ಉಡುಪಿ: ರಾಮಮಂದಿರ (Ram Mandir) ನಿರ್ಮಾಣದ ವೇಳೆ ರಾಮ ರಾಜ್ಯ ನಿರ್ಮಾಣದ ಸಂಕಲ್ಪ ಮಾಡೋಣ. ಒಂದು ವರ್ಷ ದೇಶಾದ್ಯಂತ ರಾಮರಾಜ್ಯ ನಿರ್ಮಾಣಕ್ಕೆ ಮನೆ ನಿರ್ಮಾಣ, ಆರೋಗ್ಯ ಸೇವೆ, ಶಿಕ್ಷಣ, ಗೋವು ಸೇವೆಗೆ ಒತ್ತು ಕೊಡುವ ಸಂಕಲ್ಪವನ್ನು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawar Shree) ಘೋಷಿಸಿದ್ದಾರೆ.
ಉಡುಪಿಯಲ್ಲಿ (Udupi) ಮಾತನಾಡಿದ ಅವರು, ರಾಷ್ಟ್ರಾದ್ಯಂತ ರಾಮಸೇವಾ ಸಂಕಲ್ಪ ಕೈಗೊಳ್ಳಲು ಪ್ರಧಾನಿಗೆ ಸೂಚನೆ ನೀಡುತ್ತೇನೆ. ದೇವಾಲಯದ ಹುಂಡಿಗೆ ಹಾಕುವ ಹಣ ಹೇಗೆ ವಿನಿಯೋಗ ಆಗುತ್ತೋ ಗೊತ್ತಿಲ್ಲ. ರಾಮ ರಾಜ್ಯಕ್ಕೋಸ್ಕರ ರಾಮಮಂದಿರದ ನಿರ್ಮಾಣ ಆಗುತ್ತಿದೆ. ಮಂದಿರ ಕಟ್ಟುವ ಜೊತೆಗೆ ಬಡವರಿಗೆ ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡೋಣ ಎಂದು ಸ್ವಾಮೀಜಿ ಕರೆ ನೀಡಿದರು.
Advertisement
Advertisement
ಒಂದು ವರ್ಷದ ಅವಧಿಯಲ್ಲಿ 6 ಮನೆ ನಿರ್ಮಿಸಿ ಕೊಡಲು ಸಂಕಲ್ಪಿಸಿದ್ದೇವೆ. ಒಂದು ವರ್ಷದ ಕಾಲಾವಕಾಶದೊಳಗೆ ಬಡವರಿಗೆ ಮನೆ ನಿರ್ಮಾಣ ಮಾಡೋಣ. ಮಂದಿರದಿಂದ ದೇಶಕ್ಕೇನು ಲಾಭ ಅಂತ ಜನ ಕೇಳ್ತಾರೆ? ಮಂದಿರದ ಜೊತೆ ದೇಶದ ಮಂದಿಗೂ ಸಹಾಯ ಮಾಡೋಣ. ಪ್ರಧಾನಿ ಮೋದಿ (Narendra Modi) ಅವರು ಒಂದು ದಿನವನ್ನು ಸಂಕಲ್ಪ ದಿನ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
Advertisement
Advertisement
ದೇಶದ ಭಗವದ್ಭಕ್ತರು, ದೇಶಪ್ರೇಮಿಗಳು ಯೋಜನೆಗೆ ಕೈಜೋಡಿಸಬೇಕು. ಈ ಸೇವಾ ಕಾರ್ಯಕ್ಕೆ ಒಂದು ಆಪ್ ಸಿದ್ಧ ಮಾಡಬೇಕು. ಪ್ರತಿಜಿಲ್ಲೆಯ ರಾಜ್ಯದಲ್ಲಿ ಕೈಗೊಂಡ ಕೆಲಸ ದಾಖಲಾಗಬೇಕು. ಒಂದು ವರ್ಷದ ಉತ್ತಮ ಕಾರ್ಯಗಳನ್ನು ಶ್ರೀರಾಮ ದೇವರಿಗೆ ಅರ್ಪಿಸೋಣ. ಮನೆ ನಿರ್ಮಾಣದ ಜೊತೆ ಗೋವು, ವಿದ್ಯಾರ್ಥಿಗಳು, ರೋಗಿಗಳ ದತ್ತು ಸ್ವೀಕಾರ ಮಾಡೋಣ. ದೇಶದ ಉದ್ದಗಲದಲ್ಲಿ ಜನರಲ್ಲಿ ಈ ಪರಿವರ್ತನೆ ಆಗಬೇಕು ಎಂದರು. ಇದನ್ನೂ ಓದಿ: 13 ಜನ ಸಚಿವರ ಸಿಡಿಗಳು ಚುನಾವಣೆ ಒಳಗೆ ಬಿಡುಗಡೆಯಾಗಲಿದೆ: ಸಿಎಂ ಇಬ್ರಾಹಿಂ ಹೊಸ ಬಾಂಬ್
ದೇಶಾದ್ಯಂತ ಸೇವಾ ಕಾರ್ಯ ಐಚ್ಛಿಕವಾಗದೆ ಕಡ್ಡಾಯ ಆಗಬೇಕು. ಜೀವನದಲ್ಲಿ ವೈಭವದ ಆಚರಣೆಯ ಜೊತೆ ಬಡವರ ಬಗ್ಗೆ ಕನಿಕರ ತೋರೋಣ. ದೇವಭಕ್ತಿ ಮತ್ತು ದೇಶಭಕ್ತಿ ಬೇರೆ ಬೇರೆಯಲ್ಲ. ಈ ಯೋಜನೆಯ ಕುರಿತು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಇದನ್ನೂ ಓದಿ: ಆರೋಗ್ಯ ಇಲಾಖೆಯ ಟೆಂಡರ್ ಕೊಡಿಸದ್ದಕ್ಕೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ: ಶಾಸಕ ತಿಪ್ಪಾರೆಡ್ಡಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k