ಇಸ್ಲಾಮಾಬಾದ್: ಭಾರತ ತಂಡ (Team India) ಪಾಕಿಸ್ತಾನಕ್ಕೆ (Pakistan) ಬಾರದೇ ಇದ್ದರೂ ನಾವು ಚಾಂಪಿಯನ್ಸ್ ಟ್ರೋಫಿ (Champions Trophy) ಆಯೋಜಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಐಸಿಸಿ ತಿಳಿಸಿದೆ ಎಂದು ವರದಿಯಾಗಿದೆ.
ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ನಡೆಸಲು ಸಾಧ್ಯವೇ ಎಂದು ಐಸಿಸಿ (ICC) ಪಿಸಿಬಿಯನ್ನು ಕೇಳಿತ್ತು. ಈ ಪ್ರಶ್ನೆಗೆ ಪಿಸಿಬಿ ಭಾರತ ತಂಡ ಪಾಕ್‌ಗೆ ಬರಲಿ ಅಥವಾ ಬಾರದೇ ಇದ್ದರೂ ಇದ್ದರೂ ನಾವು ಟೂರ್ನಿಯನ್ನು ಆಯೋಜಿಸುಸುತ್ತೇವೆ ಎಂದು ಪತ್ರ ಬರೆದಿದೆ.
ಭದ್ರತಾ ದೃಷ್ಟಿಯಿಂದ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿತ್ತು. ಬಳಿಕ ದುಬೈಯಲ್ಲಿ (Dubai) ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ನಡೆಸುವ ಬಗ್ಗೆ ಪ್ರಸ್ತಾಪವಾಗಿತ್ತು. ಈಗ ಈ ಎಲ್ಲಾ ಪ್ರಸ್ತಾಪವನ್ನು ಪಾಕಿಸ್ತಾನ ನಿರಾಕರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್
ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಇತ್ತೀಚೆಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಅಂತಹ ವ್ಯವಸ್ಥೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಹೇಳಿದ್ದರು.
ಈಗಾಗಲೇ ಟಿವಿ ರೈಟ್ಸ್ ಮಾರಾಟವಾಗಿರುವ ಕಾರಣ ಭಾರತ ತಂಡ ಒಂದು ವೇಳೆ ಭಾಗವಹಿಸದೇ ಇದ್ದರೆ ಐಸಿಸಿಗೆ ಭಾರೀ ನಷ್ಟವಾಗಲಿದೆ. ಹೀಗಾಗಿ ಐಸಿಸಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ. 2025ರ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸಲು ಐಸಿಸಿ ಸಿದ್ಧತೆ ನಡೆಸಿದೆ.
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ (Rahul Dravid) ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ನಂತರ ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.
ಭಾರತ ಮತ್ತು ಪಾಕಿಸ್ತಾನ ಇತ್ತಂಡಗಳ ನಡುವಿನ ಪಂದ್ಯವು ಯಾವಾಗಲೂ ರಣರೋಚಕವಾಗಿರುತ್ತವೆ. 2023 ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು.