ಡಿಸಿಎಂ ಡಿಕೆಶಿಯನ್ನು ಕೂಡಲೇ ಕ್ಯಾಬಿನೆಟ್‌ನಿಂದ ಕೈಬಿಡಬೇಕು : ಹೆಚ್‌ಡಿಕೆ ಆಗ್ರಹ

Public TV
2 Min Read
hd kumaraswamy

ಬೆಂಗಳೂರು: ಪೆನ್‌ ಡ್ರೈವ್‌ ಪ್ರಕರಣದಲ್ಲಿ (Pen Drive Case) ಶಾಮೀಲಾಗಿರುವ ಡಿಸಿಎಂ ಡಿಕೆಶಿವಕುಮಾರ್‌ (DK Shivakumar) ಅವರನ್ನು ಕ್ಯಾಬಿನೆಟ್‌ನಿಂದಲೇ ಕೈ ಬಿಡಬೇಕು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಆಗ್ರಹಿಸಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯವ್ಯಾಪಿ ಪೆನ್‌ಡ್ರೈವ್‌ ಹಂಚಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಡಿಕೆಶಿ ಪಾತ್ರ ಏನು ಅನ್ನುವುದು ಆಡಿಯೋದಲ್ಲಿ ಗೊತ್ತಾಗಿದೆ. ಎಸ್‌ಐಟಿ (SIT) ಅಂದ್ರೆ ಶಿವಕುಮಾರ್‌ ಇನ್ವೆಸ್ಟಿಗೇಷನ್‌ ಟೀಂ, ಸಿದ್ದರಾಮಯ್ಯ ಇನ್ವೆಸ್ಟಿಗೇಷನ್‌ ಟೀಂ ಆಗಿದೆ. ಎಸ್‌ಐಟಿ ಅಧಿಕಾರಿಗಳು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ದೂರಿದರು.

 

ಈ ಎಸ್‌ಐಟಿ ತನಿಖೆಯಿಂದ ಸಂತ್ರಸ್ತರಾದ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ(CBI) ನೀಡಬೇಕು. ಸಿಬಿಐಗೆ ನೀಡಲು ಸಾಧ್ಯವಾಗದೇ ಇದ್ದರೆ ನ್ಯಾಯಾಂಗ ತನಿಖೆ ನಡೆಸಬೇಕು. ಈ ತನಿಖೆ ಪೂರ್ಣಗೊಳ್ಳುವವರೆಗೂ ಡಿಕೆಶಿಯನ್ನು ಕ್ಯಾಬಿನೆಟ್‌ನಿಂದ ವಜಾಮಾಡಬೇಕು. ಈ ಪ್ರಕರಣವನ್ನು ನಾವು ಸುಲಭಕ್ಕೆ ಬಿಡುವುದಿಲ್ಲ. ತಪ್ಪು ಮಾಡಿರುವವರು ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದರು.  ಇದನ್ನೂ ಓದಿ: ಪೆನ್‌ಡ್ರೈವ್‌ ಕೇಸ್‌ – ರಾಹುಲ್‌ ಗಾಂಧಿಗೆ ಯಾಕೆ ಇನ್ನೂ ನೋಟಿಸ್‌ ನೀಡಿಲ್ಲ : ಎಸ್‌ಐಟಿಗೆ ಹೆಚ್‌ಡಿಕೆ ಪ್ರಶ್ನೆ

ಡಿಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್‌ ಅನ್ನೋದು ಎಲ್ಲರಿಗೆ ಗೊತ್ತಿದೆ. ರೇವಣ್ಣ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರಾ? ಸತ್ಯ ಎಲ್ಲವೂ ಹೊರಗೆ ಬರಲಿ. ಪೆನ್ ಡ್ರೈವ್‌ ರಿಲೀಸ್‌ ಮಾಡಿದವರ ಬಗ್ಗೆ ಮುಖ್ಯಮಂತ್ರಿ ಇನ್ನೂ ಏನು ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

 

ಡಿಕೆಶಿವಕುಮಾರ್ ಯಾವ ತರಹ ಬಂದಿದ್ದೀರ? ನಿನ್ನೆಯ ಮೊದಲು ಹೇಳಿಕೆ, ಅಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದೀರಿ. ಡಿಕೆಶಿ ನಿಮ್ಮ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿಕೆ ಶಿವಕುಮಾರ್ ಮುಖ ಆಗಿತ್ತು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಚುನಾವಣಾ ಬಿಸಿಯಿಂದ ರಿಲ್ಯಾಕ್ಸ್ ಮೂಡಿಗೆ ಸಿಎಂ – ಊಟಿಗೆ ಪಯಣ

ತನಿಖೆ ಪಾರದರ್ಶಕವಾಗಿ ನಡೆಯಬೇಕು ಅಂದರೆ ಡಿಕೆ ಶಿವಕುಮಾರ್ ಅವರನ್ನು ಕ್ಯಾಬಿನೆಟ್‌ನಿಂದ ಅಮಾನತು ಮಾಡಬೇಕು. ದೇವರಾಜೇಗೌಡ ಅವರು ನೀಡಿದ ದೂರಿನಲ್ಲಿ ಪ್ಯಾರಾ ತೆಗೆದು ಹಾಕುವಂತೆ ಎಸ್‌ಐಟಿ ಅಧಿಕಾರಿಗಳೇ ಬೇಡಿಕೆ ಇಟ್ಟಿದ್ದಾರೆ. ದೇವರಾಜೇಗೌಡರನ್ನು ಅಧಿಕೃತವಾಗಿ ನೋಟಿಸ್‌ ನೀಡಿ ಕರೆಸಿಕೊಂಡಿಲ್ಲ. ಅನಧಿಕೃತವಾಗಿ ನೋಟಿಸ್‌ ನೀಡಿ ಕರೆಸಿಕೊಂಡಿದ್ದು ಯಾಕೆ ಎಂದು ಕೇಳಿದರು.

 

ಮಂಗಳವಾರ ಎಸ್‌ಐಟಿಯವರು ವಿಡಿಯೋ ಬಿಡುಗಡೆ ಮಾಡಿದರೆ ಶಿಕ್ಷೆ ಅಂತ ಆದೇಶ ಪ್ರಕಟಿಸಿದ್ದಾರೆ. ಏ. 21 ರಿಂದ ವಿಡಿಯೋ ಬಿಡುಗಡೆ ಮಾಡಿದವರ ವಿರುದ್ದ ಏನ್ ಮಾಡಿದ್ದೀರಿ? 4 ಮಂದಿ ಹಾಸನದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಅವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

ಬೆಳಗಾವಿ ಸಾಹುಕಾರ್ ಮೇಲೆ ಇವರೇ ವಿಡಿಯೋ ರಿಲೀಸ್‌ ಮಾಡಿದ್ದರು. ಇದಕ್ಕೆ 30-40 ಕೋಟಿ ರೂ. ಖರ್ಚು ಮಾಡಿದ್ದೇನೆ ಅಂತ ಡಿಕೆಶಿವಕುಮಾರ್ ಹೇಳಿರುವ ಆಡಿಯೋವಿದೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಕೇಸ್‌ ಹೊರ ಬಾರಲು ಡಿಕೆಶಿ ಕಾರಣ ಎಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದರು.

 

Share This Article