ಬೆಂಗಳೂರು: ಸೋಲು ಯಾವಾಗಲೂ ಹಾಗೆ ಅನಾಥ. ಗೆಲುವಿಗಷ್ಟೇ ಮಾಲೀಕ ಎಂಬದು ಎಲ್ಲರ ಆಟ. ಇದು ಬಿಜೆಪಿ ಮನೆಯೊಳಗಿನ ನೆಮ್ಮದಿಯನ್ನು ಕೆಡಿಸಿದೆ. ಬಹಿರಂಗ ಗುದ್ದಾಟದಿಂದ ಬಿಜೆಪಿ ಶಿಸ್ತು ಕುಸಿತಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಡೆದಿದೆ. ಆದರೆ ರೇಣುಕಾಚಾರ್ಯ (MP Renukacharya) ಮಾತ್ರ ಬಿಜೆಪಿ (BJP) ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿಯ ಡ್ಯಾಮೇಜ್ ಕಂಟ್ರೋಲ್ ಸಭೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ.
3 ತಿಂಗಳ ಹಿಂದೆ ತಿಳಿ ನೀರಿನ ಕೊಳದಲ್ಲಿ ಕಮಲ ನಳನಳಿಸುತ್ತಿತ್ತು. ಆದರೆ ಮೇ 13ರ ಬಳಿಕ ಕದಡಿದ ಕೊಳದಲ್ಲಿ ಕಮಲ ವಿಲವಿಲ ಅಂತಿದೆ. ಸೋಲಿನ ಕಹಿ ಬಿಜೆಪಿ ನಾಯಕರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಹೊಂದಾಣಿಕೆ ರಾಜಕಾರಣದ ಕಿಡಿ ಹೊತ್ತಿ ಬೇಯುತ್ತಿದೆ. ಡಜನ್‌ಗೂ ಹೆಚ್ಚು ನಾಯಕರು ಬಹಿರಂಗವಾಗಿ ವಾಕ್ಸಮರಕ್ಕೆ ಇಳಿದಿದ್ದಾರೆ.
Advertisement
Advertisement
ಇದರ ಬೆನ್ನಲ್ಲೇ ವರದಿ ಪಡೆದ ಬಿಜೆಪಿ ಹೈಕಮಾಂಡ್ ಶಿಸ್ತಿನ ಗೆರೆ ಅಳಿಸಿ ಹೋಗದಂತೆ ತಡೆಯಬೇಕೆಂಬ ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಕಟೀಲ್, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಸಿಟಿ ರವಿ ಒಳಗೊಂಡ ಐವರು ನಾಯಕರ ನೇತೃತ್ವದಲ್ಲಿ ವಿವರಣೆ ಪಡೆದು ಎಚ್ಚರಿಕೆ ಕೊಡುವ ಸಭೆ ನಡೆಸಿದರು. ಬಹಿರಂಗವಾಗಿ ಮಾತನಾಡಿದ್ದ 11 ಮಂದಿಗೆ ಸಭೆಗೆ ನೋಟಿಸ್ ನೀಡಿದರು. ಆದರೆ ಬಂದಿದ್ದು ಮಾತ್ರ 6 ಜನ. ರೇಣುಕಾಚಾರ್ಯ ಸೇರಿದಂತೆ ಉಳಿದ ಐವರು ಸಭೆಗೆ ಗೈರಾಗಿದ್ದರು. ಎಲ್ಲರನ್ನು ಕರೆಸಿ ಮಾತನಾಡಿದ್ದು, ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಬಿಜೆಪಿ ನಾಯಕರು ತಿಳಿಸಿದರು.
Advertisement
Advertisement
ಈ ನಡುವೆ ಬಿಜೆಪಿ ನಾಯಕರ ಎದುರು ಯತ್ನಾಳ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ನನ್ನ ಭಾಷಣದಲ್ಲಿ ಆಡಿರುವ ಮಾತು ಯಾವುದಾದರೂ ಪಕ್ಷದ ವಿರುದ್ಧ ಇದೆಯಾ? ರೆಕಾರ್ಡ್‌ಗಳನ್ನು ತರಿಸಿಕೊಂಡು ನೋಡಿ. ನಾನು ಯಾರನ್ನು ಸೋಲಿಸಲು ಕೆಲಸ ಮಾಡಿಲ್ಲ. ಇನ್ನೂ ನನ್ನನ್ನೇ ಸೋಲಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಶಕ್ತಿ ಯೋಜನೆ ರದ್ದು ಮಾಡಿ- ಸಿಎಂಗೆ ಆಟೋ ಚಾಲಕರ ಮನವಿ
ಇನ್ನು ಪ್ರತಾಪ್ ಸಿಂಹ ತಾವು ಹೇಳಿಕೆ ಕೊಟ್ಟ ಬಗೆ, ಸಂದರ್ಭಗಳನ್ನು ಬಿಡಿಸಿ ಹೇಳಿದ್ದಾರೆ ಎಂಬುದು ಮೂಲಗಳ ಮಾಹಿತಿ. ಇನ್ನೊಂದೆಡೆ ಮಾಜಿ ಶಾಸಕ ರೇಣುಕಾಚಾರ್ಯ ನಾಯಕರ ಸಭೆಗೂ ತೆರಳದೆ ಮತ್ತೆ ಬಹಿರಂಗವಾಗಿ ಟೀಕೆ ಮಾಡುವ ಮೂಲಕ ಸೆಡ್ಡು ಹೊಡೆದಿದ್ದಾರೆ. ಆದರೆ ರೇಣುಕಾಚಾರ್ಯ ಕರೆದು ಮಾತನಾಡಲು ಯಡಿಯೂರಪ್ಪ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಒಟ್ಟಿನಲ್ಲಿ ಉರಿದುರಿದು ಬೀಳುವ ಮನೆಯಂತಾಗಿರುವ ಬಿಜೆಪಿಗೀಗ ತಣ್ಣನೆ ವಾತವಾರಣದ ಅವಶ್ಯಕತೆ ಇದೆ. ಹೈಕಮಾಂಡ್ ಸಲಹೆ ಮೇರೆಗೆ ರಾಜ್ಯ ನಾಯಕರ ಪ್ರಯತ್ನಕ್ಕೆ ಫಲ ಸಿಗುತ್ತಾ? ನಾಯಕರ ನಡುವೆ ಶಾಂತತೆ ನೆಲೆಸುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್
Web Stories