ಪೀಣ್ಯ ಫ್ಲೈಓವರ್‌ ಲೋಡ್‌ ಪರೀಕ್ಷೆ ಪೂರ್ಣ; ಇಂದಿನಿಂದ ಲಘು ಮೋಟಾರ್‌, ಗೂಡ್ಸ್‌ ವಾಹನಗಳ ಸಂಚಾರಕ್ಕೆ ಅವಕಾಶ

Public TV
1 Min Read
peenya flyover 2

ಬೆಂಗಳೂರು: ಪೀಣ್ಯ ಫ್ಲೈಓವರ್‌ (Peenya Flyover) ಲೋಡ್‌ ಪರೀಕ್ಷೆ ಪೂರ್ಣಗೊಂಡಿದ್ದು, ಇಂದಿನಿಂದ ಲಘು ಮೋಟಾರ್ ವಾಹನಗಳು ಮತ್ತು ಲಘು ಗೂಡ್ಸ್‌ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶುಕ್ರವಾರದಿಂದ (ಜ.19) ಬೆಳಗ್ಗೆ 11 ಗಂಟೆಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲೋಡ್ ಟೆಸ್ಟಿಂಗ್ ವರದಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ. ಇದನ್ನೂ ಓದಿ: ಕಲಬುರಗಿಗೆ ನಮೋ ಆಗಮನ – ಗಣ್ಯರಿಂದ ಸ್ವಾಗತ

Peenya Flyover 1

ಸುಮಾರು ಮೂರು ವರ್ಷದಿಂದ ಪೀಣ್ಯ ಫ್ಲೈಓವರ್ ಭಾರಿ ವಾಹನಗಳಿಗೆ ಬಂದ್ ಆಗಿದೆ. 2021ರಲ್ಲಿ ಪೀಣ್ಯ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿತ್ತು. ಪೀಣ್ಯ ಫ್ಲೈಓವರ್‌ನ ಗುಣಮಟ್ಟ ಸರಿಯಿಲ್ಲ, ಕಳಪೆ ಕಾಮಾಗಾರಿ, ಇಡೀ ಫ್ಲೈಓವರ್ ಅನ್ನು ಕೆಡವಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಕೆಲ ದಿನಗಳ ನಂತರ ಸಣ್ಣಪುಟ್ಟ ಕಾಮಾಗಾರಿ ಮಾಡಿ ಕೆಲ ಕೇಬಲ್‌ಗಳನ್ನು ಅಳವಡಿಸಿ ಸಣ್ಣ ಪ್ರಮಾಣದ ವೆಹಿಕಲ್ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು. ಫ್ಲೈಓವರ್ ಮೇಲೆ ಸಂಪೂರ್ಣವಾಗಿ ಹೆವಿ ವೆಹಿಕಲ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು.

ಲೋಡ್ ಟೆಸ್ಟಿಂಗ್‌ಗಾಗಿ (Load Testing) ಎನ್‌ಹೆಚ್‌ಎ (NHA) ಮನವಿ ಮಾಡಿಕೊಂಡಿತ್ತು. ಹೀಗಾಗಿ ಸಂಚಾರಿ ಪೊಲೀಸರು ಇಂದಿನಿಂದ ಫ್ಲೈಓವರ್ ಕ್ಲೋಸ್ ಮಾಡಿದ್ದರು. ಈಗ ಲೋಡ್‌ ಪರೀಕ್ಷೆ ಮುಗಿದಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣಗೆ ಅಗ್ನಿ ಪರೀಕ್ಷೆ; ಚುನಾವಣೆಯಲ್ಲಿ ಅಕ್ರಮ ಆರೋಪ ಪ್ರಕರಣ ಸುಪ್ರೀಂನಲ್ಲಿ ಇಂದು ವಿಚಾರಣೆ

Share This Article