ಮಂಡ್ಯ: ಹಲವು ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಕೆಲವೇ ದಿನಗಳಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿಯ ಪೇಜಾವರ ಶ್ರೀಗಳು ವ್ಹೀಲ್ ಚೇರ್‌ನಲ್ಲಿ ಕೆಆರ್‌ಎಸ್‌ಗೆ ಬಂದು ಕಾವೇರಿ ತಾಯಿಗೆ ನಮಿಸಿದ್ದರು.
ಆಗಸ್ಟ್ ತಿಂಗಳಿನಲ್ಲಿ ಅಚ್ಚರಿಯ ರೀತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವುದರ ಮೂಲಕ ಮಂಡ್ಯ, ಮೈಸೂರು ಬೆಂಗಳೂರು ಭಾಗದ ಲಕ್ಷಾಂತರ ಜನರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಈ ನಿಟ್ಟಿನಲ್ಲಿ ಉಡುಪಿಯ ಪೇಜಾವರ ಶ್ರೀಗಳು ತಮ್ಮ ಆರೋಗ್ಯದ ಸ್ಥಿತಿ ಚೆನ್ನಾಗಿ ಇಲ್ಲದಿದ್ದರೂ ಸಹ ಆಗಸ್ಟ್ 11 ರಂದು ಕೆಆರ್‌ಎಸ್‌ನ ವೀಕ್ಷಣೆ ಮಾಡಿದ್ದರು.
Advertisement
Advertisement
ತಮ್ಮ ಹಿತೈಷಿಗಳ ಜೊತೆ ಕೆಆರ್‌ಎಸ್ ಭೇಟಿ ನೀಡಿದ್ದ ಶ್ರೀಗಳು, ಕೆಆರ್‌ಎಸ್ ಡ್ಯಾಂನ ಮೇಲೆ ವ್ಹೀಲ್ ಚೇರ್‌ನಿಂದಲೇ ಒಂದು ರೌಂಡ್ ಹಾಕಿದ್ದರು. ನಂತರ ವರುಣ ಶಾಂತನಾಗಿ ಜನ ಜೀವನ ಸುಗುಮವಾಗುವಂತೆ ಮತ್ತು ಕಾವೇರಿ ತಾಯಿ ಸದಾ ಉಕ್ಕಿ ಹರಿಯುತ್ತಿರಲಿ ಎಂದು ಕಾವೇರಿ ತಾಯಿಯನ್ನು ಪ್ರಾರ್ಥನೆ ಮಾಡಿದ್ದರು.
Advertisement
ಈ ಬಾರಿ ಕೆಆರ್‌ಎಸ್ ಜಲಾಶಯ ಭರ್ತಿ ಆಗುವುದು ಸಂದೇಹ ಎಂಬ ಸ್ಥಿತಿ ನಿರ್ಮಾಣವಾಗಿದ್ದ ವೇಳೆ, ವರುಣನ ಕೃಪೆಯಿಂದ ಕೆಆರ್‌ಎಸ್ ಜಲಾಶಯ ಕೆಲವೇ ದಿನಗಳಲ್ಲಿ ಭರ್ತಿಯಾಗಿತ್ತು. ಇದಲ್ಲದೇ ಆ ವೇಳೆ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ, ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು.