ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

Public TV
1 Min Read
udupi

ಉಡುಪಿ: ದೇಶದ ಪರ-ವಿರೋಧ ಬಹು ಚರ್ಚಿತ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಎಲ್ಲಾ ಭಾಷೆಗಳಲ್ಲೂ ಬರಲಿ. ಸುಳ್ಳಿನ ಸರಮಾಲೆಯಲ್ಲಿ ಮರೆಯಾಗಿದ್ದ ಸತ್ಯವನ್ನು ಸಮಾಜದ ಮುಂದೆ ಬಿಚ್ಚಿಡುವ ಅವಶ್ಯಕತೆ ಇದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಣಿಪಾಲದ ಭಾರತದಲ್ಲಿ ಚಿತ್ರ ವೀಕ್ಷಿಸಿದ ಸ್ವಾಮೀಜಿ, ಸತ್ಯದ ಆವಿಷ್ಕಾರ ಮಾಡಿದ ನಿರ್ದೇಶಕರಿಗೆ ಅಭಿನಂದನೆ. ನಾವು ಸದಾ ಕಾಲ ಜಾಗೃತರಾಗಿರಬೇಕು ಎಂಬುದು ಈ ಚಿತ್ರದ ಸಂದೇಶ. ಇದು ಆಗಿ ಹೋಗಿದ್ದಲ್ಲ, ಮುಂದಿನ ದಿನ ನಮಗೂ ಈ ಪರಿಸ್ಥಿತಿ ಬರಬಹುದು. ಹೀಗಾಗಿ ಹಿಂದೂಗಳು ಬಹಳ ಎಚ್ಚರವಾಗಿ ಇರಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಮಾಲ್‍ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಿದ ಪೇಜಾವರ ಶ್ರೀ, ಕಾಣಿಯೂರು ಶ್ರೀ

udupi 1

ಈ ಸಿನಿಮಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಅನುವಾದವಾಗಲಿ. ಆ ಕಾಲದಲ್ಲಿ ಪಂಡಿತರು ಉಟ್ಟ ಬಟ್ಟೆಯಲ್ಲಿ ಬದುಕುಳಿದರೆ ಸಾಕೆಂದು ಊರು ಬಿಟ್ಟಿದ್ದರು. ಕಾಶ್ಮೀರ ಪಂಡಿತರು ಸ್ವಸ್ಥಾನಕ್ಕೆ ಮರಳಬೇಕು. ಕಾಶ್ಮೀರದಲ್ಲಿದ್ದ ಹಿಂದಿನ ವೈಭವವನ್ನು ಮತ್ತೆ ನಾವೆಲ್ಲರೂ ಕಾಣಬೇಕು. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ದಾಖಲೆಪತ್ರಗಳು ಮತ್ತಿತರ ವ್ಯವಸ್ಥೆಗಳನ್ನು ಅಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಬೇಕು ಎಂದರು. ಇದನ್ನೂ ಓದಿ: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ- ತಪ್ಪಿದ ಭಾರೀ ಅನಾಹುತ

ಭಾನುವಾರ ಮಣಿಪಾಲದ ಮಾಲ್‌ಗೆ ತೆರಳಿದ್ದ ಉಡುಪಿಯ ಪೇಜಾವರ ಶ್ರೀ ಹಾಗೂ ಕಾಣಿಯೂರು ಸ್ವಾಮೀಜಿ ಜೊತೆಯಾಗಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ವೀಕ್ಷಣೆ ಮಾಡಿದ್ದರು. ಮೊಟ್ಟಮೊದಲ ಬಾರಿಗೆ ಮಾಲ್‌ಗೆ ತೆರಳಿದ್ದ ಸ್ವಾಮೀಜಿಗಳು ನೈಜ ಕಥೆಯಾಧಾರಿತ ಚಿತ್ರ ವೀಕ್ಷಣೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *