ಇಸ್ಲಾಮಾಬಾದ್/ಅಬುಧಾಬಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ಫೆಬ್ರವರಿ 23ರ ಸೂಪರ್ ಸಂಡೇ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬ್ಲಾಕ್‌ಬಸ್ಟರ್ ಪಂದ್ಯಕ್ಕಾಗಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 30 ಆಸನಗಳ ವಿಐಪಿ ಬಾಕ್ಸ್ ಟಿಕೆಟ್‌ಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ (PCB Chairman Mohsin Naqvi) ಮಾರಿಕೊಂಡಿದ್ದಾರೆ ಎಂದು ವರದಿಯಾಗಿದೆ.
Advertisement
ಹೌದು.. ಭದ್ರತಾ ಕಾರಣಗಳಿಂದ ಈ ಬಾರಿಯ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಹಾಗಾಗಿ ದುಬೈನಲ್ಲಿ ನಡೆಯುವ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಉತ್ತಮ ಆಸನ, ವಿಶೇಷ ಸೌಕರ್ಯವುಳ್ಳ ಬಾಕ್ಸ್‌ನಲ್ಲಿ ತಮ್ಮ ಕುಟುಂಬ, ಆಪ್ತರೊಂದಿಗೆ ಕುಳಿತು ವೀಕ್ಷಿಸಲು ನಖ್ವಿ ಅವರಿಗೆ ಸುಮಾರು 95 ಲಕ್ಷ ರೂ. (4 ಲಕ್ಷ ದುಬೈ ಕರೆನ್ಸಿ) ಬೆಲೆಯ 30 ವಿಐಪಿ ಆಸನದ ಟಿಕೆಟ್‌ಗಳನ್ನು (VIP box Tickets) ನೀಡಲಾಗಿತ್ತು. ಆದ್ರೆ ಈ ಟಿಕೆಟ್‌ಗಳನ್ನ ಪಿಸಿಬಿ ಅಧ್ಯಕ್ಷ ಬರೋಬ್ಬರಿ 3.5 ಕೋಟಿ ರೂ. (ಸುಮಾರು 4 ಲಕ್ಷ ಡಾಲರ್)ಗೆ ಮಾರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇಂದಿನಿಂದ ಚಾಂಪಿಯನ್ಸ್ ಟ್ರೋಫಿ – ಭಾರತದ ಮೂವರು ʻಚಾಂಪಿಯನ್ಸ್ʼಗೆ ಕೊನೇ ಟೂರ್ನಿ!
Advertisement
Advertisement
ವಿಐಪಿ ಟಿಕೆಟ್‌ಗಳನ್ನು ಮಾರಾಟ ಮಾಡಿಕೊಂಡಿರುವ ನಖ್ವಿ ಅಭಿಮಾನಿಗಳೊಂದಿಗೆ ಕುಳಿತು ಸಾಮಾನ್ಯರಂತೆ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಟಿಕೆಟ್ ಮಾರಾಟ ಮಾಡಿದ ಹಣವನ್ನ ಕರಾಚಿ, ಲಾಹೋರ್ ಮತ್ತು ಪಾಕಿಸ್ತಾನದ ಇತರೇ ಕ್ರೀಡಾಂಗಣಗಳ ನವೀಕರಣಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Champions Trophy 2025 – ಚಾಂಪಿಯನ್ಸ್ ಟ್ರೋಫಿ ದಾಲ್ಮೀಯಾರ ಕನಸಿನ ಕೂಸು
Advertisement
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುತ್ತಿದೆ. ಇದರೊಂದಿಗೆ, ಸುಮಾರು 30 ವರ್ಷಗಳ ಬಳಿಕ ಪ್ರಮುಖ ಟೂರ್ನಿಯೊಂದಕ್ಕೆ ಪಾಕ್ ಆತಿಥ್ಯ ವಹಿಸಿದೆ. ಟೂರ್ನಿಯು ಫೆಬ್ರುವರಿ 19ರಂದು (ಇಂದಿನಿಂದ) ಆರಂಭವಾಗಲಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಕಿವೀಸ್ ಪಡೆಯು ಅತಿಥೇಯ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಇದನ್ನೂ ಓದಿ: Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?
ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಕ್ರೀಡಾಂಗಣಗಳು ಟೂರ್ನಿಯ ಆತಿಥ್ಯ ವಹಿಸಿವೆ. ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಭಾರತ ತನ್ನ ಪಾಲಿನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.