ನವದೆಹಲಿ: ವಿಶ್ವಕಪ್‍ನಲ್ಲಿ (ICC World Cup 2023) ಪಾಕ್ ತಂಡ ವಿಫಲವಾಗಬೇಕೆಂಬುದು ಪಿಸಿಬಿ (PCB) ಉದ್ದೇಶವಾಗಿದೆ ಎಂದು ಪಾಕಿಸ್ತಾನ (Pakistan) ತಂಡದ ಹಿರಿಯ ಆಟಗಾರರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.
ತಂಡವು ವಿಫಲವಾಗಬೇಕೆಂದು ಪಿಸಿಬಿ ಬಯಸುತ್ತಿದೆ. ತಂಡದಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಲ್ಲಿ ಪಿಸಿಬಿ ಇದೆ. ಹೀಗಾಗಿಯೇ ನಾವು ವಿಶ್ವಕಪ್ ಕಪ್ ಗೆಲ್ಲುವುದನ್ನು ಪಿಸಿಬಿ ಬಯಸುವುದಿಲ್ಲ ಎಂದು ಹೆಸರನ್ನು ಬಹಿರಂಗ ಪಡಿಸದಂತೆ ಸೂಚಿಸಿ ಪಾಕ್ ಆಟಗಾರರೊಬ್ಬರು ಈ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪಾಕ್ ತಂಡಕ್ಕೆ ಇನ್ಮುಂದೆ ಬಿರಿಯಾನಿ ಬಂದ್ – ಆನ್‌ಲೈನ್‌ನಲ್ಲಿ ಬುಕ್ ಮಾಡಿ ಸಿಕ್ಕಿಬಿದ್ದ ಆಟಗಾರರು
Advertisement
ಕ್ರೀಡಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪಿಸಿಬಿ ಎಲ್ಲಾ ಆಟಗಾರರನ್ನೂ ದೂಷಿಸುತ್ತಿದೆ. ನಮ್ಮ ಆಟಗಾರರು ನಿಜವಾಗಿಯೂ ತಮ್ಮ ಪ್ರಯತ್ನವನ್ನು ಮಾಡಿದ್ದಾರೆ. ಕೋಚಿಂಗ್ ಸಿಬ್ಬಂದಿ ಹಾಗೂ ಆಟಗಾರರ ಶ್ರಮ ಬಹಳಷ್ಟಿದೆ ಎಂದಿದ್ದಾರೆ.
Advertisement
Advertisement
ಕಳೆದ ಐದು ತಿಂಗಳಿನಿಂದ ಪಾಕಿಸ್ತಾನ ಆಟಗಾರರಿಗೆ ವೇತನವೇ ಬಿಡುಗಡೆಯಾಗಿಲ್ಲ. ಈ ಬಗ್ಗೆ ನಾಯಕ ಫೋನ್ ಮಾಡಿದರೆ ಪಿಸಿಬಿ ಅಧ್ಯಕ್ಷ ಝಾಖಾ ಆಶ್ರಫ್ ಕರೆ ಸ್ವೀಕರಿಸುತ್ತಿಲ್ಲ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಅ.30 ರಂದು ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಇಂಜಿಮಾಮ್ ಉಲ್ ಹಕ್ ರಾಜೀನಾಮೆ ನೀಡಿದ್ದಾರೆ. ಇಂಜಿಮಾಮ್ ಅವರ ವಿರುದ್ಧ ಕೆಲವು ಆರೋಪಗಳು ಕೇಳಿಬಂದಿದ್ದು ಈ ಬಗ್ಗೆ ಪಿಸಿಬಿ ತನಿಖೆಗೆ ಮುಂದಾಗಿದೆ ಎಂದಿದ್ದಾರೆ.
Advertisement
ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಗೆಲುವು ಕಂಡಿದ್ದ ಪಾಕಿಸ್ತಾನ ಆ ನಂತರ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಬಾಬರ್ ಪಡೆ ಸೋಲು ಕಂಡಿದೆ. ಈ ಮೂಲಕ ಬಲಿಷ್ಠ ತಂಡವಾಗಿದ್ದ ಪಾಕ್ ಸತತ 4 ಪಂದ್ಯಗಳನ್ನು ಸೋಲುವ ಮೂಲಕ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಇದನ್ನೂ ಓದಿ: IPL 2024: ನಿವೃತ್ತಿ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಹಿ – ಅಭಿಮಾನಿಗಳಿಗೆ ಬಿಗ್ ಶಾಕ್!
Web Stories