ಉಡುಪಿ: ದೇಶಭಕ್ತಿ ಮತ್ತು ಸೈನಿಕರ ಜೀವನಗಾಥೆಯನ್ನು ಸಾರುವ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ನೋಡಿದ್ದಾರೆ. ಚಿತ್ರ ವೀಕ್ಷಣೆ ವೇಳೆ ಮೂರ್ನಾಲ್ಕು ಬಾರಿ ಸ್ವಾಮೀಜಿ ಕಣ್ಣೀರು ಹಾಕಿದ್ದಾರೆ.
ಸ್ವಾಮೀಜಿ ಗುರುವಾರ ರಾತ್ರಿ 10 ಗಂಟೆಗೆ ಮಣಿಪಾಲದ ಭಾರತ್ ಮಾಲ್ ನಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ದೇಶಭಕ್ತಿ ಸಾರುವ ಚಿತ್ರ ಇದಾಗಿದ್ದು, ಪೇಜಾವರ ಶಿಷ್ಯ ವಿಶ್ವ ಪ್ರಸನ್ನ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರ ಜೊತೆಯಾಗಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ನೂರಾರು ಶಿಷ್ಯರ ಜೊತೆಗೆ ಚಿತ್ರ ವೀಕ್ಷಿಸುವ ವೇಳೆ ಸ್ವಾಮೀಜಿ ಅವರು ಎರಡು ಮೂರು ಬಾರಿ ಕಣ್ಣೀರು ಹಾಕಿದ್ದಾರೆ.
Advertisement
Advertisement
ಚಿತ್ರ ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಉರಿ ಸಿನಿಮಾವನ್ನು ನೋಡಿದೆ. ಸಿನಿಮಾ ನೋಡಿ, ಸೈನಿಕರ ಬಗ್ಗೆ ಬಹಳ ಅಭಿಮಾನ ಗೌರವ ಬೆಳೆಯಿತು. ಸಿನಿಮಾದಲ್ಲಿ ಯೋಧರ ಕೆಲಸದ ಚಿತ್ರಣ ಸಿಕ್ಕಿತು. ಯೋಧರ ಕುಟುಂಬದವರು ಸರ್ಕಾರದ ಸಂಬಳ ಪಡೆಯುವವರು ಬಹಳ ಜನ ಇದ್ದಾರೆ. ಯೋಧರಷ್ಟು ಶ್ರಮ ವೇದನೆ ಪಡುವವರು ಯಾರೂ ಇಲ್ಲ ಎಂಬ ಅನುಭವವಾಯಿತು ಎಂದರು.
Advertisement
ಯೋಧರು ಜೀವನವನ್ನೇ ದೇಶದ ಜನಕ್ಕೆ ಮುಡಿಪಾಗಿಟ್ಟಿದ್ದಾರೆ. ಅವರ ಕೆಲಸಕ್ಕೆ ನಾವೆಲ್ಲ ತಲೆಬಾಗಬೇಕು. ಉರಿ ಚಿತ್ರ ನೋಡುತ್ತಾ ಮೂರ್ನಾಲ್ಕು ಬಾರಿ ಕಣ್ಣೀರು ಬಂತು ಎಂದು ಸ್ವಾಮೀಜಿ ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv