– ದೂರು ಕೊಟ್ಟ ಮೇಲೆ ದೇಶ ಬಿಟ್ಟದ್ದು ಯಾಕೆ?
– ಪತ್ರ ಬರೆದಿದ್ದರೂ ಟಿಕೆಟ್ ನೀಡಿದ್ದು ಯಾಕೆ?
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ತಪ್ಪು ಮಾಡಿಲ್ಲ ಅಂದ ಮೇಲೆ ಜೆಡಿಎಸ್‌ನಿಂದ (JDS) ಅಮಾನತು ಮಾಡಿದ್ದು ಯಾಕೆ ಎಂದು ಸಿಎಂ ಸಿದ್ದರಾಮಯ್ಯ (CM Sidddaramaiah) ಖಾರವಾಗಿ ಪ್ರಶ್ನಿಸಿದ್ದಾರೆ.
ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ಸರ್ಕಾರ ಕಾನೂನು ಪ್ರಕಾರ ತನಿಖೆ ನಡೆಸುತ್ತದೆ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸಲಾಗುತ್ತದೆ. ನಮ್ಮ ಸರ್ಕಾರ ಯಾವುದನ್ನೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೇವರಾಜೇಗೌಡ (Devarajegowda) ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಯಾಕೆ ಕೊಟ್ಟಾ? ಆದಾದ ಬಳಿಕ ದೇಶ ಬಿಟ್ಟವರು ಯಾರು? ಜೆಡಿಎಸ್‌ನವರು ಷಡ್ಯಂತ್ರ ಮಾಡಲಾಗಿದೆ ಎನ್ನುತ್ತಿದ್ದಾರೆ. ಹಾಗಾದರೆ ಆತ ಮೇಲೆ ಕ್ರಮ ತೆಗೆದುಕೊಂಡಿದ್ದು ಯಾಕೆ ಎಂದ ಪ್ರಶ್ನಿಸಿ ತಿರುಗೇಟು ನೀಡಿದರು. ಇದನ್ನೂ ಓದಿ: ನಿಮ್ಮ ಡಿಜಿಟಲ್ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?
ದೇವರಾಜೇಗೌಡ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡದಂತೆ ಬಿಜೆಪಿಗೆ ಪತ್ರ ಬರೆದಿದ್ದರು. ಈ ವಿಚಾರ ತಿಳಿದಿದ್ದರೂ ಟಿಕೆಟ್ ನೀಡಿದ್ದು ಯಾಕೆ? ಪ್ರಜ್ವಲ್ ಪರವಾಗಿ ಪ್ರಚಾರ ಮಾಡಿದವರು ಎಂದು ಕೇಳಿದರು.
ದೇವರಾಜೇಗೌಡ ಆಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಡಿಯೋ ಬಗ್ಗೆ ಏನಾದರೂ ದಾಖಲೆ ಇದೆಯಾ? ಆಡಿಯೋ ಬಗ್ಗೆ ದಾಖಲೆ ಏನಿದೆ? ತನಿಖೆ ನಡೆಯುತ್ತಿದೆ, ಸತ್ಯಾಸತ್ಯತೆ ಹೊರಗೆ ಬರಲಿ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನೇಹಾ ಹಾಗೂ ಅಂಜಲಿ ಎಂಬುವರ ಹತ್ಯೆಯಾಗಿದೆ. ನಿಜಕ್ಕೂ ಇಂತಹ ಘಟನೆಗಳು ಆಗಬಾರದು. ಈ ಹಿಂದಿನ ಅವಧಿಗಿಂತ ಈಗ ಕಡಿಮೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚಾಗಿತ್ತು. ಆದರೆ ಈಗ ಅಪರಾಧ ಪ್ರಕರಣಗಳು ನಮ್ಮ ಅವಧಿಯಲ್ಲಿ ಕಡಿಮೆಯಾಗಿದೆ. ಹಾಗಂತ ಈಗಿನ ಘಟನೆಗಳನ್ನ ನಾನು ಸಮರ್ಥಿಸಿಕೊಳ್ಳುವುದಿಲ್ಲ. ಕಠಿಣವಾಗಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ಏನೇನು ಕ್ರಮ ಸಾಧ್ಯವೇ ಅದನ್ನು ಕೈಗೊಳ್ಳುವಂತೆ ಪೋಲಿಸರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸ್‌ನವರು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.