ಇತ್ತೀಚೆಗೆ ಇನ್‍ಸ್ಟಾಗ್ರಾಮ್ ರೀಲ್ಸ್ ತೆರೆಯುತ್ತಿದ್ದಂತೆ ಅತೀ ಹೆಚ್ಚು ಕೇಳಿಸುತ್ತಿರುವ ಹಾಡು ಅದುವೇ ಕಚ್ಚಾ ಬಾದಾಮ್. ದೇಶಾದ್ಯಂತ ಮಾತ್ರವಲ್ಲದೇ ಪ್ರಪಂಚದ ಮೂಲೆ ಮೂಲೆಗಳಿಂದ ರೀಲ್ಸ್ ಪ್ರಿಯರು ಈ ಹಾಡಿನ ಚ್ಯಾಲೆಂಜ್ ಸ್ವೀಕರಿಸಿ ಡ್ಯಾನ್ಸ್ ಮಾಡಿದ್ದಾರೆ.
ಅಷ್ಟಕ್ಕೂ ಈ ಹಾಡನ್ನು ಅಸ್ತಿತ್ವಕ್ಕೆ ತಂದವನು ಒಬ್ಬ ಕಡಲೆಕಾಯಿ ಮಾರಾಟಗಾರ ಎಂಬ ವಿಷಯ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ಭುವನ್ ಬಡ್ಯಾಕರ್ ಎಂಬ ಕಡಲೆಕಾಯಿ ವ್ಯಾಪಾರಿಯ ಈ ಹಾಡು ಇತ್ತೀಚಿನ ಇನ್‍ಸ್ಟಾಗ್ರಾಮ್ ರೀಲ್ಸ್‍ನ ಟ್ರೆಂಡ್ ಪಟ್ಟಿಯಲ್ಲಿ ಸೇರಿದೆ.
Advertisement
Advertisement
ಈ ಹಾಡಿನ ಅರ್ಥ ಏನು ಎಂಬುದು ಹಲವರಿಗೆ ತಿಳಿಯದೇ ಹೋಗಿರುವುದು ನಿಜವೇ. ಅಷ್ಟಕ್ಕೂ ಈ ಭುವನ್ ಯಾರು ಎಂಬೆಲ್ಲಾ ಗೊಂದಲ ನಿಮ್ಮಲ್ಲಿ ಇದ್ದರೆ ಇದನ್ನು ಓದಿ. ಇದನ್ನೂ ಓದಿ: ಕಾಗೆ ಕಾಟಕ್ಕೆ ಚಿತ್ರದುರ್ಗದ ಓಬಳಾಪುರ ಜನ ಸುಸ್ತು..!
Advertisement
ಪಶ್ಚಿಮ ಬಂಗಾಳದ ಬಿರ್‍ಭೂಮ್ ಜಿಲ್ಲೆಯ ಲಕ್ಷೀನಾರಾಯಣಪುರದ ನಿವಾಸಿ ಭುವನ್ ಬಡ್ಯಾಕರ್ ಪ್ರತೀ ದಿನ ಕಡಲೆಕಾಯಿ ಮಾರಾಟ ಮಾಡಲು ಸೈಕಲ್‍ನಲ್ಲಿ ಊರಿಂದೂರಿಗೆ ಪ್ರಯಾಣಿಸುತ್ತಾರೆ. ಕಡಲೆಕಾಯಿ ಮಾರಾಟದಿಂದ ಪ್ರತೀ ದಿನ 250 ರೂ. ಸಂಪಾದಿಸುವ ಭುವನ್ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.
Advertisement
This kacha badam vendor deserves
Thousands of likes ! pic.twitter.com/Q5owPRGTHf
— MotaBhai (@Motabhai4U) January 26, 2022
ಪೇರ್ ಚುರಾ ಹಾಥೇರ್ ಬಾಲಾ ಥಾಕೆ ಜೋಡಿ ಸಿಟಿ ಗೋಲ್ಡ್ ಎರ್ ಚೈನ್ ದಿಯೆ ಜಬೆನ್ ಟೇಟ್ ಶೋಮನ್ ಶೋಮನ್ ಬಾದಾಮ್ ಪಬೆನ್. ಅಂದರೆ ನಿಮ್ಮ ಬಳಿ ಬಳೆ ಅಥವಾ ಸರ ಇದ್ದರೆ ಅವುಗಳನ್ನು ನನಗೆ ನೀಡಬಹುದು. ನಾನು ಅದಕ್ಕೆ ಸಮಾನ ಭಾಗದ ಕಡಲೆಕಾಯಿಯನ್ನು ನಿಮಗೆ ನೀಡುತ್ತೇನೆ ಎಂಬುದು ಈ ಹಾಡಿನ ಅರ್ಥ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್
ಭುವನ್ ಅವರು ಈ ಹಾಡನ್ನು ಹೇಳಿಕೊಂಡು ಕಡಲೆಕಾಯಿ ಮಾರಾಟ ಮಾಡುತ್ತಿದ್ದುದನ್ನು ನಿವಾಸಿಗರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋವನ್ನು ಮೊದಲ ಬಾರಿಗೆ 2021ರ ನವೆಂಬರ್‍ನಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಕಡಲೆಕಾಯಿ ಮಾರುವವನ ಹಾಡನ್ನು ನೆಟ್ಟಿಗರು ಹಲವು ಮ್ಯೂಸಿಕ್‍ನೊಂದಿಗೆ ರಿಮಿಕ್ಸ್ ಮಾಡಿ ಇನ್‍ಸ್ಟಾಗ್ರಾಮ್‍ನಲ್ಲಿ ಡ್ಯಾನ್ಸ್ ರೀಲ್ಸ್‍ಗಳಿಗೆ ಬಳಸುತ್ತಿದ್ದಾರೆ.