DavanagereDistrictsKarnatakaLatestMain Post
ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ವಿಶೇಷ ಪಾರಾಯಣ

ದಾವಣಗೆರೆ: ಉಡುಪಿಯ ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ದಾವಣಗೆರೆಯ ಎಂಸಿಸಿ ಎ ಬ್ಲಾಕ್ ನಲ್ಲಿ ಕೃಷ್ಣ ಕಲಾ ಮಂದಿರದಲ್ಲಿ ಶ್ರೀಗಳ ಭಕ್ತರು ವಿಶೇಷ ಪಾರಾಯಣ ಹಾಗೂ ಹೋಮ ನೆರವೇರಿಸಿದ್ರು.
ಕೃಷ್ಣ ಕಲಾ ಮಂದಿರದಲ್ಲಿ ನೂರಾರು ಭಕ್ತರಿಂದ ಹೋಮ, ಮನ್ಯು ಪಾರಾಯಣ, ವಿಷ್ಣು ಸಹಸ್ರನಾಮ, ಕೃಷ್ಟ ಅಷ್ಟೋತ್ತರ ಹಾಗೂ ವೆಂಕಟೇಶ್ವರ ಸ್ತೋತ್ರ ಪಾರಾಯಣ ಜರುಗಿತು. ಪೇಜಾವರ ಶ್ರೀಪಾದಂಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿ. ಎಂದಿನಂತೆ ಪೂಜೆ ಹಾಗೂ ಜಗತ್ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಭಕ್ತರು ಪ್ರಾರ್ಥಿಸಿದರು.
ಬ್ರಾಹ್ಮಣ ಸಮಾಜದಿಂದ ಪೂಜೆ, ಪಾರಾಯಣ ಹಾಗೂ ಹೋಮ ನಡೆಸುತ್ತಿದ್ದು, ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಹುಟ್ಟಿದ್ದು, ಆರೋಗ್ಯದಲ್ಲಿ ಬೇಗ ಚೇತರಿಕೆಯಾಗಲಿ ಎಂದು ಪೇಜಾವರ ಶ್ರೀಗಳ ಫೋಟೋ ಇಟ್ಟು ಹೋಮ ಮಾಡಿ ಪ್ರಾರ್ಥನೆ ಸಲ್ಲಿಸಲಾಯ್ತು.