– ಇದು ಭಯೋತ್ಪಾದನೆ ಅಲ್ಲ, ಜಾಗತಿಕ ಷಡ್ಯಂತ್ರ; ಉಡುಪಿ ಪುತ್ತಿಗೆ ಶ್ರೀ
ಉಡುಪಿ: ಪಹಲ್ಗಾಮ್ (Pahalgam) ದುರ್ಘಟನೆಯಿಂದ ಬಹಳ ಆಘಾತವಾಗಿದೆ. `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಈ ಘಟನೆಗೂ ವ್ಯತ್ಯಾಸವಿಲ್ಲ ಎಂದು ಉಡುಪಿ (Udupi) ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawara Shree) ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಉಗ್ರರು ದಾಳಿ ನಡೆಸಿದ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆ ಕಡೆ ಪಶ್ಚಿಮ ಬಂಗಾಳ, ಈ ಕಡೆ ಕಾಶ್ಮೀರದಲ್ಲಿ (Kashmir) ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ವ್ಯತಿರಿಕ್ತ ಇಲ್ಲದೇ ಈ ಘಟನೆ ನಡೆದಿದೆ. ಈ ಘಟನೆ ಬಹಳ ಆಘಾತಕಾರಿ, ಸರ್ಕಾರ ಇದಕ್ಕೆ ಬಲವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್ ಸಿಂಗ್ ಎಚ್ಚರಿಕೆ
ಇಂತಹ ಘಟನೆ ದೇಶದಲ್ಲೆಲ್ಲೂ ಮರುಕಳಿಸಬಾರದು. ದೇಶದೊಳಗೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ
ಜಾಗತಿಕ ಷಡ್ಯಂತ್ರ: ಪುತ್ತಿಗೆ ಶ್ರೀ
ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದಾಳಿಯಿಂದ ವ್ಯಾಕುಲರಾಗಿದ್ದೇವೆ. ಇದು ಭಯೋತ್ಪಾದನೆ ಅಲ್ಲ ಜಾಗತಿಕ ಷಡ್ಯಂತ್ರ ಎಂದು ಉಡುಪಿ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ (Puttige Shree) ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ
ಹಿಂದೂಗಳ ಮೇಲೆ ಉಗ್ರರ ಆಕ್ರಮಣ ಆತಂಕಕಾರಿ. ಸನಾತನ ಧರ್ಮದ ಅಸ್ತಿತ್ವ ಭಾರತದಲ್ಲಿ ನಾಶವಾಗುವ ಆತಂಕ ಶುರುವಾಗಿದೆ. ಈ ಘಟನೆಯನ್ನು ಖಂಡಿಸುತ್ತೇವೆ ಸರ್ಕಾರ ಎಚ್ಚೆತ್ತು ಶಾಶ್ವತ ಪರಿಹಾರ ಮಾಡಬೇಕು. ಕೇರಳ, ಪಶ್ಚಿಮ ಬಂಗಾಳ ಕಾಶ್ಮೀರದ ಘಟನೆಯಲ್ಲಿ ಮಾಸ್ಟರ್ ಪ್ಲಾನ್ ವರ್ಕ್ ಮಾಡುತ್ತಿದೆ ದೇಶದಲ್ಲಿ ಕಾಣದ ಕೈಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದರು. ಇದನ್ನೂ ಓದಿ: ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ
ಹಿಂದುಗಳನ್ನು ನಾಶ ಮಾಡುವ ಹುನ್ನಾರ
ಸರ್ಕಾರ ವಿಮರ್ಶೆ ಮಾಡಿ ದುಷ್ಕೃತ್ಯಗಳ ಮೂಲಬೇರು ಕಿತ್ತೆಸೆಯಬೇಕು. ಉಗ್ರವಾದಿ ಸಮಸ್ಯೆಯನ್ನು ಪೂರ್ಣ ನಿರ್ಮೂಲನೆ ಮಾಡಲು ಒತ್ತಾಯಿಸುತ್ತೇನೆ. ಉಗ್ರರು, ನಿರಪರಾಧಿಗಳನ್ನು ಸಾರ್ವಜನಿಕರನ್ನು ಕೊಲ್ಲುತ್ತಾರೆ ಎಂಬ ಭಾವನೆ ಇತ್ತು. ಹಿಂದೂಗಳನ್ನು ನಾಶ ಮಾಡುವುದೇ ಇವರ ಹೊನ್ನಾರ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.