ಬೆಂಗಳೂರು: ಕಾಂಗ್ರೆಸ್ (Congress) ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ನಮ್ಮಲ್ಲಿ ನೊಣ ಹುಡುಕುತ್ತಿದ್ದಾರೆ. ಹೀಗೆ ತಪ್ಪು ಸುದ್ದಿ ಹೇಳಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಚಾಳಿ. ಕಾಂಗ್ರೆಸ್ ಸರ್ಕಾರ 100% ಅಕ್ರಮದ ಸರ್ಕಾರ. ಕೆಲಸವೇ ಮಾಡದೇ ಬಿಲ್ ಮಾಡಿಕೊಂಡಿರೋದು ಕಾಂಗ್ರೆಸ್ ಅವರು. ಕಾಂಗ್ರೆಸ್ ಸರ್ಕಾರ 100% ಅಕ್ರಮ ಸರ್ಕಾರ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ (Laxman Savadi) ಕಿಡಿಕಾರಿದರು.
Advertisement
ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಸದಸ್ಯರು, ಸಿದ್ದರಾಮಯ್ಯ ಕಾಲದ ಹಗರಣಗಳ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅಕ್ರಮಗಳ ಸರದಾರರು ಅಂತ ಕಿಡಿಕಾರಿದರು. ಕಾಂಗ್ರೆಸ್ ತಲೆ ಮಾರಿನಿಂದ ಭ್ರಷ್ಟಾಚಾರ ಮಾಡ್ತಿದೆ ಅಂತ ಘೋಷಣೆ ಕೂಗಿದರು. ರಿಡೂ, ಕೆಪಿಎಸ್‍ಸಿ (KPSC) ಹಗರಣ, ಇಂಧನ ಹಗರಣದ ಪಿತಾಮಹ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: PFI ನಾಯಕನ ಮನೆಯಲ್ಲಿ ಸಾವರ್ಕರ್ ಪುಸ್ತಕ – ಶಿವಮೊಗ್ಗದಲ್ಲಿ 19 ಲಕ್ಷ ಪತ್ತೆ
Advertisement
Advertisement
ಬಳಿಕ ಈ ಬಗ್ಗೆ ಮಾತನಾಡಿ ಲಕ್ಷ್ಮಣ ಸವದಿ, ಪೇ ಸಿಎಂ ಅಂತ ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಬೊಮ್ಮಾಯಿ 13 ತಿಂಗಳಿಂದ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅವರು ಸಿಎಂ, ಬಿಜೆಪಿ ಹೆಸರು ಕೆಡಿಸೋಕೆ ಅಪಪ್ರಚಾರ ಮಾಡ್ತಿದ್ದಾರೆ. ದಿಂಬು ಹಾಸಿಗೆಯಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ. ಕೆಲಸಕ್ಕೆ ಬಾರದವನು 40% ಅಂತ ಪತ್ರ ಬರೆಯುತ್ತಾನೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಭೇಟಿ ಆಗಿ ಅವರು ಹೇಳಿದಂತೆ 40% ಆರೋಪ ಕೆಂಪಣ್ಣ ಮಾಡ್ತಾರೆ. ಅವರ ಹತ್ತಿರ ದಾಖಲಾತಿ ಇದ್ದರೆ ಲೋಕಾಯುಕ್ತಕ್ಕೆ ಕೊಡಲಿ. ನ್ಯಾಯಾಲಯಕ್ಕೆ ಹೋಗಲಿ. ಅನವಶ್ಯಕವಾಗಿ ಉತ್ತಮ ಸಿಎಂ ಹೆಸರು ಕೆಡಿಸೋಕೆ ಕಾಂಗ್ರೆಸ್ ಈ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಷ್ಟ್ರೀಯ ಮೇಯರ್ ಸಮ್ಮೇಳನ – ಉಡುಪಿ ನಗರಸಭೆಯನ್ನು ಹಾಡಿಹೊಗಳಿದ ಮೋದಿ
Advertisement
ಸಿಎಂ ಅವರಿಗೆ ಕಪ್ಪು ಮಸಿ ಬಳೆಯಲು ಹೋಗಿದ್ದಾರೆ. ಅದಕ್ಕೆ ಜನ ಉತ್ತರ ಕೊಡ್ತಾರೆ. ರಮೇಶ್ ಕುಮಾರ್ 3 ತಲೆಮಾರಿಗೆ ಆಗುವಷ್ಟು ಮಾಡಿದ್ದೇವೆ ಅಂತ ಹೇಳಿದ್ದರು. ಕಾಂಗ್ರೆಸ್ ಅಕ್ರಮ ಹೇಳಿದ್ದು ಅವರ ಪಕ್ಷದವರೇ, ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಅವ್ರ ಆಸ್ತಿ ನೋಡಿದ್ರೆ ಶಾಕ್ ಆಗುತ್ತೆ. ಕಬ್ಬು ಅರಿಲಿಲ್ಲ, ಒಕ್ಕಲು ತನ ಮಾಡಿಲ್ಲ. ಅಕ್ರಮ ಮಾಡಿ ಹಣ ಸಂಪಾದನೆ ಮಾಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಬುಕ್‍ಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡ್ತೀವಿ ಅಂತ ತಿಳಿಸಿದರು.
ಬಳಿಕ ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ನಮ್ಮ ಸಿಎಂ ವಿರುದ್ದ ಪೇ ಸಿಎಂ ಅಂತ ಅಭಿಯಾನ ಕಾಂಗ್ರೆಸ್ ಮಾಡ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಇದೊಂದು ಭ್ರಷ್ಟ ನಡೆ. ನಮ್ಮ ಸರ್ಕಾರ ಮತ್ತು ಸಿಎಂಗೆ ಕೆಟ್ಟ ಹೆಸರು ತರಲು ಹೀಗೆ ಕಾಂಗ್ರೆಸ್‍ನವರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ, ಕತ್ತೆ ಬಿದ್ದಿದೆ. ಕ್ಲೀನ್ ಆಗಿರೋ ಬಿಜೆಪಿ ಬಗ್ಗೆ ಅವ್ರು ಮಾತಾಡ್ತಿದ್ದಾರೆ. ಇದಕ್ಕೆ ನಮ್ಮ ಪ್ರತಿಭಟನೆ ಅಂತ ನುಡಿದರು.