ನವದೆಹಲಿ: ಬುಧವಾರ ಒಂದೇ ದಿನ 22 ಕೊರೊನಾ ಕೇಸ್ ಪತ್ತೆಯಾಗಿದ್ದು, ಭಾರತದಲ್ಲಿ ಈಗ 29 ಮಂದಿಗೆ ಕೊರೊನಾ ಬಂದಿದೆ.
ಹೊಸದಾಗಿ ಪೇಟಿಎಂ ಕಂಪನಿಯ ಉದ್ಯೋಗಿ ರಕ್ತದ ಮಾದರಿಯ ಪರೀಕ್ಷೆ ನಡೆಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಪೇಟಿಎಂ ಕಂಪನಿ ಮುಚ್ಚಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.
Advertisement
ಕೊರೊನಾ ಅತಿ ಹೆಚ್ಚು ವ್ಯಾಪಿಸುತ್ತಿರುವ ಇಟಲಿಯಿಂದ ಪೇಟಿಎಂ ಉದ್ಯೋಗಿ ಮರಳಿದ್ದರು. ಇಟಲಿಯ 16 ಮಂದಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಚಾಲಕನಿಗೆ ಸಹ ಈಗ ಕೊರೊನಾ ಬಂದಿದೆ.
Advertisement
Advertisement
ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈಗ ವಿದೇಶದಿಂದ ಆಗಮಿಸಿದ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದೆ. ಈ ಮೊದಲು ಕೇವಲ 10 ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತಿತ್ತು.
Advertisement
ಜರ್ಮನಿಯ ಪ್ರಸಿದ್ಧ ಲುಫ್ಥಾನ್ಸ ಏರ್‍ಲೈನ್ಸ್ ತನ್ನ 750 ವಿಮಾನಗಳ ಪೈಕಿ 125 ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಇಟಲಿಯಲ್ಲಿ 3,089 ಕೊರೊನಾ ಪ್ರಕರಣ ಪತ್ತೆಯಾಗಿದ್ದು 107 ಮಂದಿ ಮೃತಪಟ್ಟಿದ್ದಾರೆ.
Dr Vivek Kashyap, superintendent, RIMS hospital (Ranchi, Jharkhand): But we have kept them under observation as the protocol permits. If they are tested negative they will be sent to home isolation. #coronavirus https://t.co/lq3NUvfmwD
— ANI (@ANI) March 4, 2020