 10 ಮೀಟರ್ ದೂರದಲ್ಲಿ ಶಬ್ದ ಮಾಪನಗಳನ್ನು ಬಳಸಲಿದ್ದಾರೆ. ಇದ್ರಂತೆ ಈ ಮೀಟರ್‌ನಲ್ಲಿ 125 ಡೆಸಿಬಲ್ ಬರುವ ಹಾಗೆ ಇಲ್ಲ. ಒಂದು ವೇಳೆ ಬಂದ್ರೇ ಅದನ್ನು ನಿಷೇಧಿತ ಪಟಾಕಿ ಅಂತಾ ಗುರ್ತಿಸಲಾಗುತ್ತದೆ. ಇಂತಹ ಪಟಾಕಿ ಮಾರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಇನ್ನೂ 1991 ಪಬ್ಲಿಕ್ ಲೇಯಾಬಿಲಿಟಿ ಆಕ್ಟ್ ಪ್ರಕಾರ ಪಟಾಕಿ ಅಂಗಡಿಗೆ ಇನ್‌ಶ್ಯೂರೆನ್ಸ್ ಮಾಡಿಸಿ ಅಂತಾ ಪರಿಸರ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.