ಬೀದರ್: ಫೀರ್ ಪಾಶಾ ದರ್ಗಾ ಮತ್ತು ಮೂಲ ಅನುಭವ ಮಂಟಪದ ವಿವಾದದ ಹಿನ್ನೆಲೆ ನಗರದಲ್ಲಿ ಇಂದು 770 ಮಠಾಧೀಶರಿಂದ ಬೃಹತ್ ಸಮಾವೇಶ ನಡೆಯಲಿದೆ.
ಮೂಲ ಅನುಭವ ಮಂಟಪಕ್ಕಾಗಿ ಇಂದು ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಎಂಬ ಬೃಹತ್ ಸಮಾವೇಶ ನಡೆಯಲಿದೆ. ಬಸವಕಲ್ಯಾಣದ ತೇರು ಮೈದಾನದ ಸಭಾ ಭವನದಲ್ಲಿ ನಡೆಯಲಿದೆ. ನೂರಾರು ಮಠಾಧೀಶರು ಹಾಗೂ ಸಾವಿರಾರು ಬಸವ ಭಕ್ತರು ಹಾಗೂ ಜನಪ್ರತಿನಿಗಳು ಭಾಗಿಯಾಗಲಿದ್ದಾರೆ. ಜೊತೆಗೆ ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲನ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
Advertisement
Advertisement
10 ಗಂಟೆಗೆ ವಿವಿಧ ಮಠಾಧೀಶರಿಂದ ಕಲ್ಯಾಣದ ಬಸವ ಕೇಂದ್ರದಲ್ಲಿ ಇಷ್ಟಲಿಂಗ ಪೂಜೆ ಜರುಗಲಿದೆ. ಬಳಿಕ ಮೆರವಣಿಗೆ ಮೂಲಕ ತೇರು ಮೈದಾನಕ್ಕೆ ಮಠಾಧೀಶರ ಆಗಮನವಾಗುತ್ತದೆ. ಸಭಾ ಭವನದಲ್ಲಿ ಮಠಾಧೀಶರ ಚಿಂತನ – ಮಂಥನ ಕಾರ್ಯಕ್ರಮ ನಡೆಯಲಿದೆ.
Advertisement
Advertisement
ಈಗಾಗಲೇ ಮಠಾಧೀಶರು ಮೂಲ ಅನುಭವ ಮಂಟಪವನ್ನು ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಬೇಕು ಎಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿರುವ ಕಲ್ಯಾಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.