ಮಂಡ್ಯ: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ಭಾರೀ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಡುವಿನ ಕಾದಾಟ ತಾರಕ್ಕೇರಿದೆ. ಈ ನಡುವೆ ಮಂಡ್ಯದ ರೈತರು ಪೇ ಫಾರ್ಮಾರ್ (Pay Farmer) ಅಭಿಯಾನ ಆರಂಭಿಸಿದ್ದು, ಎರಡು ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.
Advertisement
ಹೌದು, ರಾಜ್ಯದ ರೈತ ಸಂಘದವರು (Farmers Association)ಪೇಟಿಎಂ (Paytm)ಕ್ಯೂಆರ್ ಕೋಡ್‍ನಂತೆ ಪೇ ಫಾರ್ಮರ್ ಕ್ಯೂಆರ್ ಕೋಡ್ ಪೋಸ್ಟರ್ ರಿಲೀಸ್ ಮಾಡಿದ್ದು, ತಾವು ಬೆಳೆದ ಬೆಳೆಗಳಿಗೆ ತಕ್ಕ ಬೆಲೆ ನೀಡುವಂತೆ ಆಗ್ರಹಿದ್ದಾರೆ. ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ. ನೀವು ಯಾರೇ ಅಧಿಕಾರಕ್ಕೆ ಬಂದರೂ, ರೈತರ ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರಕ್ಕೆರಲು ಸರ್ಕಸ್ ಮಾಡುತ್ತಿದ್ದೀರಾ. ಇನ್ನೂ ಕೆಲವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದೀರಾ. ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ ನಡೆಸುತ್ತಿದ್ದಾರೆ. ಮೊದಲು ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ
Advertisement
Advertisement
ತಾವು ಬೆಳೆದ ಒಂದು ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡುವಂತೆ ಮಂಡ್ಯದ (Mandya) ರೈತರು ಪೇ ಫಾರ್ಮರ್ ಕ್ಯೂಆರ್ ಕೋಡ್ ಪೋಸ್ಟರ್ ರಿಲೀಸ್ ಮಾಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಫೇಸ್‍ಬುಕ್ ಪೇಜ್‍ನಲ್ಲೂ ಪೋಸ್ಟರ್ ಹಾಕಲಾಗಿದೆ. ಜೊತೆಗೆ ಆಗ್ರ್ಯಾನಿಕ್ ಮಂಡ್ಯ ಸಂಸ್ಥೆಯ ಸಂಸ್ಥಾಪಕ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಸಿ. ಮಂಧುಚಂದನ್ ಕೂಡ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈ ಪೋಸ್ಟರ್ ಅನ್ನು ಶೇರ್ ಮಾಡಿಕೊಳ್ಳುವ ಮೂಲಕ ಸರ್ಕಾರ ಹಾಗೂ ಕಾಂಗ್ರೆಸ್‍ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಪಿಐ ಇಲ್ಲಾಳ್ ಮೇಲೆ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಸಂಸದ ಜಾಧವ್ ಭೇಟಿ