ನವದೆಹಲಿ: ಪಿಸಿಎಸ್ ಮಹಿಳಾ ಅಧಿಕಾರಿಯೊಬ್ಬರು ತಾವು ನೋಡಲು ಸುಂದರವಾಗಿ ಕಾಣುತ್ತಿಲ್ಲ ಅಂತಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
26 ವರ್ಷದ ಜೂಹಿ ರೂಪಾ ಆತ್ಮಹತ್ಯೆಗೆ ಶರಣಾದ ಅಧಿಕಾರಿಯಾಗಿದ್ದು, ಉತ್ತರ ದೆಹಲಿಯ ಗಾಂಧೀ ಬಿಹಾರದಲ್ಲಿ ಈ ಘಟನೆ ಜನವರಿ 1ರಂದು ನಡೆದಿದೆ.
ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ನನ್ನ ಸಾವಿಗೆ ಯಾರು ಕಾರಣವಲ್ಲ. ನಾನು ಚೆನ್ನಾಗಿ ಕಾಣಿಸುವುದಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತಾ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಜೂಹಿ ಮೂಲತಃ ಉತ್ತರಾಖಂಡ್ ರಾಜ್ಯದ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಯುಪಿಎಸ್‍ಸಿ ತರಬೇತಿಗಾಗಿ ದೆಹಲಿಯ ಗಾಂಧೀ ಬಿಹಾರ್‍ನಲ್ಲಿ ವಾಸವಾಗಿದ್ರು.
ಡಿಸೆಂಬರ್ 31ರ ರಾತ್ರಿ ಗೆಳತಿಯರೊಂದಿಗೆ ಹೊಸ ವರ್ಷ ಆಚರಿಸಿದ ನಂತರ ಜೂಹಿ ತಮ್ಮ ಕೋಣೆ ಸೇರಿಕೊಂಡಿದ್ದರು. ಸೋಮವಾರ ಜೂಹಿ ಬಾಗಿಲು ತೆಗೆಯದೇ ಇದ್ದ ಕಾರಣ ಗೆಳತಿ ಕಲ್ಪನಾ ಕಿಟಕಿಯ ಮೂಲಕ ಇಣುಕಿ ನೋಡಿದ್ದಾರೆ. ಕೋಣೆಯಲ್ಲಿಯ ಫ್ಯಾನಿಗೆ ಜೂಹಿ ಶವ ನೇತಾಡುತ್ತಿದ್ದನ್ನು ಕಂಡ ಕಲ್ಪನಾ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಜೂಹಿಗೆ ಮದುವೆಯಾಗಿದ್ದು, ಪತಿ ಉತ್ತರಾಖಂಡ್‍ನಲ್ಲಿ ವಾಸವಾಗಿದ್ದಾರೆ. ಇಬ್ಬರೂ ಮಧ್ಯೆಯೂ ಪದೇ ಪದೇ ಜಗಳ ನಡೆಯುತ್ತಿದ್ದರಿಂದ ವಿಚ್ಛೇದನ ಪಡೆಯುವ ಬಗ್ಗೆ ಯೋಚಿಸುತ್ತಿದ್ದರು. ನೀನು ನೋಡಲು ಚೆನ್ನಾಗಿಲ್ಲ ಅಂತಾ ಪತಿ ಪದೇ ಪದೇ ವ್ಯಂಗ್ಯ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯ ಮಾತುಗಳಿಂದ ಬೇಸರಗೊಂಡು ಜೂಹಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಜೂಹಿ ತಮ್ಮ ಡೆತ್ ನೋಟ್ ನಲ್ಲಿ ತಾನು ಮುಂದೆ ಐಎಎಸ್ ಅಧಿಕಾರಿ ಆಗಬೇಕು ಎಂದು ಕನಸನ್ನು ಹೊಂದಿದ್ದೆ ಅಂತಾ ಬರೆದಿದ್ದಾರೆ.