ಸಹಬಾಳ್ವೆ ಎಲ್ಲರಿಗೂ ಬೇಕು – ಆಕ್ರಮಣ ಮಾಡಿ ನಿರ್ಮಾಣವಾದ ಮಸೀದಿಗಳಿದ್ದರೆ ಅದು ಸ್ವಚ್ಛ ಆಗಬೇಕು: ಪೇಜಾವರಶ್ರೀ

Public TV
1 Min Read
UDUPI PEJAWARA SRI

ಉಡುಪಿ: ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂ ಸಮಾಜದ ಮೇಲೆ ಎಷ್ಟೋ ಆಕ್ರಮಣಗಳಾಗಿದೆ. ಈಗಲೂ ಆಕ್ರಮಣ ಮುಂದುವರಿಯುತ್ತಿದೆ. ಆಕ್ರಮಣ ಮಾಡಿ ದೇಗುಲ ಕೆಡವಿ ಮಸೀದಿಗಳನ್ನು ಕಟ್ಟಿದ ಜಾಗ ಎಷ್ಟು ಸ್ವಚ್ಛ ಆಗಬೇಕೋ ಅಷ್ಟೂ ಸ್ವಚ್ಛ ಆಗಬೇಕು ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Gyanvapi Masjid

ಜ್ಞಾನವ್ಯಾಪಿ ಮಸೀದಿ ಮತ್ತು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರದಲ್ಲಿ ನಡೆಯುತ್ತಿರುವ ತಿಕ್ಕಾಟದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಕ್ರಮಣಗಳ ಸ್ವಚ್ಛತೆ ಭಾರತ ದೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಆಗಬೇಕು ಎಂದು ಬಯಸುತ್ತೇನೆ. ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಬಗ್ಗೆ ನನಗೆ ಹೆಚ್ಚಿನ ಮಾಹಿತಿಗಳಿಲ್ಲ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಆದರೆ, ಈ ವಿಚಾರ ಕೋರ್ಟ್‍ನಲ್ಲಿ ತೀರ್ಮಾನ ಆಗಬೇಕು. ಅದು ದೇವಸ್ಥಾನ ಹೌದು ಅಂತ ಕೋರ್ಟ್ ತೀರ್ಮಾನ ಮಾಡಿದರೆ ಅದು ಹೌದು. ಅದು ದೇವಸ್ಥಾನ ಅಲ್ಲ ಎಂದು ಕೋರ್ಟ್ ತೀರ್ಮಾನಿಸಿದರೆ ಅದು ಅಲ್ಲ ಎಂದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

MND JAMIYA MASIDI

ಪ್ರಸಕ್ತ ಬೆಳವಣಿಗೆಗಳಲ್ಲಿ ಸಾಮರಸ್ಯ ಕದಡುವ ಪ್ರಶ್ನೆಯೇ ಇಲ್ಲ. ಕೋರ್ಟ್ ತೀರ್ಮಾನಕ್ಕೆ ಯಾರೂ ವಿರೋಧಗಳನ್ನು ವ್ಯಕ್ತಪಡಿಸಬಾರದು. ಸಮಾಜದಲ್ಲಿ ಸೌಹಾರ್ದ ಬೆಳೆಯಬೇಕು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಹೊಣೆಯಾಗಬೇಕಾಗಿಲ್ಲ. ಯಾರೇ ಆಗಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು ಧಾರ್ಮಿಕ ಕೇಂದ್ರ ಬಿಟ್ಟುಕೊಡಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನೇಪಾಳ ಪ್ರವಾಸ – ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ, ಬುದ್ಧನಿಗೆ ಭಕ್ತಿಭಾವದ ನಮನ

Share This Article
Leave a Comment

Leave a Reply

Your email address will not be published. Required fields are marked *