ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ವ್ಯಭಿಚಾರದಿಂದ ಪೆನ್ ಡ್ರೈವ್(Pen Drive) ಬಂದಿದೆ. ಮಾಡಿದವರು ವಿದೇಶದಲ್ಲಿ ಕುಳಿತಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಕರೆ ತಂದು ಮಾನ ಮರ್ಯಾದೆ ಉಳಿಸಿಕೊಳ್ಳಬೇಕು. ವಿಡಿಯೋ ಹೊರ ತಂದಿದ್ದು ಕಾರು ಡ್ರೈವರ್. ಅದನ್ನು ಅವನು ಸಹ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ವಿಡಿಯೋವನ್ನು ದೇವರಾಜೇಗೌಡಗೆ (Devarajegowda) ಕೊಟ್ಟಿದ್ದೆ ಎಂದು ಕಾರ್ತಿಕ್ ಹೇಳಿದ್ದಾನೆ. ವಿಡಿಯೋಗಳನ್ನು ಸೀಲ್ ಮಾಡಿಕೊಂಡು ಇಟ್ಟುಕೊಂಡಿದ್ದೇನೆ ಎಂದು ದೇವರಾಜೇಗೌಡ ಹೇಳಿದ್ದ. ದೇವರಾಜೇಗೌಡ ಅಮಿತ್ ಶಾ ಜೊತೆಗೂ ಮಾತನಾಡಿದ್ದಾನೆ. ಪ್ರಜ್ವಲ್ ಸಂಸತ್ ಸದಸ್ಯದ ಬಗ್ಗೆಯೂ ದೇವರಾಜೇಗೌಡ ಪ್ರಶ್ನೆ ಮಾಡಿದ್ದ. ನ್ಯಾಯದ ಪರವಾಗಿ ದೇವರಾಜೇಗೌಡ ಇದ್ದಾನೆ ಎಂದು ಆರಂಭದಲ್ಲಿ ನಾವು ಭಾವಿಸಿದ್ದೆವು ಎಂದರು. ಇದನ್ನೂ ಓದಿ: ಫೋನ್ ಟ್ಯಾಪ್ ಮಾಡಲು ಅವರೇನು ಭಯೋತ್ಪಾದಕರೇ – ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು
ದೇವೇಗೌಡರ ಕುಟುಂಬವನ್ನ ಮುಗಿಸಿದ್ದು ಅವರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಮುಗಿಸಿದ್ದಾನೆ. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ (Hit and Run) ಮಾಡುತ್ತಾರೆ. ಅವರ ಜೊತೆಯಲ್ಲೇ ನಾವು ಇದ್ದವರು. ಸಾಕ್ಷಿ ಆಧಾರವಾಗಿ ಡಿಕೆಶಿ ವಿರುದ್ಧ ದೂರು ನೀಡಲಿ. ವಿಷಯಾಂತರ ಮಾಡಲು ಈ ರೀತಿಯ ಆರೋಪ ಮಾಡಿದ್ದಾರೆ. ಯಾರೇ ಪೆನ್ ಡ್ರೈವ್ ಬಿಟ್ಟಿದ್ದರು ತನಿಖೆಯಲ್ಲಿ ಸಿಲುಕಿಕೊಳ್ಳುತ್ತಾರೆ. ದೇವರಾಜೇಗೌಡ ಸುದ್ದಿ ಗೋಷ್ಠಿ ಮಾಡಿ ರೇವಣ್ಣರ ವಿರುದ್ಧ ಮಾತಾಡಿದ್ದ ಎಂದು ಹೇಳಿದರು.
ಡಿಕೆಶಿಯನ್ನು (DK Shivakumar) ಸಮರ್ಥಿಸಿಕೊಂಡ ಶಿವಲಿಂಗೇಗೌಡ, ಡಿಕೆಶಿ ಜೊತೆಗೆ ದೇವರಾಜೇಗೌಡ ಮಾತನಾಡಬಾರದು ಎಂಬ ಕಾನೂನು ಇದ್ಯಾ? ದೇವರಾಜೇಗೌಡ ಹಾಸನದಲ್ಲಿ ರೇವಣ್ಣ ವಿರುದ್ಧ ಸುದ್ದಿ ಗೋಷ್ಠಿ ಮಾಡಿ ಒಂದು ವಿಡಿಯೋ ಬಿಟ್ಟಿದ್ದ. ಪ್ರಜ್ವಲ್ ಮೊಬೈಲ್‌ನಿಂದ ಯಾರಾದರೂ ಕಳಿಸಿಕೊಂಡಿರಬೇಕು. ಯಾವುದೋ ಕಾಣದ ಕೈಹಂಚಿಕೆ ಮಾಡಿರಬಹುದು. ಯಾರು ಹಂಚಿಕೆ ಮಾಡಿದ್ದಾರೆ ಎಂದು ಸರ್ಕಾರ ಪತ್ತೆ ಹಚ್ಚಬೇಕು ಎಂದರು.
ಇವರ ಮೇಲೆ ಅವರು, ಅವರ ಮೇಲೆ ಅನ್ನೋದು ಬಿಡಬೇಕು. ದೇವೇಗೌಡರು ಕುಟುಂಬ ಮರ್ಯಾದೆ, ರಾಜ್ಯ, ದೇಶದ ಗೌರವ ಉಳಿಸಬೇಕು. ಪ್ರಜ್ವಲ್ ಕರೆಸಬೇಕು, ಕರೆಸಿ ಕ್ಷಮೆ ಕೇಳಿಸಬೇಕು. ಎಂತ ಎಂತಹ ಘಟನೆಗಳೇ ನಡೆದು ಹೋಗಿವೆ ಅದರಲ್ಲಿ ಏನಿದೆ ಎಂದು ಪ್ರಶ್ನಿಸಿದರು.